ಎನ್.ಆರ್.ಪುರ ಪಪಂನಿಂದ 35 ಲಕ್ಷ ರೂ. ಉಳಿತಾಯ ಬಜೆಟ್

ಎನ್.ಆರ್.ಪುರ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್.ರಾಜಶೇಖರ್ ಶನಿವಾರ ಮಂಡಿಸಿದ 2019-20ನೇ ಸಾಲಿನ ಬಜೆಟ್​ಯುಲ್ಲಿ 10.79 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, 35 ಲಕ್ಷ ರೂ. ಉಳಿತಾಯವಾಗಲಿದೆ ಎಂದು ತಿಳಿಸಿದರು.

2019-20ನೇ ಸಾಲಿನ ಪ್ರಾರಂಭಿಕ ಶಿಲ್ಕು 1.8 ಕೋಟಿ ರೂ. ಇದ್ದು, 11.53 ಕೋಟಿ ರೂ. ವೆಚ್ಚ ತೋರಿಸಿದ್ದಾರೆ. 2019ನೇ ಸಾಲಿನಲ್ಲಿ ವಾಣಿಜ್ಯ ಮಳಿಗೆಗಳಿಂದ ಬಾಡಿಗೆ ರೂಪದಲ್ಲಿ 45 ಲಕ್ಷ ರೂ., ಮಿಸಲೇನಿಯಸ್​ನಿಂದ 17.30 ಲಕ್ಷ ರೂ., ಆಸ್ತಿ ತೆರಿಗೆಯಿಂದ 17.30 ಲಕ್ಷ ರೂ., ನಿವೇಶನ ಮಾರಾಟದಿಂದ 10 ಲಕ್ಷ ರೂ., ನೀರಿನ ತೆರಿಗೆಯಿಂದ 15.70 ಲಕ್ಷ ರೂ. ನಿರೀಕ್ಷಿಸಲಾಗಿದೆ ಎಂದರು.

ಸರ್ಕಾರದಿಂದ ಎಸ್​ಎಫ್​ಸಿ ಅನುದಾನದಿಂದ 50 ಲಕ್ಷ ರೂ., ಎಸ್​ಎಫ್​ಸಿ ವಿಶೇಷ ಅನುದಾನದಿಂದ 200 ಲಕ್ಷ ರೂ., 14ನೇ ಹಣಕಾಸು ಯೋಜನೆ ಅನುದಾನದಿಂದ 50 ಲಕ್ಷ ರೂ., ಸಲ್ಮ್ ಯೋಜನೆಯ ಅನುದಾನದಿಂದ 3 ಲಕ್ಷ ರೂ., ಆಶ್ರಯ ಯೋಜನೆ ಅನುದಾನದಿಂದ 5 ಲಕ್ಷ ರೂ., ಎಸ್​ಡಬ್ಲ್ಯುಎಂ ಮತ್ತು ಕುಡಿಯುವ ನೀರಿನ ಯೋಜನೆಯಿಂದ 35 ಲಕ್ಷ ರೂ., ಎಂಎಲ್​ಎ, ಎಂಎಲ್​ಸಿ ಹಾಗೂ ಎಂಪಿ ವಿಶೇಷ ಅನುದಾನದಿಂದ 5 ಲಕ್ಷ ರೂ., ವೇತನ ಅನುದಾನದಿಂದ 85 ಲಕ್ಷ ರೂ., ವಿದ್ಯುತ್ ಅನುದಾನದಿಂದ 80 ಲಕ್ಷ ರೂ., ಬರಪರಿಹಾರ ಅನುದಾನದಿಂದ 60 ಲಕ್ಷ ರೂ. ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.