ಉತ್ತಮ ಶಿಕ್ಷಣಕ್ಕೆ ಆಕ್ಸ್​ಫರ್ಡ್ ಕಾಲೇಜು

1974ರಲ್ಲಿ ಸಣ್ಣದೊಂದು ಸ್ಥಳದಲ್ಲಿ 24 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಪ್ರಾರಂಭವಾದ ‘ಚಿಲ್ಡನ್ ಎಜುಕೇಷನ್ ಸೂಸೈಟಿ’ ಇದೀಗ ಬೃಹತ್ ಆಕಾರವಾಗಿ ಬೆಳೆದು ನಿಂತಿದೆ. ಕ್ರಮೇಣ ‘ಆಕ್ಸ್​ಫರ್ಡ್ ಎಜುಕೇಷನ್ ಇನ್​ಸ್ಟಿಟ್ಯೂಷನ್’ ಎಂಬ ಹೊಸ ಹೆಸರಿನಲ್ಲಿ 32 ವಿದ್ಯಾಸಂಸ್ಥೆ 5 ಕ್ಯಾಂಪಸ್ ಮತ್ತು 70 ಕ್ಕೂ ಹೆಚ್ಚಿನ ಕೋರ್ಸ್​ಗಳನ್ನು ಆಫರ್ ಮಾಡುತ್ತಿದೆ.

ಎಸ್. ನರಸರಾಜು ಆಕ್ಸ್​ಫರ್ಡ್ ಎಜುಕೇಷನ್ ಇನ್​ಸ್ಟಿಟ್ಯೂಷನ್​ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಬಡ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾರಂಭವಾದ ಸಂಸ್ಥೆಯಲ್ಲಿ ಇದೀಗ ಎಲ್​ಕೆಜಿ ಯಿಂದ ಪಿಜಿಯವರೆಗೆ ಎಲ್ಲವೂ ಇದೆ. ನರಸರಾಜು ನಂತರ ಅವರ ಪುತ್ರ ಎಸ್​ಎನ್​ವಿಎಲ್ ನರಸಿಂಹ ರಾಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ತಮ್ಮ ಕಾರ್ಯ ಚಟುವಟಿಕೆ ಮುಂದುವರಿಸಿದ್ದಾರೆ.

5 ಕ್ಯಾಂಪಸ್: ಜೆಪಿನಗರದ 1ನೇ ಹಂತದಲ್ಲಿ 2 ಎಕರೆ ಪ್ರದೇಶದಲ್ಲಿ ಆಕ್ಸ್​ಫರ್ಡ್ ಶಾಲೆ ಇದೆ. ರಾಜ್ಯ ಮತ್ತು ಸಿಬಿಎಸ್​ಇ, ಐಸಿಎಸ್​ಇ ಪಠ್ಯಕ್ರಮದ ಶಿಕ್ಷಣ ನೀಡುತ್ತಿದೆ. ಬೊಮ್ಮನಹಳ್ಳಿಯಲ್ಲಿ 12 ಎಕರೆ ಪ್ರದೇಶ ಹೊಂದಿದ್ದು, ದಿ ಆರ್ಕ್ಸ್​ಫರ್ಡ್ ಕಾಲೇಜ್ ಆಫ್ ಇಂಜಿನಿಯರಿಂಗ್, ದಿ ಆರ್ಕ್ಸ್​ಫರ್ಡ್ ಕಾಲೇಜ್ ಆಫ್ ಆರ್ಕಿಟೆಕ್ಚರ್, ದಿ ಆರ್ಕ್ಸ್​ಫರ್ಡ್ ಡೆಂಟಲ್ ಕಾಲೇಜ್ ಆಂಡ್ ಹಾಸ್ಪಿಟಲ್ ಹೊಂದಿದೆ.

