More

    ಎನ್.ಮಹೇಶ್ ಬಿರುಸಿನ ಮತಪ್ರಚಾರ

    • ಕೊಳ್ಳೇಗಾಲ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಭಾನುವಾರ ತಾಲೂಕಿನ ಹರಳೆ, ದಾಸನಪುರ, ಹೊಸ ಹಂಪಾಪುರ, ಮುಳ್ಳೂರು, ಹಳೇ ಅಣಗಳ್ಳಿ, ಉತ್ತಂಬಳ್ಳಿ, ಕುಣಗಳ್ಳಿ, ಸೂರಪುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಬಿರುಸಿನ ಮತಯಾಚನೆ ಮಾಡಿದರು. ಮಾಜಿ ಶಾಸಕ ಎಸ್.ಬಾಲರಾಜ್, ಚಿತ್ರ ನಿರ್ದೇಶಕ ಮಹೇಂದರ್ ಸಾಥ್ ನೀಡಿದರು.
    • ಹೊಸ ಹಂಪಾಪುರ ಗ್ರಾಮದ ನಾಯಕ ಸಮುದಾಯ ಚಾವಡಿಯಲ್ಲಿ ಮಾತನಾಡಿದ ಶಾಸಕ ಎನ್.ಮಹೇಶ್, ರಾಜ್ಯ ಬಿಜೆಪಿ ಸರ್ಕಾರದ ಋಣವನ್ನು ತೀರಿಸುವ ಸಂದರ್ಭ ಇದೀಗ ಬಂದಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಎಸ್ಸಿ-ಎಸ್ಟಿಗಳ ಮೀಸಲಾತಿಯನ್ನು ಹೆಚ್ಚಿಸಿದೆ. ಶೇ.15ರಿಂದ 17 ಎಸ್ಸಿ ಮೀಸಲಾತಿ, ಶೇ.3ರಿಂದ 7ಕ್ಕೆ ಎಸ್ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿದೆ. ಈ ಋಣ ನಮ್ಮ ಮೇಲಿದ್ದು, ಮತದಾರರು ಮತದ ಮೂಲಕ ಋಣವನ್ನು ತೀರಿಸಬೇಕಿದೆ ಎಂದು ಮನವಿ ಮಾಡಿದರು.

    • 60 ವರ್ಷದಿಂದ ಕಾಂಗ್ರೆಸ್ ನಮ್ಮನ್ನು ಆಳ್ವಿಕೆ ಮಾಡಿದೆ. ಆದರೆ, ಅವರು ಈ ಕೆಲಸ ಮಾಡಲಿಲ್ಲ. ಆದರೆ ಬಿಜೆಪಿ ಮಾಡಿದೆ. ನಮ್ಮ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಅನುಕೂಲವಾಗಲಿದೆ. ಮತದಾರ ಪ್ರಭುಗಳು ಇವೆಲ್ಲವನ್ನೂ ಗಮನದಲ್ಲಿಟ್ಟು ಕೊಂಡು ಮತ ನೀಡಬೇಕು ಎಂದರು.

    • ವಿಧಾನಸಭೆಯಲ್ಲಿ ಕೊಳ್ಳೇಗಾಲದ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ಜನಪರವಾದ ಶಾಸನಗಳು ಜಾರಿಯಾಗಲು ಧ್ವನಿ ಎತ್ತಿದ್ದೇನೆ. ಇವೆಲ್ಲವೂ ಶಾಸನ ರೂಪಕ್ಕೆ ಬಂದಾಗ ನಿಮಗೆ ತಿಳಿಯಲಿದೆ. ನಿರೀಕ್ಷೆಯಂತೆ 5 ವರ್ಷದ ಅವಧಿಯಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ಆದರೂ, ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನೊಂದು ಬಾರಿ ಅವಕಾಶ ಕೊಟ್ಟರೆ ಉಳಿದಿರುವ ಎಲ್ಲ ಕೆಲಸವನ್ನೂ ಪೂರ್ಣಗೊಳಿಸುತ್ತೇನೆ ಎಂದರು.

    • ಚಿತ್ರ ನಿರ್ದೇಶಕ ಎಸ್.ಮಹೇಂದರ್ ಮಾತನಾಡಿ, ಮೊದಲ ಬಾರಿ ಶಾಸಕರಾಗಿ ವಿಧಾನಸೌಧದಲ್ಲಿ ಎಸ್ಸಿ-ಎಸ್ಟಿ ಪರವಾಗಿ ಹಾಗೂ ಹಿಂದುಳಿದವರ ಎಲ್ಲರ ಪರವಾಗಿ ಧ್ವನಿ ಎತ್ತಿದವರು ಮಹೇಶ್ ಅಣ್ಣ. ಮತದಾರರು ಪ್ರಜ್ಞಾವಂತರಿದ್ದೀರಿ. ನಿಮಗೆ ಎಲ್ಲವೂ ತಿಳಿದಿದೆ. ಇದನೆಲ್ಲ ಗಮನದಲ್ಲಿಟ್ಟು ಸುಳ್ಳು ಹಾಗೂ ಆಮಿಷಗಳಿಗೆ ಬಲಿಯಾಗದೆ ಎನ್.ಮಹೇಶ್ ಅವರನ್ನು ಆರಿಸಬೇಕು ಎಂದರು.

    • ವಿಧಾನಸೌಧದಲ್ಲಿ ನಮ್ಮ ಪರವಾಗಿ ಮಾತನಾಡುವ ಧ್ವನಿ ಉಳಿಯಬೇಕಿದೆ. ಅದಕ್ಕಾಗಿ ಮಹೇಶಣ್ಣರಿಗೆ ಕೊಳ್ಳೇಗಾಲ ಕ್ಷೇತ್ರದ ಪ್ರಬುದ್ಧ ಮತದಾರರರು ಮತ್ತೊಂದು ಅವಕಾಶ ನೀಡಬೇಕು. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಿರೀಕ್ಷೆಯಂತೆ ಮತಷ್ಟೂ ಕೆಲಸ ಮಾಡಬೇಕೆಂದು ಮತವನ್ನು ಕೈಮುಗಿದು ಕೇಳುತ್ತಿದ್ದಾರೆ. ಆದ್ದರಿಂದ ಮತದಾರರು ಮತ್ತೊಮ್ಮೆ ಕೈ ಹಿಡಿಯಬೇಕೆಂದು ಮನವಿ ಮಾಡಿದರು.

    • ಗ್ರಾಮಾಂತರ ನಗರ ಮಂಡಲ ಅಧ್ಯಕ್ಷ ಲೋಕೇಶ್, ನಗರಸಭೆ ಸದಸ್ಯೆ ಕವಿತಾ, ತಾ.ಪಂ ಸದಸ್ಯ ಮರಿಸ್ವಾಮಿ, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಗರಪುರ ರೇವಣ್ಣ, ಎಸ್ಸಿ ಮೋರ್ಚಾ ಅಧ್ಯಕ್ಷ ಎಸ್.ಸಿದ್ದಪ್ಪಾಜಿ, ಖಜಾಂಚಿ ಜಯಶಂಕರ್, ಮುಖಂಡ ಜಾಕೀ ಸುರೇಶ್, ರೋಹಿತ್, ವಕೀಲ ರಾಜೇಂದ್ರ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts