Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಉಲ್ಟಾ ಹೊಡೆದ ಕಪ್ಪತಗುಡ್ಡ ಸ್ಥಾನಮಾನ ವಿರೋಧಿಗಳು!

Saturday, 25.02.2017, 10:12 AM       No Comments

ಗದಗ: ಕಪ್ಪತಗುಡ್ಡಕ್ಕೆ ಸಂರಕ್ಷಿತ ಪ್ರದೇಶ ಸ್ಥಾನಮಾನ ನೀಡದಂತೆ ತಾತ್ಕಾಲಿಕ ತಡೆ ನೀಡಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಠಾಕೂರ ಸಿಂಗ್ ಮಾಳಗಿಮನಿ, ಹನುಮಪ್ಪ ಪೂಜಾರ ಹಾಗೂ ಮಹಾಂತೇಶ ತುಳಸಿಮನಿ ಹೊಸ ಬಾಂಬ್ ಸಿಡಿಸಿದ್ದಾರೆ.

‘ನಾವು ಅನಕ್ಷರಸ್ಥರು, ಸರ್ಕಾರದಿಂದ ಭೂಮಿ ಹಕ್ಕುಪತ್ರ ಕೊಡಿಸುತ್ತೇವೆಂದು ಹೇಳಿದ ಬಲ್ದೋಟಾ ಕಂಪನಿ ಏಜೆಂಟರಾದ ವೆಂಕಟೇಶ ದಾಸರ ಹಾಗೂ ಇತರರು ಗ್ರಾಮಕ್ಕೆ (ಬೆಳದಡಿ) ಬಂದು ಸಭೆ ನಡೆಸಿದ್ದರು. ನಮ್ಮ ಕೈಗೆ ಪತ್ರವೊಂದನ್ನು ಕೊಟ್ಟು ಸಹಿ ಮಾಡಲು ಹೇಳಿದ್ದರು. ಆಸೆಗೊಳಪಟ್ಟ ನಾವು ಸಹಿ ಮಾಡಿದ್ದೆವು. ಫೆ.14ರ ರಾತ್ರಿ ಬೆಂಗಳೂರಿಗೆ ಕರೆದುಕೊಂಡು ಹೋಗಿ, ಫೆ.15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಮುಂದೆ ನಮ್ಮನ್ನು ನಿಲ್ಲಿಸಿ ಒಳಗೆ ಹೋಗಿ ಚರ್ಚೆ ನಡೆಸಿದ್ದರು’ ಎಂದು ಅರ್ಜಿ ಸಲ್ಲಿಸಿದ್ದ ಠಾಕೂರ ಸಿಂಗ್ ಮಾಳಗಿಮನಿ ಹೇಳಿದರು. ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಲಂಬಾಣಿ ಸಮಾಜದ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಕಪ್ಪತಗುಡ್ಡ ವಿಷಯದಲ್ಲಿ ನಮ್ಮ ಹೆಸರನ್ನು ಕಂಪನಿ ಏಜೆಂಟರು ದುರುಪಯೋಗ ಮಾಡಿಕೊಂಡಿದ್ದಾರೆ. ಸಮುದಾಯದ ಮುಖಂಡರ ಜತೆ ರ್ಚಚಿಸಿ ಅವರ ಮೇಲೆ ದೂರು ದಾಖಲಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿದ್ದ ವಕೀಲ ರವೀಕಾಂತ ಅಂಗಡಿ, ಅಡ್ವೊಕೇಟ್ ಜನರಲ್ ಮಧುಸೂದನ ನಾಯಕ ಹಾಗೂ ಕಂಪನಿ ಏಜೆಂಟರ ಮೇಲೆ ಹರಿಹಾಯ್ದರು. ಅತ್ತಿಕಟ್ಟಿ ಪ್ರಕರಣದಲ್ಲಿ ಮಧೂಸುದನ ನಾಯಕ ಬಲ್ದೋಟಾ ಕಂಪನಿ ಪರವಾಗಿ ವಾದ ಮಂಡಿಸಿದ್ದರು. ಫೆ.15ರಂದು ಹೈಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಫೆ.22ರಂದೇ ವಿಚಾರಣೆಗೆ ಬಂದು ತಾತ್ಕಾಲಿಕ ತಡೆ ನೀಡಿದ್ದರ ಹಿಂದೆ ಮಧುಸೂದನ ನಾಯಕ ಅವರ ಕೈವಾಡವಿದೆ. ಈಗ ಅಡ್ವೊಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅವರು ಕಪ್ಪತಗುಡ್ಡ ಪರವಾಗಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು. ತೋಂಟದಾರ್ಯ ಸ್ವಾಮೀಜಿಗಳು ನಿರಂತರ ಹೋರಾಟ ನಡೆಸುತ್ತಿದ್ದರೂ ಅವರ ಹೋರಾಟಕ್ಕೆ ಸರ್ಕಾರ ಬೆಲೆ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಬಲ್ದೋಟಾ ಕಂಪನಿಯಿಂದ ಹಣ ಪಡೆದ ಏಜೆಂಟರು ಓದು-ಬರಹ ಬಾರದ ಲಂಬಾಣಿ ಜನರಿಗೆ ಆಮಿಷವೊಡ್ಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಾಮಮಾರ್ಗದಿಂದ ಹಣ ಗಳಿಸಿ ಪರಿಸರವನ್ನು ನಾಶ ಮಾಡಲು ಸಜ್ಜಾಗಿರುವುದು ದುರದೃಷ್ಟಕರ ಸಂಗತಿ ಎಂದು ರವಿಕಾಂತ ಅಂಗಡಿ ಹೇಳಿದರು.

ಚಂದ್ರು ಚವ್ಹಾಣ, ಗಿರೀಶ ಕಾರಬಾರಿ, ಮೋತಿಲಾಲ್ ಮಾಳಗಿಮನಿ, ಎಲ್. ನಾರಾಯಣ ಸ್ವಾಮಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

Back To Top