ಉಳ್ಳಾಗಡ್ಡಿ ಬೆಳೆ ಹಾನಿಗೆ ಪರಿಹಾರ ನೀಡಿ

ರಾಣೆಬೆನ್ನೂರ: ರೈತರ ಸಾಲ ಮನ್ನಾ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡುವುದು, ಉಳ್ಳಾಗಡ್ಡಿ ಬೆಳೆಗಾರರಿಗೆ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಬುಧವಾರ ನಗರದ ಮಿನಿ ವಿಧಾನಸೌಧ ಎದುರು ಶಿರಸ್ತೇದಾರ್ ಎಂ.ಎನ್. ಹಾದಿಮನಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರಕೃತಿ ವಿಕೋಪಕ್ಕೆ ನಲುಗಿರುವ ಜನರಿಗೆ ಆಶ್ರಯ ನೀಡಬೇಕು. ಬೆಳೆ ವಿಮೆ ತಾರತಮ್ಯ ಸರಿಪಡಿಸಬೇಕು. ರಾಜ್ಯದ ಎಲ್ಲ ಕೆರೆ ತುಂಬಿಸುವ ವ್ಯವಸ್ಥೆಯಾಗಬೇಕು. ಮಳೆಯಿಂದ ಹಾನಿಗೀಡಾದ ಉಳ್ಳಾಗಡ್ಡಿ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸುವುದು ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರೈತ ಮುಖಂಡರಾದ ನಾಗರಾಜಪ್ಪ ಸಂಶಿ, ನಿಂಗಪ್ಪ ಸತ್ಯಪ್ಪನವರ, ಹನುಮಂತಪ್ಪ ಕಬ್ಬಾರ, ಮಾರ್ತಾಂಡಪ್ಪ ಹಲಗೇರಿ, ಯಲ್ಲಪ್ಪ ಪುರದ, ಶಿವಪ್ಪ ಕಂಬಳಿ, ಅರುಣಕುಮಾರ ಕೊರವರ, ಹನುಮಂತಪ್ಪ ಗೋಣೆಮ್ಮನವರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *