ನಗರದ ಕಾವೇರಿ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಡೀನ್ ಡಾ.ಶ್ರೀಕಂಠಸ್ವಾಮಿ ಮಾತನಾಡಿ, ಪದವಿ ಪೂರ್ವ ಘಟ್ಟ ಪ್ರತಿಯೊಬ್ಬರಿಗೂ ಮುಖ್ಯವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಪರಿಪೂರ್ಣವಾಗಿ ಶ್ರಮವಹಿಸಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಯನ್ನು ನಮ್ಮ ಸಂಸ್ಥೆ ಕಲ್ಪಿಸಿ ಕೊಡುತ್ತದೆ ಎಂಬ ಭರವಸೆ ನೀಡಿದರು.
ಇಂಗ್ಲಿಷ್ ಉಪನ್ಯಾಸಕ ಸಂಪತ್‌ಕುಮಾರ್ ಹಾಗೂ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕ ವಿವೇಕ್ ಕುಮಾರ್ ಕಾಲೇಜಿನ 2024-25ರ ವಾರ್ಷಿಕ ವರದಿಯನ್ನು ಮಂಡಿಸಿದರು.
ಕಾಲೇಜಿನ ನಿರ್ದೇಶಕರು ಆದ ಪ್ರಾಂಶುಪಾಲ ಎನ್.ಆರ್.ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಧನಾತ್ಮಕ ಚಿಂತನೆ ಮತ್ತು ಜ್ಞಾನವನ್ನು ರೂಢಿಸಿಕೊಳ್ಳಬೇಕು. ಗೌರವ ಮತ್ತು ನಂಬಿಕೆಯನ್ನು ಆಧರಿಸಿದ ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಿಕೊಂಡು ಶಿಕ್ಷಕರಿಗೆ ಮತ್ತು ಹಿರಿಯರಿಗೆ ವಿಧೇಯರಾಗಿ ಯಶಸ್ಸು ಪಡೆಯಬೇಕು ಎಂದರು.
ಇದೇ ವೇಳೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಪುರಸ್ಕಾರಿಸಲಾಯಿತು. ರಾಘವೇಂದ್ರ ಇದ್ದರು.