ಸಿನಿಮಾ

ಎಆರ್‌ಕೆ ಪರವಾಗಿ ಕಾರ್ಯಕರ್ತರ ಪ್ರಚಾರ

ಕೊಳ್ಳೇಗಾಲ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಪರವಾಗಿ ಕಾರ್ಯಕರ್ತರು ಪಟ್ಟಣದ ಉಪ್ಪಾರ ಮೋಳೆ ಬಡಾವಣೆಯಲ್ಲಿ ಮತಯಾಚನೆ ಮಾಡಿದರು.

ಬಡಾವಣೆಯಲ್ಲಿ ಮನೆ ಮನೆಗೆ ತೆರಳಿದ ಕಾರ್ಯಕರ್ತರು, ಎ.ಆರ್.ಕೃಷ್ಣಮೂರ್ತಿ ಅವರಿಗೆ ಮತ ನೀಡುವ ಮೂಲಕ ಆಶೀರ್ವದಿಸಬೇಕು. ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ರಾಜ್ಯದ ಅಭಿವೃದ್ಧಿ ಜತೆಗೆ ಕ್ಷೇತ್ರದ ಅಭಿವೃದ್ಧಿಯೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಮತದಾರರು ಮತ ನೀಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಎಲ್ಲದಕ್ಕೂ ಜಿಎಸ್‌ಟಿ ಹೆಸರಲ್ಲಿ ತೆರಿಗೆ ಕಟ್ಟಬೇಕಿದೆ. ಸಿಲಿಂಡರ್ ಖರೀದಿಸಲು ಬಡವರಿಂದ ಸಾಧ್ಯವಾಗುತ್ತಿಲ್ಲ. ಇವೆಲ್ಲ ಕಾರಣಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಗ್ಯಾರೆಂಟಿ ಕಾರ್ಡ್ ಜನಪರವಾಗಿದೆ. ಇದನ್ನು ಮನಗಂಡು ಮತ ನೀಡುವಂತೆ ಮನವಿ ಮಾಡಿದರು.

ನಗರಸಭೆ ಸದಸ್ಯ ಶಾಂತರಾಜು, ಮಾಜಿ ಸದಸ್ಯ ಅಕ್ಮಲ್ ಪಾಷ, ಸುರೇಶ್, ಜಿ.ಪಿ.ಶಿವಕುಮಾರ್, ಮುಡಿಗುಂಡ, ಮಲ್ಲಿಕಾರ್ಜುನ, ಕರಾಟೆ ಕುಮಾರ್, ಕೆ.ಸಿ.ಗೋವಿಂದರಾಜ್, ನಟರಾಜ್, ಸಿದ್ಧಾರ್ಥ, ಪಿ.ಕೃಷ್ಣರಾಜ್, ಪಾಪಣ್ಣ, ಚಿನ್ನಸ್ವಾಮಿ ಮಾಳಿಗೆ, ಮರಯ್ಯ, ಜಗದೀಶ್, ನಾಗರಾಜು ಮತ್ತಿತರಿದ್ದರು.

Latest Posts

ಲೈಫ್‌ಸ್ಟೈಲ್