ಉದ್ಯಾನ ನಿರ್ಮಾಣಕ್ಕೆ ಚಾಲನೆ

ಶಿರಹಟ್ಟಿ: ತಾಪಂ ಸಾಮರ್ಥ್ಯಸೌಧದ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಉದ್ಯಾನ ನಿರ್ಮಾಣಕ್ಕೆ ತಾಪಂ ಇಒ. ಆರ್.ವೈ. ಗುರಿಕಾರ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಪರಿಸರ ನಾಶದಿಂದ ಜಗತ್ತು ವಿನಾಶದತ್ತ ಸಾಗುತ್ತಿದೆ. ಅಷ್ಟೇ ಅಲ್ಲ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯದಲ್ಲಿನ ಗಿಡಿ ಮರಗಳನ್ನು ಕಡಿದು ಪರಿಸರಕ್ಕೆ ಕುತ್ತು ತಂದಿದ್ದರಿಂದ ಮಳೆ ಕಾಣದಾಗಿದೆ. ಪ್ರತಿಯೊಬ್ಬರೂ ಗಿಡಮರಗಳ ಮಹತ್ವ ಅರಿತು ಶಾಲೆ, ಕಚೇರಿ, ಮನೆಗಳ ಆವರಣ ಅಲ್ಲದೆ, ರೈತರು ತಮ್ಮ ಹೊಲಗಳ ಬದುವಿನಲ್ಲಿ ಸಸಿ ನೆಟ್ಟು ಪೋಷಿಸುವುದರ ಮೂಲಕ ಪರಿಸರ ಉಳಿವಿಗೆ ಶ್ರಮಿಸಬೇಕು ಎಂದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಮಾತನಾಡಿ, ಪರಿಸರ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಅದಕ್ಕೆ ನಮ್ಮ ಕೊಡುಗೆ ಏನು? ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಪರಿಸರ ನಾಶಕ್ಕೆ ಕೈಹಾಕದೇ ಅದರ ಸಂರಕ್ಷಣೆಗೆ ಮುಂದಾಗಿ ಮುಂದಿನ ಪೀಳಿಗೆಗೆ ಪರಿಸರದ ಮಹತ್ವವನ್ನು ಮನವರಿಕೆ ಮಾಡಿದಾಗ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ, ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ದೇವಪ್ಪ ಲಮಾಣಿ, ವಿಜಯಲಕ್ಷ್ಮೀ ಬ್ಯಾಲಹುಣಶಿ, ಗಿರಿಜವ್ವ ಲಮಾಣಿ, ಜಾನು ಲಮಾಣಿ, ತಾವರೆಪ್ಪ ಲಮಾಣಿ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಇದ್ದರು.

ಸಸಿನೆಟ್ಟು ಪರಿಸರ ಉಳಿಸಿ

ನರೇಗಲ್ಲ: ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಕೃಷಿ ಮೇಲ್ವಿಚಾರಕ ಸಂತೋಷ ಪಿ.ಟಿ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಇತ್ತೀಚೆಗೆ ಮನುಷ್ಯನ ಸ್ವಾರ್ಥಕ್ಕಾಗಿ ಗಿಡ, ಮರಗಳನ್ನು ಕಡಿದು ಹಾಕಿ, ವಿವಿಧ ಕಾರ್ಖಾನೆಗಳು ಸೇರಿ ಹಲವಾರು ಅಭಿವೃದ್ಧಿಯ ಗೋಡೆ ಕಟ್ಟಿದ ಪರಿಣಾಮ ಪರಿಸರಕ್ಕೆ ಕುತ್ತು ಬಂದಿದೆ. ಇಂದಿನ ದಿನಗಳಲ್ಲಿ ಮರಗಳನ್ನು ನೆಟ್ಟು ಪರಿಸರನ್ನು ಉಳಿಸಿ, ಬೆಳೆಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕಿದೆ ಎಂದರು.

ಶಿಕ್ಷಕ ಮಹ್ಮದ್​ಹುಸೇನ ಎಸ್, ರೂಪಾ ಎಚ್, ಎ.ಪಿ. ಶೆಟ್ಟರ್, ಸುನಂದ ಐಲಿ, ಪಿ.ವಿ. ಜುಟ್ಲದ, ಎಸ್.ಎಸ್. ಯಲ್ಲರಡ್ಡಿ, ಎಂ.ಎನ್. ಅಂಗಡಿ, ಎಂ.ವಿ. ತಾಳಿಕೋಟಿ, ಎ.ಎಂ. ಸೂರಭಟ್ಟ, ಎಸ್.ಎ. ಪಲ್ಲೇದ, ವಿ.ಎ. ಕುಂಬಾರ ಇತರರು ಇದ್ದರು.

ಸಸಿ ಬೆಳೆಸುವ ಸಂಕಲ್ಪ

ಲಕ್ಷೆ್ಮೕಶ್ವರ: ಪಟ್ಟಣದ ಪುರಸಭೆ, ಅರಣ್ಯ ಇಲಾಖೆ ಮತ್ತು ಇನ್ನರ್​ವ್ಹೀಲ್ ಕ್ಲಬ್ ವತಿಯಿಂದ ಪಟ್ಟಣದ ಇಟ್ಟಿಕೆರೆ ದಂಡೆಯ ಮೇಲೆ ಇತ್ತೀಚೆಗೆ ಬೇವಿನ ಸಸಿ ನೆಟ್ಟು ದೊಡ್ಡದಾಗುವವರೆಗೂ ಜೋಪಾನ ಮಾಡುವ ಸಂಕಲ್ಪ ಮಾಡಲಾಯಿತು.

ಪುರಸಭೆ ಮುಖ್ಯಾಧಿಕಾರಿ ಎಂ.ಎ. ರಾಜಾಪುರ ಮಾತನಾಡಿ, ಮನುಷ್ಯ ಇಂದು ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡುತ್ತಿದ್ದಾನೆ. ಇದರಿಂದ ಜೀವ ಸಂಕುಲದ ಅವನತಿಗೆ ಕಾರಣನಾಗುತ್ತಿದ್ದಾನೆ. ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಪರಿಸರ ಉಳಿವಿಗೆ ಕೈ ಜೋಡಿಸಬೇಕಿದೆ. ಪರಿಸರ ಸಂರಕ್ಷಣೆ, ಬೆಳವಣಿಗೆ ಕೇವಲ ಅರಣ್ಯ ಇಲಾಖೆ ಮತ್ತು ಸರ್ಕಾರದ ಜವಾಬ್ದಾರಿಯಲ್ಲ. ಸಾರ್ವಜನಿಕರ ಜವಾಬ್ದಾರಿಯೂ ಮಹತ್ವದ್ದಾಗಿದೆ ಎಂದರು.

ಉಪ ವಲಯ ಅರಣ್ಯಾಧಿಕಾರಿ ಎಲ್.ಎಸ್. ವಿಭೂತಿ, ಇನ್ನರ್​ವ್ಹೀಲ್​ನ ಸರೋಜಾ ಬನ್ನೂರ, ಮಾಲಾ ಗೋಗಿ ಇತರರು ಇದ್ದರು.

Leave a Reply

Your email address will not be published. Required fields are marked *