ಹೊಂಗಸಂದ್ರ 3 ಎಕರೆ ಪ್ರದೇಶದಲ್ಲಿ ದಿ ಆರ್ಕ್ಸ್​ಫರ್ಡ್ ಕಾಲೇಜ್ ಆಫ್ ನರ್ಸಿಂಗ್, ಫಾರ್ಮಸಿ, ಫಿಜಿಯೋಥೆರಪಿ, ಶ್ರೀವೆಂಕಟೇಶ್ವರ ಇನ್​ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಇದೆ. ಎಚ್​ಎಸ್​ಆರ್ ಬಡಾವಣೆಯಲ್ಲಿ 3 ಎಕರೆ ಪ್ರದೇಶದಲ್ಲಿ ದಿ ಆರ್ಕ್ಸ್​ಫರ್ಡ್ ಕಾಲೇಜ್ ಆಫ್ ಸೈನ್ಸ್, ಕಾಮರ್ಸ್, ಬಿಸಿನೆಸ್ ಮ್ಯಾನೇಜ್​ವೆುಂಟ್, ಹೊಟೇಲ್ ಮ್ಯಾನೇಜ್​ವೆುಂಟ್, ಆರ್ಟ್ಸ್ ಆಂಡ್ ಎಜುಕೇಷನ್ ಆಂಡ್ ಲಾ ಈ ಕೋರ್ಸ್​ಗಳನ್ನು ಆಫರ್ ಮಾಡುತ್ತಿದೆ.

ಅತ್ತಿಬೆಲೆಯಲ್ಲಿ 32 ಎಕರೆಯ ವಿಶಾಲ ಪ್ರದೇಶದಲ್ಲಿ ಆರ್ಕ್ಸ್​ಫರ್ಡ್ ಕಾಲೇಜ್ ಆಫ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸಂಶೋಧನಾ ಕೇಂದ್ರ ತೆರೆದಿದೆ. ಈ ಕ್ಯಾಂಪಸ್ ಅನ್ನು ಪ್ರತ್ಯೇಕವಾಗಿ ವೈದ್ಯಕೀಯ ಕೋರ್ಸ್​ಗಳ ಅಧ್ಯಯನಕ್ಕೆ ಮೀಸಲಿಟ್ಟಿದೆ.

ಮಾನ್ಯತೆಯ ಭಯ ಇಲ್ಲ: 32 ವಿದ್ಯಾಸಂಸ್ಥೆಗಳ ಮೂಲಕ ಸುಮಾರು 74 ವಿವಿಧ ಕೋರ್ಸ್​ಗಳನ್ನು ಆಫರ್ ಮಾಡುತ್ತಿರುವ ಆರ್ಕ್ಸ್​ಫರ್ಡ್ ಕಾಲೇಜು ತನ್ನ ಎಲ್ಲ ಕೋರ್ಸ್​ಗಳಿಗೆ ಸಂಬಂಧಪಟ್ಟ ಎಲ್ಲ ಮಂಡಳಿಗಳಿಂದ ಮಾನ್ಯತೆ ಪಡೆದಿದೆ. ನ್ಯಾಕ್ ‘ಎ’ ಶ್ರೇಣಿ ನೀಡಿದೆ. ಎನ್​ಬಿಎ ಮತ್ತು ಐಎಂ, ರಾಜೀವ್​ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್​ಜಿಯುಎಚ್​ಎಸ್), ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು), ಭಾರತೀಯ ವೈದ್ಯಕೀಯ ಮಂಡಳಿ ಸೇರಿದಂತೆ ಹಲವಾರು ಮಂಡಳಿ ಮತ್ತು ಪರಿಷತ್ತಿನಿಂದ ಮಾನ್ಯತೆ ಪಡೆದಿರುವುದರಿಂದ ವಿದ್ಯಾರ್ಥಿಗಳು ಮಾನ್ಯತೆ ಬಗ್ಗೆ ಯಾವುದೇ ಅನುಮಾನವಿಲ್ಲದೆ ಪ್ರವೇಶ ಪಡೆಯಬಹುದು.

