21.7 C
Bengaluru
Tuesday, January 21, 2020

ಎಪಿಎಂಸಿಗೆ ಪ್ರತಿ ತಿಂಗಳು ಲಕ್ಷ ರೂ. ನಷ್ಟ!

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ಶಿರಸಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಗುತ್ತಿಗೆ ನಿಯಮಗಳನ್ನು ಮೀರಿ ಹೆಚ್ಚುವರಿ ಮೊತ್ತದ ಕಾಮಗಾರಿ ಕೈಗೊಂಡಿದ್ದಲ್ಲದೆ, ನಿರ್ವಣಗೊಂಡ ಗೋದಾಮನ್ನು ಹಸ್ತಾಂತರಿಸದ ಕಾರಣ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿರುವ ಘಟನೆ ರಾಜ್ಯದ ಪ್ರತಿಷ್ಠಿತ ಶಿರಸಿ ಎಪಿಎಂಸಿಯಲ್ಲಿ ಜರುಗಿದೆ.

ಇಲ್ಲಿನ ಎಪಿಎಂಸಿ ಆವರಣದೊಳಗೆ ಗೋದಾಮುಗಳ ಕೊರತೆ ನೀಗಿಸುವ ದೃಷ್ಟಿಯಿಂದ ಎಪಿಎಂಸಿ ಅಭಿವೃದ್ಧಿ ಅನುದಾನದಡಿ 1.39 ಕೋಟಿ ರೂ.ಗಳ ವೆಚ್ಚದಲ್ಲಿ 5 ಸಾವಿರ ಚದರ ಅಡಿಗೂ ಹೆಚ್ಚಿನ ಹೊಸ ಗೋದಾಮು ಸಮುಚ್ಚಯವನ್ನು ನಿರ್ವಿುಸಲು ತೀರ್ವನಿಸಿ ಕಳೆದೊಂದು ವರ್ಷದ ಹಿಂದೆ ಇಡೀ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಎಪಿಎಂಸಿಯಿಂದ ನಿರ್ಧರಿತ ಮೊತ್ತವಾದ 1.39 ಕೋಟಿ ರೂ.ಗಳ ಕಾಮಗಾರಿ ಬದಲಿಗೆ ವಾಸ್ತವದಲ್ಲಿ 2 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತ ವೆಚ್ಚವಾಗಿದೆ. ಹೆಚ್ಚುವರಿಯಾಗಿ 61 ಲಕ್ಷ ರೂ. ವೆಚ್ಚವಾಗಿರುವುದು ಇದೀಗ ಕಟ್ಟಡ ಹಸ್ತಾಂತರಕ್ಕೆ ತೊಡಕಾಗಿದೆ. ಗುತ್ತಿಗೆ ಕಾಮಗಾರಿಯಲ್ಲಿ ಇಂಜಿನಿಯರ್​ಗಳ ಹಸ್ತಕ್ಷೇಪ ಹಾಗೂ ಕಾಮಗಾರಿ ಆದೇಶ ಪತ್ರವಿಲ್ಲದೆ ಹೆಚ್ಚುವರಿ ಕಾಮಗಾರಿ ನಡೆಸಿದ ಗುತ್ತಿಗೆದಾರನಿಂದ ಈ ಸಮಸ್ಯೆ ಉದ್ಭವಿಸಿದೆ.

ಕಟ್ಟಡದ ವಿಸ್ತೀರ್ಣ, ಅದಕ್ಕೆ ಬಳಸುವ ಸಾಮಗ್ರಿಗಳು, ಸಿಮೆಂಟ್, ಕಬ್ಬಿಣ ಇನ್ನಿತರ ವೆಚ್ಚಗಳ ಪಟ್ಟಿ ಆಧರಿಸಿಯೇ ಗುತ್ತಿಗೆ ನೀಡಲಾಗುತ್ತದೆ. ಹೆಚ್ಚುವರಿ ಕಾಮಗಾರಿ ನಡೆಸಲು ಹೊಸದಾಗಿ ಕಾಮಗಾರಿ ಆದೇಶ ಪ್ರತಿ ಜಾರಿಯಾಗಬೇಕು. ಆದರೆ, ಇಲ್ಲಿ ಯಾವುದೇ ಹೊಸ ಕಾಮಗಾರಿ ಆದೇಶ ಪ್ರತಿ ನೀಡದೆ 61 ಲಕ್ಷ ರೂ.ಗಳ ಹೆಚ್ಚುವರಿ ಕಾಮಗಾರಿ ನಡೆಸಲಾಗಿದೆ. ಇದು ಸಮಿತಿಯ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಮೇಲೆ ಅನುಮಾನಕ್ಕೆ ಕಾರಣವಾಗಿದೆ. ಕಟ್ಟಡದ ಸ್ಲಾ್ಯಬ್ ಅಳತೆ ಹೆಚ್ಚಳ, ಸಿಮೆಂಟ್ ಬಳಕೆಯಲ್ಲಿ ಹೆಚ್ಚಳ, ಮೇಲೆ ಕಬ್ಬಿಣದ ಶೀಟ್ ಅಳವಡಿಕೆ, ಹೆಚ್ಚುವರಿ ಕಬ್ಬಿಣ ಬಳಕೆ, ಒಳಾಂಗಣ ಸೌಂದರ್ಯ ಸೇರಿದಂತೆ ಹಲವು ಅನಗತ್ಯ ಅಂಶಗಳನ್ನು ಸೃಷ್ಟಿಸಿ ಹೆಚ್ಚುವರಿ ಕಾಮಗಾರಿ ಮಾಡಿಸಲಾಗಿದೆ. ಇಂಜಿನಿಯರ್​ಗಳು ನೀಡುವ ಕಾರ್ಯಾದೇಶವನ್ನು ಸ್ವತಃ ಅವರೇ ಉಲ್ಲಂಘಿಸಿದ್ದು ಸಮಿತಿ ಪ್ರಮುಖರಿಗೂ ಮುಜಗರಕ್ಕೆ ಕಾರಣವಾಗಿದೆ.

