ಮುಗಳಖೋಡ: ಕೋವಿಡ್ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಇದ್ದರೆ ರೋಗ ನಿಯಂತ್ರಣ ಮತ್ತು ಪ್ರಾಣಪಾಯದಿಂದ ಪಾರಾಗಬಹುದು ಎಂದು ಕುಡಚಿ ಶಾಸಕ ಪಿ.ರಾಜೀವ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ಫ್ರಂಟ್‌ಲೈನ್ ಕರೊನಾ ವಾರಿಯರ್ಸ್ ಅಂಗನವಾಡಿ ಕಾರ್ಯಕರ್ತೆಯವರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಔಷಧ ಕಿಟ್ ವಿತರಿಸಿ ಅವರು, ಮಾತನಾಡಿದರು. ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಮೇರೆಗೆ ಔಷಧೋಪಚಾರ ಮಾಡಿಕೊಂಡರೆ ಆಕ್ಸಿಜನ್ ಅವಶ್ಯಕತೆ ಇಲ್ಲದೆ ಶೀಘ್ರ ಗುಣಮುಖರಾಗಲು ಸಾಧ್ಯ. ಕರೊನಾ ಹಿಮ್ಮೆಟ್ಟಿಸಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ. ಎಲ್ಲರೂ ಲಸಿಕೆ ಪಡೆಯುವ ಮೂಲಕ ಕರೊನಾ ವಿರುದ್ಧದ ಹೋರಾಟದಲ್ಲಿ ಜಯ ಗಳಿಸೋಣ ಎಂದರು.
ರಾಯಬಾಗ ತಹಸೀಲ್ದಾರ್ ಡಾ.ಮೋಹನ್ ಭಸ್ಮ, ಹಾರೂಗೇರಿ ಠಾಣೆ ಪಿಎಸ್‌ಐ ಯಮನಪ್ಪ ಮಾಂಗ, ತಾಲೂಕು ವೈದ್ಯಾಧಿಕಾರಿ ಎಸ್.ಎಸ್. ಬಾನೆ, ಸಿಡಿಪಿಒ ಸಂತೋಷ ಕಾಂಬಳೆ, ವೈದ್ಯಾಧಿಕಾರಿ ಎಸ್.ಎಂ.ಪಾಟೀಲ, ಅಂಗನವಾಡಿ ಮೇಲ್ವಚಾರಕಿ ಎಂ.ಎಲ್.ಸೂರ್ಯವಂಶಿ, ಮುಖ್ಯಾಧಿಕಾರಿ ಜಿ.ಬಿ.ಡಂಬಳ, ರಮೇಶ ಖೇತಗೌಡರ, ಮಲ್ಲಿಕಾರ್ಜುನ ಖಾನಗೌಡರ, ಮಹಾಂತೇಶ ಯರಡತ್ತಿ, ಗೌಡಪ್ಪ ಖೇತಗೌಡರ, ಜ್ಯೋತೆಪ್ಪ ಮೆಕ್ಕಳಕಿ, ಆರ್ ಕೆ ಪಾಟೀಲ, ಭರಮು ತೇಲಿ, ಮಂಗಲ ಪನದಿ, ಲತಾ ಹುದ್ದಾರ ಇದ್ದರು.
ಖೇಮಲಾಪುರ ವರದಿ: ಗ್ರಾಮದಲ್ಲಿ ಶಾಸಕ ಪಿ.ರಾಜೀವ್ ಅವರು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು. ಪಿಡಿಒ ನಿಂಗಪ್ಪ ಬಿರನಗಡ್ಡಿ, ಉಮೇಶ ಪೋಳ, ಗ್ರಾಮ ಲೆಕ್ಕಾಧಿಕಾರಿ ಸದಾಶಿವ ಕಾಬಂಳೆ, ಕಾರ್ಯದರ್ಶಿ ಎಸ್.ಎಸ್.ವಸ್ತ್ರದ, ಬಿಜೆಪಿ ಮುಖಂಡರಾದ ಸಿದ್ದಣ್ಣ ಮೂಡಲಗಿ, ಸಿದ್ದು ಬೆಳಗಲಿ, ರವಿ ಚೌಗಲಾ, ರಾಜು ಬಡಿಗೇರ, ಈರಗೌಡ ಪಾಟೀಲ, ಅಣ್ಣಪ್ಪ ಅರಗಿ, ಸುರೇಶ ಪಾಟೀಲ, ಮಹಾಂತೇಶ ಪಾಟೀಲ, ಸಿಕಂದರ್ ಕಾಗವಾಡೆ, ಗ್ರಾಪಂ ಸದಸ್ಯರು, ಆಶಾ ಕಾರ್ಯಕರ್ತೆಯರು ಇದ್ದರು.