ತಿ.ನರಸೀಪುರ: ತಾಲೂಕಿನ ನರಗ್ಯಾತನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಕುಮಾರಸ್ವಾಮಿ, ಉಪಾಧ್ಯಕ್ಷರಾಗಿ ಕೆಂಪಮ್ಮಣಿ ಅವಿರೋಧ ಆಯ್ಕೆಯಾದರು.
ಸಂಘದ ಸಭಾಂಗಣದಲ್ಲಿ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಬಯಸಿ ತಾಪಂ ಮಾಜಿ ಅಧ್ಯಕ್ಷ ಎಂ.ಕುಮಾರಸ್ವಾಮಿ ಹಾಗೂ ಕೆಂಪಮ್ಮಣಿ ಇಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಜಿ.ಪ್ರೇಮಾ ಅವಿರೋಧ ಆಯ್ಕೆ ಘೋಷಿಸಿದರು.
ನಿರ್ದೇಶಕರಾದ ಎಂ.ಪುಟ್ಟಸ್ವಾಮಿ, ಜೆ.ಎನ್.ಗುರುಮೂರ್ತಿ, ನಾಗೇಶ್, ರುದ್ರಸ್ವಾಮಿ, ಪ್ರೇಮಾ, ಮುದ್ದಯ್ಯ, ಬಸವರಾಜಪ್ಪ, ಶಿವಮ್ಮ, ಮಹದೇವಮ್ಮ, ಗುರುಸ್ವಾಮಿ, ಗ್ರಾಪಂ ಸದಸ್ಯ ಕೊಳತ್ತೂರು ಕುಮಾರ್, ಶಾಂತರಾಜು, ಮಾಜಿ ಅಧ್ಯಕ್ಷ ಆರ್.ಸೋಮಣ್ಣ, ರಾಮೇಗೌಡನಪುರ ರವಿ, ಮುಖಂಡರಾದ ಪುಟ್ಟಸ್ವಾಮಿ, ಎಂ.ಎಲ್.ಹುಂಡಿ ಪ್ರಭು, ಹಲವಾರ ಮಹದೇವಸ್ವಾಮಿ, ಚಿದರವಳ್ಳಿ ನವೀನ್, ಎಂ.ಎಸ್.ಬಸವರಾಜು, ಎಂ.ಎಂ.ಜಯಣ್ಣ ಇದ್ದರು.