12 ಲಕ್ಷ ರೂಪಾಯಿ ನಷ್ಟ: ಗೋದಾಮು ಸಮುಚ್ಚಯವನ್ನು ಬಾಡಿಗೆ ನೀಡಿದರೆ ತಿಂಗಳಿಗೆ 1 ಲಕ್ಷ ರೂಪಾಯಿಗೂ ಅಧಿಕ ಬಾಡಿಗೆ ಮೊತ್ತ ಸಮಿತಿಗೆ ಸಂದಾಯವಾಗುತ್ತದೆ. ಆದರೆ, ಕಾಮಗಾರಿ ಮುಗಿದು 12 ತಿಂಗಳು ಕಳೆದರೂ ಈವರೆಗೆ ಸಮಿತಿ ವ್ಯಾಪ್ತಿಗೆ ಕಟ್ಟಡ ನೀಡಿಲ್ಲ. ಇದರಿಂದ ವಾರ್ಷಿಕವಾಗಿ 12 ಲಕ್ಷ ರೂ.ಗಳಿಗೂ ಅಧಿಕ ಆದಾಯ ನಷ್ಟವಾಗಿದೆ. ಜತೆ, ಅನಧಿಕೃತವಾಗಿ 61 ಲಕ್ಷ ರೂ.ಗಳನ್ನು ಹೆಚ್ಚುವರಿ ಕಾಮಗಾರಿ ಮಾಡಿಸಿದ್ದಕ್ಕೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಇದೀಗ ತಲೆದೋರಿದೆ.

ಗುತ್ತಿಗೆದಾರರು ಹೇಳೊದೇನು?: ನಿಗದಿತ ಅನುದಾನದಲ್ಲಿ ಕೆಲಸ ಮಾಡುತ್ತಿರುವ ವೇಳೆ ಎಪಿಎಂಸಿ ಅಧಿಕಾರಿಗಳ ಒತ್ತಡ ಹಾಗೂ ಮೌಖಿಕ ಹೇಳಿಕೆ ಮೇರೆಗೆ ಹೆಚ್ಚುವರಿ ಕಾಮಗಾರಿ ಮಾಡಲಾಗಿದೆ. ಅರ್ಧ ಕಾಮಗಾರಿ ಮುಗಿದಾಗ ಒತ್ತಡ ಹಾಕಿದ ಕಾರಣ ಕಾರ್ಯಾದೇಶ ಇಲ್ಲದೇ ಕಾಮಗಾರಿ ಮಾಡುವ ಅನಿವಾರ್ಯತೆಯಿಂದ ಸುಮಾರು 61 ಲಕ್ಷ ರೂ. ಹೆಚ್ಚುವರಿ ಕಾಮಗಾರಿಯಾಗಿದೆ. ಈ ಮೊತ್ತವನ್ನು ಎಪಿಎಂಸಿ ನೀಡಿದರೆ ಕಟ್ಟಡ ಹಸ್ತಾಂತರ ಮಾಡಲಾಗುವುದು ಎಂಬುದು ಗುತ್ತಿಗೆದಾರ ಎಂ.ಬಿ.ಬೈಂದೂರ್ ಅಭಿಪ್ರಾಯವಾಗಿದೆ.

ನೂತನವಾಗಿ ನಿರ್ವಿುಸಿದ ಗೋದಾಮು ಸಮುಚ್ಚಯವನ್ನು ವರ್ಷ ಕಳೆದರೂ ಎಪಿಎಂಸಿಗೆ ಹಸ್ತಾಂತರಿಸದ ಗುತ್ತಿಗೆದಾರರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಸೂಚಿಸಲಾಗಿದೆ. – ವಿಶ್ವನಾಥ ಹೆಗಡೆ ಎಪಿಎಂಸಿ ಅಧ್ಯಕ್ಷ

ಗೋದಾಮು ಸಮುಚ್ಚಯ ನಿರ್ವಣದಲ್ಲಿ ಸಮಿತಿಯ ಇಂಜಿನಿಯರ್​ಗಳ ಹಸ್ತಕ್ಷೇಪ ಕಾಣುತ್ತಿದೆ. ಯಾವ ಕಾರಣಕ್ಕೆ ಹೆಚ್ಚುವರಿ ಕೆಲಸ ಮಾಡಿಸಿದ್ದಾರೆ? ಯಾವ ಕಾರಣಕ್ಕೆ ಗುತ್ತಿಗೆದಾರ ಹೆಚ್ಚುವರಿ ಕಾಮಗಾರಿ ಮಾಡಿದ್ದಾನೆ ಎಂಬುದನ್ನು ತಿಳಿಯಲಾಗುವುದು. ಅಲ್ಲದೇ, ಹಸ್ತಾಂತರ ಮಾಡಿಕೊಳ್ಳುವಲ್ಲಿ ಉದ್ಭವಿಸಿದ ಸಮಸ್ಯೆಯನ್ನು ಸಂಬಂಧಿಸಿದ ಇಂಜಿನಿಯರ್​ಗಳ ಬಳಿ ರ್ಚಚಿಸಿ ಶೀಘ್ರದಲ್ಲಿ ಸಮುಚ್ಚಯವನ್ನು ಹಸ್ತಾಂತರಿಸಿಕೊಳ್ಳುತ್ತೇವೆ. – ವಿಜಯಲಕ್ಷ್ಮೀ ಎಪಿಎಂಸಿ ಕಾರ್ಯದರ್ಶಿ

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...