ಎನ್​ಸಿಐಬಿ ಸೋಗಿನಲ್ಲಿದ್ದ 8 ಮಂದಿ ಬಂಧನ

ಮಂಗಳೂರು: ಕೇಂದ್ರ ಸರ್ಕಾರದ ಎನ್​ಸಿಐಬಿ ನಿರ್ದೇಶಕ ಎಂಬ ಸೋಗು ಹಾಕಿಕೊಂಡು ಮಂಗಳೂರಿನಲ್ಲಿ ಹಣಸುಲಿಗೆ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಟಿ. ಸ್ಯಾಮ್ ಪೀಟರ್(53), ಮಡಿಕೇರಿಯ ಟಿ.ಕೆ.ಬೋಪಣ್ಣ (33), ಬೆಂಗಳೂರಿನ ಮದನ್(41), ಸುನೀಲ್ ರಾಜು(35), ಕೋದಂಡರಾಮ (39), ವಿರಾಜಪೇಟೆಯ ಚಿನ್ನಪ್ಪ(38), ಮಂಗಳೂರಿನ ಜಿ.ಮೊಯಿದ್ದಿನ್(70) ಮತು ಎಸ್.ಎ.ಕೆ.ಅಬ್ದುಲ್ ಲತೀಫ್(59) ಬಂಧಿತರು. ಆರೋಪಿಗಳಿಂದ ರಿವಾಲ್ವರ್, ಏರ್​ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ತಿಳಿಸಿದ್ದಾರೆ.

ಆರೋಪಿಗಳು ಪಂಪ್​ವೆಲ್ ಬಳಿ ಲಾಡ್ಜ್​ನಲ್ಲಿ ಎರಡು ದಿನಗಳಿಂದ ತಂಗಿದ್ದು, ನ್ಯಾಷನಲ್ ಕ್ರೖೆಂ ಇನ್ವೆಸ್ಟಿಗೇಶನ್ ಬ್ಯೂರೋ ಲಾಂಛನ ಹೊಂದಿದ ನಂಬರ್​ಪ್ಲೇಟ್ ಇಲ್ಲದ ಟಿಯುವಿ ವಾಹನದಲ್ಲಿ ತಿರುಗುತ್ತಿದ್ದರು. ಉಗ್ರದಾಳಿಯ ಹೈಅಲರ್ಟ್ ರಾಜ್ಯಾದ್ಯಂತ ಘೊಷಣೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರಿನಲ್ಲೂ ಪೊಲೀಸರು ತಪಾಸಣೆ ನಡೆಸಿದ ವೇಳೆ ವಾಹನ ಪತ್ತೆಯಾಗಿದ್ದು, ನಂತರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು.

Leave a Reply

Your email address will not be published. Required fields are marked *