ಸುಸಜ್ಜಿತ ಸೌಕರ್ಯ: ಆಕ್ಸ್​ಫರ್ಡ್ ಎಂಬ ಹೆಸರಿನ ತಕ್ಕ ಹಾಗೇ ಗುಣಮಟ್ಟ ಮತ್ತು ಮೂಲಸೌಕರ್ಯದಲ್ಲಿ ರಾಜಿ ಇಲ್ಲದೆಯೇ ಬೃಹತ್ ಕಟ್ಟಡಗಳನ್ನು ಹೊಂದಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಯೋಗಾಲಯ, ಗ್ರಂಥಾಲಯ, ಕ್ಯಾಂಟೀನ್ ಸೌಲಭ್ಯ ಹೊಂದಿದೆ.

ಪ್ಲೇಸ್​ವೆುಂಟ್: ಪ್ರತಿ ವಿದ್ಯಾಸಂಸ್ಥೆಯಲ್ಲಿ ಪ್ಲೇಸ್​ವೆುಂಟ್ ಕಚೇರಿ ನಿರ್ವಿುಸಿದ್ದು, ಇಬ್ಬರೂ ಪ್ಲೇಸ್​ವೆುಂಟ್ ಆಫೀಸರ್​ಗಳನ್ನು ನೇಮಿಸಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆದುಕೊಳ್ಳುವ ಮೊದಲೇ ಅವರ ಸಾಮರ್ಥ್ಯ ತಿಳಿದುಕೊಳ್ಳಲು ಪರೀಕ್ಷೆ ನಡೆಸಲಾಗುತ್ತದೆ. ಅದರ ಆಧಾರದ ಮೇಲೆ ಅವರಿಗೆ ವಿವಿಧ ರೀತಿಯ ತರಬೇತಿ ನೀಡಲಾಗುತ್ತದೆ. ಅಂತಿಮ ವರ್ಷಕ್ಕೆ ಆಗಮಿಸುವ ವೇಳೆ ಅವರಿಗೆ ಉತ್ತಮ ಕಂಪನಿಯಲ್ಲಿ ಉದ್ಯೋಗಗಿಟ್ಟಿಸಿಕೊಳ್ಳವಂತೆ ರೂಪಿಸಲಾಗುತ್ತದೆ. ಸುಮಾರು 120 ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಸಲಿದ್ದು, ಶೇ.85 ಪ್ಲೇಸ್​ವೆುಂಟ್ ಇದೆ.

ಪಠ್ಯೇತರ ಚಟುವಟಿಕೆ: ಈ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡೆಗೂ ಶೈಕ್ಷಣಿಕ ಕಾರ್ಯ ಮೌಲ್ಯವನ್ನು ನೀಡಲಾಗುತ್ತಿದೆ. ಎನ್​ಸಿಸಿ ಮತ್ತು ಎನ್​ಎಸ್​ಎಸ್ ಇದೆ. ಇದರೊಂದಿಗೆ ವಾರ್ಷಿಕವಾಗಿ ‘ಮಿಲನ’ ಹಾಗೂ ‘ಇಂಪಲ್ಸ್’ ಎಂಬ ಅಂತರ ಕಾಲೇಜು ಸ್ಪರ್ಧೆ ನಡೆಸುತ್ತದೆ. ಈ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿಟಿಯು ಕಬ್ಬಡಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕೋಕೋನಲ್ಲಿ ರನ್ನರ್ ಅಪ್​ಆಗಿದ್ದಾರೆ. ಪ್ರತಿ ಶನಿವಾರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಯೋಗ ಕಲಿಸಿಕೊಡುತ್ತಿದೆ.

