ಉಪನ್ಯಾಸಕರ ಪ್ರತಿಭಟನೆ

ಬೆಂಗಳೂರು: ಮೂರು ವರ್ಷಗಳ ಪರೀಕ್ಷಾ ಕಾರ್ಯ ಮತ್ತು 2019ನೇ ಸಾಲಿನ ಮೌಲ್ಯಮಾಪನದ ಗೌರವಧನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

2019ನೇ ಸಾಲಿನ ದ್ವಿತೀಯ ಪಿಯು ಮುಖ್ಯ ಪರೀಕ್ಷೆ ಮುಕ್ತಾಯವಾಗಿ ಇದೀಗ ಪೂರಕಪರೀಕ್ಷೆ ಮೌಲ್ಯಮಾಪನ ನಡೆಯುತ್ತಿದೆ. ಆದರೂ, ಹಿಂದಿನ ಮೌಲ್ಯಮಾಪನ ಭತ್ಯೆ ಬಿಡುಗಡೆ ಮಾಡಿಲ್ಲ. ವಿಶೇಷ ಭತ್ಯೆಯನ್ನು ಮೂಲ ವೇತನಕ್ಕೆ ವಿಲೀನಗೊಳಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಪ್ರೌಢಶಾಲೆ

ಯಿಂದ ಪಿಯು ಉಪನ್ಯಾಸಕರಾಗಿ ಪದೋನ್ನತಿ ಪಡೆದಿರುವವರಿಗೆ ಕಾಲಮಿತಿ ಬಡ್ತಿ ನೀಡಬೇಕೆಂದು ಒತ್ತಾಯಿಸಿದರು.

ಪಿಯು ಉಪನ್ಯಾಸಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಉನ್ನತಾಧಿಕಾರಿಗಳು ಸ್ಪಂದಿಸುತ್ತಿಲ್ಲ. ನಮ್ಮಿಂದ ಮೌಲ್ಯಮಾಪನ ಮತ್ತು ಪರೀಕ್ಷೆ ಕೆಲಸ ಮಾಡಿಸಿಕೊಂಡು ಈವರಗೆ ಗೌರವ ಸಂಭಾವನೆ ಬಿಡುಗಡೆ ಮಾಡಿಲ್ಲ ಎಂದು ಸಂಘದ ಅಧ್ಯಕ್ಯ ತಿಮ್ಮಯ್ಯ ಪುರ್ಲೆ ದೂರಿದರು. ಸಂಘದ ಕಾರ್ಯಾಧ್ಯಕ್ಷ ಎಸ್.ಆರ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಚ್. ನಿಂಗೇಗೌಡ, ಕೋಶಾಧ್ಯಕ್ಷ ಎಂ. ಜಯಣ್ಣ ಸೇರಿ ನೂರಾರು ಉಪನ್ಯಾಸಕರು ಭಾಗವಹಿಸಿದ್ದರು.

ಪ್ರಮುಖ ಬೇಡಿಕೆಗಳು
  1. ಅನುದಾನಿತ ಕಾಲೇಜಿನ ಉಪನ್ಯಾಸಕರ ಕಾಲ್ಪನಿಕ ವೇತನ ಬಡ್ತಿ ಬಿಡುಗಡೆ ಮಾಡುವುದು
  2. ಎನ್​ಸಿಇಆರ್​ಟಿ ನಿಯಮಗಳ ಪ್ರಕಾರ ಪ್ರತಿ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಯನ್ನು 40ಕ್ಕೆ ಇಳಿಸುವುದು
  3. ನೆಟ್ ಮತ್ತು ಸ್ಲೆಟ್ ಪರೀಕ್ಷೆ ಬರೆದು ಉತ್ತೀರ್ಣ ರಾದ ಉಪನ್ಯಾಸಕರಿಗೆ ಬಡ್ತಿ ನೀಡುವುದು 
  4. ಗಣಿತ ವಿಷಯಕ್ಕೆ ಪ್ರಾಯೋಗಿಕ ಅಂಕಗಳ ನಿಗದಿ ಮಾಡುವುದು
  5. ಕಾಯಂ ಪ್ರಾಂಶುಪಾಲರ ನೇಮಕ ಮಾಡುವುದು

Leave a Reply

Your email address will not be published. Required fields are marked *