ಚಿತ್ರದುರ್ಗ: ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಒದಗಿಸುವ ಕಾಯ್ದೆ ಜಾರಿ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರ ಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ‌್ಯಕರ್ತರು ಡಿಸಿ ಕಚೇರಿ ಬಳಿ ಸೋಮವಾರ ಧರಣಿ ನಡೆಸಿದರು.
ಕೈಗಾರಿಕೆ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946ರ ಅನ್ವಯ ರಾಜ್ಯ ಸರ್ಕಾರ ಬಲಿಷ್ಠವಾದ ಕಾನೂನು ರೂಪಿಸಿ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು ಒದಗಿಸಬೇಕು ಎಂದರು.
ಖಾಸಗಿ ಸಂಸ್ಥೆಗಳ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಶೇ.100 ಕನ್ನಡಿಗರಿಗೆ ಕೊಡಬೇಕು. ಇತರ ಹುದ್ದೆಗಳಿಗೆ ಶೇ.80ರ ಪ್ರಮಾಣದಲ್ಲಿ ಕನ್ನಡಿಗರನ್ನು ಪರಿಗಣಿಸಬೇಕು. 15 ವರ್ಷ ಕರ್ನಾಟಕದಲ್ಲಿ ನೆಲೆಸಿದವರನ್ನು ಕನ್ನಡಿಗರೆಂದು ಪರಿಗಣಿಸಬೇಕೆಂಬ ನಿಯಮವಿದ್ದು, ಇವರು ಕನ್ನಡ ಬರವಣಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಕನ್ನಡಿಗರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ನಿಯಮ ಪಾಲಿಸದ ಸಂಸ್ಥೆಗಳ ಮಾನ್ಯತೆ ರದ್ದು ಪಡಿಸಿ ಭೂಮಿ ಸೇರಿ ವಿವಿಧ ಸವಲತ್ತುಗಳನ್ನು ಹಿಂಪಡೆದು, ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಇತ್ಯಾದಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಟಿ.ರಮೇಶ್, ಪದಾಧಿಕಾರಿಗಳಾದ ಎಸ್.ಬಿ.ಗಣೇಶ್, ವಿಜಯಕುಮಾರ್, ಜಿ.ರಾಜಪ್ಪ, ರಾಮಕೃಷ್ಣಪ್ಪ, ಪಿ.ರಮೇಶ್, ಟಿ.ಕೆ.ಶಿವಮೂರ್ತಿ, ಆರ್.ಜಿ.ಲಕ್ಷ್ಮ ಣ್, ರಮೇಶ್, ವೆಂಕಟೇಶ್, ಘನಶ್ಯಾಮ್, ಪ್ರಸಾದ್‌ಮಲ್ಲ, ವಸಂತ್, ಜಾಕೀರ್,ದಾದಾಪೀರ್, ಚಂದ್ರಕಲಾ, ದಾಕ್ಷಾಯಣಿ, ಮಂಜುಳಾ ಮತ್ತಿತರರು ಇದ್ದರು.
ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ನೀಡಿ
ನೂರಕ್ಕೆ ನೂರರಷ್ಟು ಹಾವಿನ ವಿಷ ತೆಗೆದುಹಾಕುತ್ತೆ ಈ ಗಿಡ! ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Snake venom
Snake venom : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು…
ದೈಹಿಕ – ಮಾನಸಿಕ ಆರೋಗ್ಯಕ್ಕೆ ಪ್ರಯೋಜನ ನೀಡುವ ಬಕಾಸನ
ಪ್ರ: ಬಕಾಸನದ ಮಾಹಿತಿ ಹಾಗೂ ಅಭ್ಯಾಸದ ಕ್ರಮ ತಿಳಿಸಿ ಉ: ಬಕಾಸನ ಎಂಬುದು ಸಂಸ್ಕೃ ಪದ…
Skin Care | ಚಳಿಗಾಲದಲ್ಲಿ ನಿಮ್ಮ ತ್ವಚೆಯು ಹಾಳಾಗದಂತೆ ಎಚ್ಚರವಹಿಸಿ; ಈ ಫೇಸ್ಪ್ಯಾಕ್ ಟ್ರೈ ಮಾಡಿ ಫಲಿತಾಂಶ ನೀವೇ ನೋಡಿ..
ಚಳಿಗಾಲ ಆರಂಭವಾಯಿತು ಎಂದರೆ ಸಾಕು ತ್ವಚೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುವುದನ್ನು ನಾವು ನೊಡಬಹುದು. ಇನ್ನು ಮುಖದ…