More

  ಉಷ್ಣಾಂಶ ಹೆಚ್ಚಾಗಿದ್ದು ಮುಂಜಾಗೃತಿ ಕ್ರಮ ಅನುಸರಿಸಿವಹಸಿ

  ಬಾಗಲಕೋಟೆ: ಪ್ರಸ್ತುತ ಬೇಸಿಗೆ ಕಾಲ ಪ್ರಾರಂಭವಾಗಿದ್ದು ಈ ವರ್ಷ ಬರ,ಕುಡಿಯವ ನೀರು ಸಮಸ್ಯೆ ಬೆನ್ನಲ್ಲೇ ಉತ್ತರ ಕರ್ನಾಟಕದ ಬಾಗಲಕೋಟೆ ಸೇರಿದಂತೆ 8 ಜಿಲ್ಲೆಗೆ ಉಷ್ಣದ ಅಲೇ ಬೀತಿ ಎದುರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನಚ್ಚರಿಕೆ ನೀಡಿದೆ, ಜಿಲ್ಲೆಯ ಜನರು ನೀರನ್ನು ಮಿತವಾಗಿ ಬಳಸಿ ಉಷ್ಣಾಂಶದಿಂದ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಜಾಗೃತರಾಗಿರಬೇಕು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ತಿಳಿಸಿದ್ದಾರೆ.

  ರಾಜ್ಯದಲ್ಲಿ ಕಳೇದ ವರ್ಷ ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿ ಭಾರೀ ಪ್ರಮಾಣದ ಮಳೆ ಕೋರತೆಯಿಂದ ಬರ ಪರಿಸ್ಥಿತಿ ಉಂಟಾಗಿತ್ತು, ಬೇಸಿಗೆ ಆರಂಭಕ್ಕೂ ಮುನ್ನವೆ ಇದೀಗ ಉಷ್ಣ ಅಲೆಯ ಭೀತಿ ಎದುರಾಗುತ್ತಿರುವುದು ಮಾನವನಿಗೆ ಮಾತ್ರವಲ್ಲದೆ ಪ್ರಾಣಿ,ಪಕ್ಷಿ ಸೇರಿದಂತೆ ಇಡಿ ಜೀವ ಸಂಕುಲಕ್ಕೆ ಸಂಕಷ್ಟ ಬರಬಹುದು, ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಪರಿಣಾಮ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ವಾಡಿಕೆ ಪ್ರಮಾಣಕ್ಕಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗಿದೆ.

  ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ದಾಖಲಾಗಿ ಉಷ್ಣ ಅಲೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಈ ಸಂಧರ್ಭದಲ್ಲಿ ಜಿಲ್ಲಾಢಳಿತ ಕುಡಿಯುವ ನೀರಿಗೆ ತೊಂದರೆಯಾಗದಂತೆ, ದನಕರುಗಳಿಗೆ ಮೇವಿನ ತೊಂದರೆಯಾಗದಂತೆ ಏಚ್ಚರವಹಿಸಬೇಕು, ಜೋತೆಗೆ ಜಿಲ್ಲೆಯ ಜನರು ನೀರನ್ನು ಮೀತವಾಗಿ ಬಳಸಿ, ಪ್ರಾಣಿ ಪಕ್ಷೀಗಳಿಗೆ ಅಹಾರ ನೀರನ್ನೀಟ್ಟು, ವಯಸ್ಸಾದವರು,ಮಕ್ಕಳು ಬಿಸಿಲಿಗೆ ಬರುವುದು ಕಡಿಮೆಮಾಡಿ, ಜಾಸ್ತಿ ನೀರು ಕುಡಿಯುವುದು, ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನು ಹಾಕಿಕೊಳ್ಳಿ, ಒಟ್ಟಾರೆ ಈ ಬೇಸಿಗೆಯಲ್ಲಿ ಸುರಕ್ಷತೆಯ ಮುಂಜಾಗೃತ ಕ್ರಮಗಳನ್ನು ಅನುಸರಿಸಿ, ಜಾಗೃತರಾಗಿರಬೇಕು ಎಂದು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts