ಉಲ್ಲಾಸ, ಆರೋಗ್ಯಕ್ಕೆ ಸಾಮೂಹಿಕ ಯೋಗ

  • ಯೋಗವನ್ನು ಒಬ್ಬಂಟಿಯಾಗಿ ಅಭ್ಯಾಸ ಮಾಡಿದರೆ ಹೆಚ್ಚು ಪ್ರಯೋಜನವೋ ಅಥವಾ ಸಾಮೂಹಿಕವಾಗಿ ಅಭ್ಯಾಸ ಮಾಡಿದರೆ ಹೆಚ್ಚು ಪ್ರಯೋಜನವೋ? ತಿಳಿಸಿ?

| ರಾಮನಾರಾಯಣ್ (35 ವರ್ಷ)

ಯೋಗವನ್ನು ಒಬ್ಬಂಟಿಯಾಗಿ ಯಾ ಸಾಮೂಹಿಕವಾಗಿ ಅಭ್ಯಾಸ ಮಾಡಬಹುದು. ಅಭ್ಯಾಸ ಮಾಡುವಾಗ ಶಿಸ್ತು, ಸತತ ಪ್ರಯತ್ನ, ದೃಢ ನಂಬಿಕೆ ಅಭ್ಯಾಸ ಅತ್ಯವಶ್ಯ. ಕೆಲವೊಮ್ಮೆ ಒಬ್ಬಂಟಿಯಾಗಿ ಅಭ್ಯಾಸ ಮಾಡಲು ಉದಾಸೀನವಾಗುತ್ತದೆ. ಸಾಮೂಹಿಕ ಯೋಗ ಅಭ್ಯಾಸದಿಂದ ಹುರುಪು, ಉಲ್ಲಾಸ ಬರುತ್ತದೆ, ಪಕ್ಕದಲ್ಲಿ ಇದ್ದವರು ಉತ್ತಮವಾಗಿ ಯೋಗ ಮಾಡುವಾಗ ಹತ್ತಿರದವರು ಇನ್ನು ಉತ್ತಮ ರೀತಿಯಲ್ಲಿ ಪ್ರಯತ್ನಪಡುತ್ತಾರೆ, ಸಾಮೂಹಿಕದಲ್ಲಿ ಶಿಸ್ತುಬದ್ಧವಾಗಿ ಕ್ರಮವತ್ತಾಗಿ ಗುರುಗಳ ಸೂಚನೆಯಂತೆ ಯೋಗ ಅಭ್ಯಾಸ ನಡೆಯುತ್ತದೆ. ಮನೆಯಲ್ಲಿ ಒಬ್ಬರೆ ಮಾಡುವಾಗ ಅಡಚಣೆಗಳು ಬರುತ್ತಿರುತ್ತದೆ, ದಿನಾಲು ಯೋಗ ಮಾಡಿದಾಗ ಅದರಿಂದಾಗುವ ಪ್ರಯೋಜನಗಳನ್ನು ಎಲ್ಲಾ ಯೋಗಾಭ್ಯಾಸಿಗಳು ಹಂಚಿಕೊಳ್ಳುತ್ತಾರೆ. ಯೋಗ ಮಾಡುತ್ತಾ ಇದ್ದರೆ ಎಲ್ಲರೊಳಗಿನ ಭಾವನೆ ಬಾಂಧವ್ಯಗಳು ವೃದ್ಧಿಯಾಗುತ್ತದೆ.

ಯೋಗವು ಮೂಲತಃ ಅಧ್ಯಾತ್ಮದ ಆಧಾರದಿಂದಿರುವ/ತಳಹದಿ ಹೊಂದಿರುವ ಒಂದು ಸೂಕ್ಷ್ಮವಾದ ವಿಜ್ಞಾನದ ಶಾಖೆಯಾಗಿದ್ದು ದೇಹ ಮತ್ತು ಮನಸ್ಸುಗಳ ಜೊತೆ ಹೊಂದಾಣಿಕೆಯನ್ನು ತರಲು ಬೆಳಕು ಹರಡುವಂತದ್ದು ಇದು ಆರೋಗ್ಯವಾಗಿ ಬಾಳಲು ಒಂದು ವಿಜ್ಞಾನ ಮತ್ತು ಕಲೆ. ಯೋಗ ಎಲ್ಲಾ ತರಹದ ಬಂಧನಗಳಿಂದ ವಿಮುಕ್ತಿಗೊಳಿಸಲು ಯೋಗ ಒಂದು ಅವಶ್ಯವಾದ ಮಾರ್ಗ. ನಿಯಮಿತವಾದ ಯೋಗದ ಅಭ್ಯಾಸವು ಉತ್ತಮ ಮಾನಸಿಕ, ದೈಹಿಕ ಮತ್ತು ಬೌದ್ಧಿಕ ಆರೋಗ್ಯಕ್ಕೆ ದಾರಿ.

  • ಸುರಭಿ ಮುದ್ರೆಯ ಬಗ್ಗೆ ವಿವರ ಕೊಡಿ.

| ಜಿ. ಪ್ರಕಾಶ್ (62 ವರ್ಷ), ಬೆಂಗಳೂರು

ಇದು ಹಸುಗಳ ಮುದ್ರೆಯ ತಾಯಿ ಎಂದರ್ಥ.

ಇಚ್ಛೆ ನೆರವೇರಿಕೆ ಮುದ್ರೆ ಎಂದೂ ಇದನ್ನು ಕರೆಯುತ್ತಾರೆ.

ಈ ಮುದ್ರೆಗೆ ಕಾಮಧೇನುದೇವಿಯ ಹೆಸರನ್ನು ಇಡಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಹಸುವಾಗಿದ್ದು ಇಚ್ಛೆಗಳನ್ನು ನೆರವೇರಿಸುತ್ತದೆ. ಈ ಮುದ್ರೆ ಹಸುವಿನ ಕೆಚ್ಚಲಿನಂತೆ ಕಾಣುವುದರಿಂದ ಇದಕ್ಕೆ ಸುರಭಿ ಎಂದು ಹೆಸರು ಬಂದಿದೆ.

ವಿಧಾನ: ಎರಡೂ ಕೈಗಳನ್ನು ನಮಸ್ಕಾರ ಮಾಡುವಂತೆ ಜೋಡಿಸಿ. ಅನಂತರ ಹೆಬ್ಬೆರಳುಗಳನ್ನು ದೂರವಿರಿಸಿ. ಒಂದಕ್ಕೊಂದು ತಾಗಿರಬಾರದು. ಪರಸ್ಪರ ವಿರುದ್ಧ ಕೈಗಳ ತೋರು ಬೆರಳು ಮಧ್ಯದ ಬೆರಳಿನ ತುದಿಗಳನ್ನು ಮೃದುವಾಗಿ ರ್ಸ³ಸಿ. ಕಿರುಬೆರಳು ಮತ್ತು ಉಂಗುರ ಬೆರಳುಗಳ ತುದಿಯನ್ನು ತಾಗಿಸಿ. ಸುಮಾರು 10 ನಿಮಿಷಗಳಿಂದ 20 ನಿಮಿಷಗಳಷ್ಟು ಕಾಲ ಅಭ್ಯಾಸ ಮಾಡಿ ಕೊನೆಯಲ್ಲಿ 10 ನಿಮಿಷಗಳ ಪ್ರಾಣಮುದ್ರೆ ಅಭ್ಯಾಸ ಮಾಡಿ. ಈ ಮುದ್ರೆಯನ್ನು ಗುರುಮುಖೇನವೇ ಕಲಿತು ಅಭ್ಯಾಸ ಮಾಡಿ. ವಾತ, ಪಿತ್ತ, ಕಫ ಎಂಬ ಮೂರು ದೋಷಗಳನ್ನು ಗುಣಪಡಿಸಲು ಸಹಕಾರಿ. ಗ್ಯಾಸ್ಟಿ›ಕ್, ಅಸಿಡಿಟಿ ನಿಯಂತ್ರಣವಾಗುತ್ತದೆ. ದೇಹದಲ್ಲಿರುವ ಐದು ಅಂಶ (ಅಗ್ನಿ, ವಾಯು, ಆಕಾಶ, ಭೂಮಿ, ಜಲ) ತತ್ವಗಳನ್ನು ಸಮತೋಲನಗೊಳಿಸುತ್ತದೆ. ಮನಸ್ಥಿತಿ ಸ್ಥಿರತೆಗೆ ಇದು ಸಹಾಯಕ. ಕುಂಡಲಿನೀ ಶಕ್ತಿ ಜಾಗೃತಿಗೆ ಈ ಮುದ್ರೆ ಸಹಕಾರಿ. ಆಧ್ಯಾತ್ಮಿಕ ಸಾಧನೆಗೆ ಈ ಮುದ್ರೆ ಸಹಕಾರಿ.

One Reply to “ಉಲ್ಲಾಸ, ಆರೋಗ್ಯಕ್ಕೆ ಸಾಮೂಹಿಕ ಯೋಗ”

Leave a Reply

Your email address will not be published. Required fields are marked *