ರ‍್ಯಾಂಕಿಂಗ್​ನಲ್ಲೂ ಬೆಸ್ಟ್

ದಿ ಅಕ್ಸ್​ಫರ್ಡ್ ಕಾಲೇಜ್ ಆಫ್ ಸೈನ್ಸ್​ಗೆ ಇಂಡಿಯಾ ಟುಡೆ ನಿಲ್​ಸೆನ್ ಸರ್ವೆ 2017ರಲ್ಲಿ ಭಾರತದಲ್ಲಿ 8ನೇ ರ‍್ಯಾಂಕ್​ ಮತ್ತು ಕರ್ನಾಟಕದಲ್ಲಿ 2ನೇ ರ‍್ಯಾಂಕ್​ ನೀಡಿದೆ. ದಿ ವೀಕ್ ನಡೆಸಿದ ಹನ್ಸಾ ರಿಸರ್ಚ್ ಸರ್ವೆನಲ್ಲಿ ಭಾರತದಲ್ಲಿ 32ನೇ ರ‍್ಯಾಂಕ್​ ಪಡೆದಿದೆ. ಕೆರಿಯರ್ 360 ಸ್ಪೇಷಲ್ ರೇಟಿಂಗ್ 2017ರಲ್ಲಿ ‘ಎಎಎ’ ರ‍್ಯಾಂಕಿಂಗ್ ಪಡೆದಿದೆ. 2018ರಲ್ಲಿ ಔಟ್​ಲುಕ್ ನಡೆಸಿದ ಬೆಂಗಳೂರಿನಲ್ಲಿರುವ ಟಾಪ್​ಟೆನ್ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಆಕ್ಸ್​ಫರ್ಡ್ 9ನೇ ರ್ಯಾಂಕ್ ಪಡೆದಿದೆ. ಟಾಪ್ 100 ಕಾಲೇಜುಗಳಲ್ಲಿ 67ನೇ ರ್ಯಾಂಕ್ ಪಡೆದಿದೆ. ಬಹುತೇಕ ಆಕ್ಸ್​ಫರ್ಡ್​ನ ಎಲ್ಲ ವಿದ್ಯಾಸಂಸ್ಥೆಗಳು ಉತ್ತಮ ರ‍್ಯಾಂಕಿಂಗ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸಂಶೋಧನೆ ಮತ್ತು ಅಭಿವೃದ್ಧಿ

ಆಕ್ಸ್​ಫರ್ಡ್ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ವಿಭಾಗವನ್ನೇ ಪ್ರಾರಂಭಿಸಿದೆ. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿಟಿಯು ಸೇರಿದಂತೆ ಸುಮಾರು 2.5 ಕೋಟಿ ಮೌಲ್ಯದ ವಿವಿಧ ಯೋಜನೆಗಳನ್ನ ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಎಫ್​ಐಎಸ್​ಟಿ ಯೋಜನೆ ಅಡಿ ಸಂಶೋಧನೆಗಾಗಿ 40 ಲಕ್ಷ ರೂ. ನೀಡಿದೆ.


ನಮ್ಮ ಕಾಲೇಜಿನ ಉದ್ದೇಶವೇ ಬಡ ಮತ್ತು ಮಧ್ಯಮ ವರ್ಗದವರಿಗೆ ಗುಣಮಟ್ಟ ಶಿಕ್ಷಣ ನೀಡುವುದಾಗಿದೆ. ಹೀಗಾಗಿ ನಾವು ನಮ್ಮ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.

|ಎಸ್​ಎನ್​ವಿಎಲ್ ನರಸಿಂಹರಾಜು, ಅಧ್ಯಕ್ಷ, ದಿ ಆಕ್ಸ್​ಫರ್ಡ್ ಎಜುಕೇಷನ್ ಇನ್​ಸ್ಟಿಟ್ಯೂಷನ್

ನಮ್ಮಲ್ಲಿ ನುರಿತ ಉಪನ್ಯಾಸಕರಿದ್ದಾರೆ. ಪಠ್ಯ ಮತ್ತು ಪಠ್ಯೇತರ ವಿಷಯಗಳಿಗೂ ಹೆಚ್ಚಿನ ಅವಕಾಶ ಕಲ್ಪಿಸುತ್ತೇವೆ. ಪ್ಲೇಸ್​ವೆುಂಟ್ ಕೂಡ ಉತ್ತಮವಾಗಿದೆ. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವ ಬದ್ಧತೆ ಹೊಂದಿದ್ದೇವೆ.

| ಡಾ.ನಾಗರಾಜ್ ರಾಮರಾವ್, ನಿರ್ದೇಶಕರು, ದಿ ಆಕ್ಸ್​ಫರ್ಡ್ ಕಾಲೇಜ್ ಆಫ್ ಇಂಜಿನಿಯರಿಂಗ್


 

Leave a Reply

Your email address will not be published. Required fields are marked *