ಚಿತ್ರದುರ್ಗ: ನಗರದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 76ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕಾರ್ಯಕ್ರಮದ ಬಳಿಕ ಹೊರನಡೆಯಲು ಮುಂದಾದ ಸಂಸದ ಗೋವಿಂದ ಎಂ. ಕಾರಜೋಳ ಅವರನ್ನು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ತರಲಿಲ್ಲವೆಂದು ಸಚಿವ ಡಿ.ಸುಧಾಕರ್ ತಮಾಷೆಯಾಗಿ ಕಿಚಾಯಿಸಿದರು.
ಖಂಡಿತ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ. ಕೇಂದ್ರ ಕೇಳಿರುವ ದಾಖಲೆ ರಾಜ್ಯ ಸರ್ಕಾರ ಒದಗಿಸಲಿ ಎಂದು ಸಂಸದರು ಪ್ರತಿಕ್ರಿಯಿಸಿದರು. ನಿನ್ನ ಮರ್ಯಾದೆ ತೆಗೆಯಬೇಕೆ ಎಂದು ಛೇಡಿಸಿದರು.