ಎನ್​ಡಬ್ಲ್ಯುಕೆಆರ್​ಟಿಸಿ ನೌಕರರಿಂದ ಪತ್ರ ಚಳವಳಿ

ವಿಜಯವಾಣಿ ಸುದ್ದಿಜಾಲ ಕಾರವಾರ

ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಎನ್​ಡಬ್ಲ್ಯುಕೆಆರ್​ಟಿಸಿ ನೌಕರರು ಸೋಮವಾರ ಪತ್ರ ಚಳವಳಿ ನಡೆಸಿದರು.

ಕೆಎಸ್​ಆರ್​ಟಿಸಿ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆಯ ಶ್ರೀಧರ ಎನ್. ಮರಾಠೆ ನೇತೃತ್ವದಲ್ಲಿ ಬಸ್ ನಿರ್ವಾಹಕರು, ಚಾಲಕರು ಹಾಗೂ ಇತರ ಸಿಬ್ಬಂದಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರಿಗೆ ಪತ್ರವನ್ನು ಬರೆದು ರವಾನಿಸಿದ ಅವರು ಬಸ್ ನಿಲ್ದಾಣದಲ್ಲಿ ಮತ ಪ್ರದರ್ಶನ ನಡೆಸಿದರು.

ಸರ್ಕಾರದ ಕೆಲಸವನ್ನು ಶಿರಸಾವಹಿಸಿ ನಡೆಸುತ್ತಿರುವ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿಲ್ಲ. ಸರ್ಕಾರಿ ನೌಕರರಿಗಿಂತ ಶೇ. 40 ರಷ್ಟು ವೇತನ ಕಡಿಮೆ ಇದೆ. ಅವರಿಗೆ ಸಿಗುವ ಪಿಂಚಣಿ ಸೇರಿ ಹಲವು ಸೌಲಭ್ಯಗಳು ಸಾರಿಗೆ ಸಂಸ್ಥೆ ನೌಕರರಿಗೆ ದೊರೆಯುತ್ತಿಲ್ಲ.

ನಮ್ಮನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸಿ ಎಂದು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಶಾಸಕರು, ವಿಧಾನಪರಿಷತ್ ಸದಸ್ಯರಿಗೂ ಪತ್ರ ರವಾನಿಸಿದ್ದೇವೆ. ನೆರೆಯ

ಆಂಧ್ರಪ್ರದೇಶ ರಾಜ್ಯದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿರುವುದು ನಮ್ಮ ಕನಸು ಚಿಗುರುವಂತೆ ಮಾಡಿದೆ ಎಂದು ಪತ್ರದಲ್ಲಿ ನೌಕರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *