ಎನ್ಎಸ್ಎಸ್ನಿಂದ ಸೇವಾ ಮನೋಭಾವ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್
ಸಮುದಾಯದೊಂದಿಗೆ ಸೇರಲು ಮಕ್ಕಳಿಗೆ ಎನ್ಎಸ್ಎಸ್ ಶಿಬಿರಗಳು ಸೇವಾಭಾವನೆಯನ್ನು ಮೂಡಿಸಲು ಸಹಕಾರಿಯಾಗಿವೆ ಎಂದು ಪ್ರಾಚಾರ್ಯ ಡಾ. ಗೀರಿಶ ಕಠೋಳ್ಳಿ ಹೇಳಿದರು.

ಪಟ್ಟಣದ ರಾಮಚಂದ್ರ ವೀರಪ್ಪ ಮಹಿಳಾ ಮಾಹಾವಿದ್ಯಾಲಯದಿಂದ ಬಸವತೀರ್ಥದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ತಮ್ಮ ವಿಶಿಷ್ಟ ಶಕ್ತಿಯಿಂದ ರಾಷ್ಟ್ರೀಯ ನಿರ್ಮಾಣ ಕಾರ್ಯದಲ್ಲಿ ತೋಡಗಿಸಿಕೊಳ್ಳಬೇಕು ದೇಶದಲ್ಲೇ ಮಧ್ಯಪ್ರದೇಶದ ಇಂದೋರ ಜಿಲ್ಲೆ ಸ್ವಚ್ವತೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ತಿಳಿಸಿದರು.

ಆಡಳಿತ ಅಧಿಕಾರಿ ಭೀಮರಾವ ಕುಲಕರ್ಣಿ ಮಾತನಾಡಿ, ಶಿಬಿರಗಳಿಂದ ಮಕ್ಕಳಲ್ಲಿ ವಾಸ್ಥವಿಕತೆ ಅರಿವು ಮೂಡಿಸಿ ವೈಯಕ್ತಿಕ ಮತ್ತು ರಾಷ್ಟ್ರ ನಿರ್ಮಾಣ ಮಾಡುವುದಾಗಿದೆ. ನೀರು ಮತ್ತು ಪರಿಸರ ಸ್ವಚ್ವವಾಗಿಡುವುದರೋಂದಿಗೆ ರಾಷ್ಟ್ರದ ಬದಲಾವಣೆಗೆ ಕಾರ್ಯನ್ಮೂಖವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಮಾಣಿಕಪ್ಪ ಗಾದಾ ಮಾತನಾಡಿ, ನಮ್ಮಲ್ಲಿ ಜೀವನ ಶೈಲಿ ಬದಲಾಗುತ್ತಿದೆ ಶ್ರಮವಿಲ್ಲದ ಬದುಕು, ಹೃದಯ ರೋಗಗಳು, ಸಕ್ಕರೆ ಕಾಯಿಲೆ, ರಕ್ತ ಏರೋತ್ತಡಗಳಂತಹ ರೋಗಗಳನ್ನೋಳಗೊಂಡಿ ಹತ್ತು ಹದಿನೈದು ವರ್ಷಗಳಲ್ಲಿ ನಮ್ಮ ದೇಶ ಇವುಗಳ ರಾಜಧಾನಿಯಾಗುವುದರಲ್ಲಿ ಸಂದೇಹವಿಲ್ಲ ಪಶು ಪಕ್ಷಿಗಳ ಸಂತತಿ ಗಣನಿಯವಾಗಿ ಕುಂಟಿತಗೊಳ್ಳುತ್ತಿದೆ. ಕಾರಣ ಪರಿಸರ ನಾಶದಿಂದಾಗಿ, ಗಾಂಧೀಜಿ ಕಂಡ ಕನಸು ನನಸಾಗಿಸುವುದು ಕೇವಲ ಯುವ ಜನತೆಯಿಂದ ಮಾತ್ರ ಎಂದು ಹೇಳಿದರು.

ಕಲ್ಲೂರ ಗ್ರಾಪಂಅಧ್ಯಕ್ಷ ಸಂಜುಕುಮಾರ ರಾಜೇಶ್ವರ್ ಉದ್ಘಾಟನೆ ನೇರವೆರಿಸಿದರು. ಪ್ರಮುಖರಾದ ಈಶ್ವರ ಕೋರೆ, ನಾರಾಯಣರಾವ ಜಾಜಿ, ಮಾಣಿಕಪ್ಪ ಜಾಜಿ, ಘಟಕದ ಯೋಜನಾಧಿಕಾರಿಗಳಾದ ರಾಘವೇಂದ್ರ ಬಿರಾದರ, ಕಾಶಿಬಾಯಿ ಉಮರ್ಗೆ ಉಪಸ್ಥಿತರಿದ್ದರು. ದೀಪಕ ಕಲಬುರಗಿ ಸ್ವಾಗತಿಸಿದರು. ರಾಘವೇಂದ್ರ ಬಿರಾದಾರ ವಂದಿಸಿದರು.