ಹುಕ್ಕೇರಿ: ತಾಲೂಕಿನ ಸಂಕೇಶ್ವರದಲ್ಲಿರುವ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 150 ಕೆಎಲ್‌ಪಿಡಿ ಎಥೆನಾಲ್ ಉತ್ಪಾದನಾ ಘಟಕ ಸ್ಥಾಪಿಸಲಾಯಿತು.
ಹುನ್ನೂರ ವಿಠ್ಠರಾಯದೇವರ ಸೇವಕರಾದ ವಿಠ್ಠಲ ದೇವರೇಶಿ ದಂಪತಿ ಹಾಗೂ ನಿರ್ದೇಶಕ ಸುರೇಶ ಬೆಲ್ಲದ ದಂಪತಿ ಶ್ರೀ ಮಹಾಲಕ್ಷ್ಮೀ ಪೂಜೆ ನೆರವೇರಿಸುವುದರ ಮೂಲಕ ಎಥೆನಾಲ್ ಉತ್ಪಾದನೆಗೆ ಚಾಲನೆ ನೀಡಿದರು.
ನಿರ್ದೇಶಕರಾದ ಶಿವನಾಯಿಕ ನಾಯಿಕ, ಪ್ರಭುದೇವ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಬಸಪ್ಪ ಮರಡಿ, ಸುರೇಂದ್ರ ದೊಡಲಿಂಗನವರ, ಬಸವರಾಜ ಕಲ್ಲಟ್ಟಿ, ಬಾಬಾಸಾಹೇಬ ಅರಬೋಳೆ, ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಕರ್ಕಿನಾಯಿಕ, ಕಾರ್ಯಾಲಯ ಅಧೀಕ್ಷಕ ಎಸ್.ಎಸ್. ನಾಶಿಪುಡಿ, ಅಧಿಕಾರಿಗಳಾದ ಎಂ.ಆರ್. ಪಾಟೀಲ, ಅಜಿತ ಚಾಟೆ, ಎಸ್.ಸಿ. ನಾಗನ್ನವರ, ಕೆ.ಆರ್. ಬೆಟಗೇರಿ, ಎಸ್. ಪಿ.ಪಾಟೀಲ, ವಿ.ಎಂ.ಬೆಲ್ಲದ, ಸಿ.ಎ.ಪೂಜಾರ, ಎಂ.ವೈ.ಪಾಟೀಲ, ಎಂ.ಎಸ್.ಉತ್ತೂರ, ಎನ್.ಜಿ.ಖೋತ, ಬಾಬಾಸಾಹೇಬ ನಾಗನೂರಿ ಇತರರಿದ್ದರು.