ಉದ್ಘಾಟನೆಗೆ ಸಿದ್ಧವಾಗಿರುವ ನ್ಯಾಯಾಲಯದ ಕಟ್ಟಡ

ಲಕ್ಷೆ್ಮೕಶ್ವರ: ಉದ್ಘಾಟನೆಗೆ ಸಿದ್ಧವಾಗಿರುವ ಹಿರಿಯ ದಿವಾಣಿ ನ್ಯಾಯಾಲಯದ ಕಟ್ಟಡವನ್ನು ಸವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಮೋಹನ ಶಾಂತನಗೌಡ್ರ ಬುಧವಾರ ವೀಕ್ಷಿಸಿದರು.

ಬಳಿಕ ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಗೆ ನ್ಯಾಯಾಂಗದ ಮೇಲೆ ಬಲವಾದ ವಿಶ್ವಾಸವಿದೆ. ವಕೀಲರು ಕಕ್ಷಿದಾರರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಕಿರಿಯ ವಕೀಲರು ನಿಷ್ಠೆ, ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದರೆ ಉತ್ತಮ ಸಾಧನೆಗೈಯಬಹುದು ಎಂದರು. ಕಕ್ಷಿದಾರರಿಗೆ ನ್ಯಾಯ ಕಲ್ಪಿಸುವುದರಲ್ಲಿಯೇ ವೃತ್ತಿಯಲ್ಲಿ ಸಂತೃಪ್ತಿ ಕಾಣಬೇಕು. ದುಡ್ಡಿನಿಂದ ಯಾರೂ ದೊಡ್ಡವರಾಗುವುದಿಲ್ಲ, ವಕೀಲರು ಕೇವಲ ಹಣಕ್ಕೆ ಬೆಲೆ ನೀಡದೆ ಕಕ್ಷಿದಾರರ ಹಿತ ಬಯಸಬೇಕು. ನಿತ್ಯ ಹೊಸ ಕಾಯ್ದೆ- ಕಾನೂನುಗಳ ಬಗೆಗೆ ಅಧ್ಯಯನ ಮಾಡಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ವಿ.ಎಲ್. ಪೂಜಾರ ಮಾತನಾಡಿ ಸವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಮೋಹನ ಶಾಂತನಗೌಡ್ರ ಈ ಭಾಗದವರಾಗಿದ್ದು, ನಮ್ಮ ನ್ಯಾಯಾಲಯಕ್ಕೆ ಚಿರಪರಿಚಿತರು. ಉನ್ನತ ಸ್ಥಾನದಲ್ಲಿದ್ದರೂ ಇಲ್ಲಿನ ನ್ಯಾಯಾಲಯಕ್ಕೆ ಭೇಟಿ ನೀಡಿರುವದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಇದೇ ವೇಳೆ ವಕೀಲರ ಸಂಘದದಿಂದ ನ್ಯಾಯಮೂರ್ತಿ ಮೋಹನ ಶಾಂತನಗೌಡ್ರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಸ್. ಸಂಗ್ರೇಸ್, ಹಿರಿಯ ದಿವಾಣಿ ನ್ಯಾಯಾಧೀಶ ಎಂ.ಆರ್. ವಡೆಯರ, ಕಿರಿಯ ದಿವಾಣಿ ನ್ಯಾಯಾಧೀಶ ಎಚ್.ಐ. ಯಾದವಾಡ, ಎಪಿಪಿ ಜಿ.ಎಸ್. ಪಾಟೀಲ, ಹಿರಿಯ ವಕೀಲ ಎಂ.ಎನ್. ಬಾಡಗಿ, ಎ.ಬಿ.ಪಾಟೀಲ, ಆರ್.ಸಿ. ಪಾಟೀಲ, ವಿ.ಆರ್. ಪಾಟೀಲ, ಪ್ರವಾಸೋಧ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಬಿ.ಎಸ್. ಘೊಂಗಡಿ, ಸುರೇಶ ನಾವಿ, ಜೆ.ಡಿ. ದೊಡ್ಡಮನಿ, ಅನಂತ ಕಟ್ಟಿಮನಿ, ಬಿ.ವಿ. ನೇಕಾರ, ಬಿ.ಬಿ. ಭುವನಗೌಡ್ರ, ಎನ್.ಟಿ.ಪಾಟೀಲ, ಬಿ.ವಿ. ನೇಕಾರ, ಬಿ.ಎಸ್. ಪಾಟೀಲ ಮೊದಲಾದವರು ಇದ್ದರು. ಎಂ.ಎಂ. ಬಮ್ಮನಕಟ್ಟಿ, ಮಹೇಶ ಹಾರೋಗೇರಿ ಹಾಗೂ ಬಿ.ಎಸ್. ಬಾಳೇಶ್ವರಮಠ ನಿರ್ವಹಿಸಿದರು.

Leave a Reply

Your email address will not be published. Required fields are marked *