ಚಿತ್ರದುರ್ಗ: ದೇಶದಲ್ಲೇ ಹೊಸ ಸಂಚಲನ ಸೃಷ್ಟಿಸುತ್ತಿರುವ ಎಎಪಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡು ಬಿಜೆಪಿ ವರಿಷ್ಠರಲ್ಲಿ ತೀವ್ರ ಆತಂಕ ಉಂಟಾಗಿದೆ. ದೆಹಲಿ ವಿಧಾನಸಭೆ ಚುನಾವಣೆ ಸೋಲುವ ಭೀತಿಯಿಂದಾಗಿ ಕೀಳುಮಟ್ಟದ ಟೀಕೆಗೆ ಮುಂದಾಗಿರುವುದು ಎಷ್ಟು ಸರಿ ಎಂದು ಎಎಪಿ ಜಿಲ್ಲಾಧ್ಯಕ್ಷ ಬಿ.ಜಿ. ಜಗದೀಶ್ ಪ್ರಶ್ನಿಸಿದ್ದಾರೆ.
ಎಎಪಿಯಿಂದ ಜನರಿಗೆ ಆಪತ್ತು ಎಂಬ ಪ್ರಧಾನಿ ಅವರ ಹೇಳಿಕೆ ಗಮನಿಸಿದರೆ, ದೆಹಲಿಯಲ್ಲಿ ಕ್ಷೇತ್ರಗಳನ್ನು ಕಳೆದುಕೊಳ್ಳುವ ಭೀತಿಗೆ ಸಾಕ್ಷಿಯಾಗಿದೆ. ಚುನಾವಣೆ ವೇಳೆ ಸರ್ಕಾರವೊಂದರ ಲೋಪ, ಭ್ರಷ್ಟಾಚಾರ ಕುರಿತು ಮಾತನಾಡಲು ನಮ್ಮ ಪಕ್ಷ 10 ವರ್ಷದ ಆಡಳಿತದಲ್ಲಿ ಎಳ್ಳಷ್ಟು ಅವಕಾಶ ನೀಡದ ಕಾರಣ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಭಾನುವಾರ ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.