Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಉತ್ತಮ ಕಂಪನಿಗಳ ಷೇರು ಖರೀದಿಸಿದರೆ ಲಾಭ ಖಚಿತ

Monday, 11.12.2017, 3:03 AM       No Comments

| ಡಾ.ಭರತ್​ಚಂದ್ರ ಹೂಡಿಕೆ ತಜ್ಞ, ವೆಬ್​ಸೈಟ್: drbharathchandra.com

ಷೇರಿನಲ್ಲಿ ಹಣ ತೊಡಗಿಸಲು ನಿರ್ಧರಿಸಿರುವೆ. ಆದರೆ, ಈ ಬಗ್ಗೆ ಯಾರನ್ನೇ ಕೇಳಿದರೂ ನಷ್ಟ ಸಂಭವವೇ ಹೆಚ್ಚು ಎಂದೇ ಹೇಳುತ್ತಾರೆ. ಹಾಗಿದ್ದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಲು ಸಾಧ್ಯವೆ ಮತ್ತು ಎಷ್ಟು ಲಾಭ ಬರುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿ

| ರಾಕೇಶ್, ಬೆಂಗಳೂರು

ಎಲ್ಲರಿಗೂ ಉಪಯುಕ್ತವಾಗುವ ಒಳ್ಳೆಯ ಪ್ರಶ್ನೆ ಕೇಳಿದ್ದೀರಿ. ಷೇರುಪೇಟೆ ಬಗ್ಗೆ ಕಾರ್ಯಾಗಾರಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಹೆಚ್ಚು ಜನರನ್ನು ನಾವು ಭೇಟಿ ಮಾಡುತ್ತೇವೆ.ಅವರೆಲ್ಲರ ಪ್ರಶ್ನೆಯೂ ಇದೇ ಆಗಿದೆ. ಜನರೊಂದಿಗೆ ಚರ್ಚೆ ಮಾಡುವಾಗ ಷೇರು ಎಂಬ ಪದ ಬಳಸಿದರೆ ಮುಂದಿನ ಪದ ನಷ್ಟ ಎಂದೇ ಬರುತ್ತದೆ! ಇದಕ್ಕೆ ಕಾರಣ ಏನು ಎಂದು ಸಮೀಕ್ಷೆ ನಡೆಸಿದಾಗ ಕಂಡುಬಂದ ವಿಚಾರ ಇಂತಿದೆ:

1. ಸಾಮಾನ್ಯ ಜನರಿಗೆ ಷೇರುಪೇಟೆ ಬಗ್ಗೆ ಇರುವ ಮಾಹಿತಿ ಕೊರತೆ. 2. ಅರ್ಥ ಮಾಡಿಕೊಳ್ಳಲು ಕಠಿಣ ವಿಚಾರ. 3. ಮಾರುಕಟ್ಟೆಯಲ್ಲಿ ಷೇರು ಕೊಂಡುಕೊಳ್ಳಲು ಇರುವ ಗೊಂದಲವಾಗುವಷ್ಟು ಆಯ್ಕೆಗಳು. (ಉದಾ- ಎನ್​ಎಸ್​ಇಯಲ್ಲಿ ಇರುವ ಷೇರು 1700 ಇದ್ದರೆ ಬಿಎಸ್​ಇನಲ್ಲಿ 5700)

ಅಂಕಿಅಂಶಗಳ ಪ್ರಕಾರ ಭಾರತದ ಷೇರು ಮಾರುಕಟ್ಟೆಯಲ್ಲಿ ಸಕ್ರಿಯವಾಗಿ ವಹಿವಾಟು ನಡೆಸುವವರ ಸಂಖ್ಯೆ ಶೇ. 4 ಮಾತ್ರ. ಮಾರುಕಟ್ಟೆಯಲ್ಲಿರುವ ಎಲ್ಲ ಷೇರುಗಳು ಲಾಭದಾಯಕವಲ್ಲ. ಉತ್ತಮವಾಗಿ ನಡೆದುಕೊಂಡು ಬಂದಿರುವ ಬೆರಳೆಣಿಕೆಯಷ್ಟು ಕಂಪನಿಗಳಲ್ಲಿ ಲಾಭ ಇದೆ. ಅಂತಹ ಕಂಪನಿಗಳನ್ನು ಗುರುತಿಸಿ ಅವುಗಳ ಷೇರು ಖರೀದಿಸಿದರೆ ಲಾಭ ಖಚಿತ. ಇದನ್ನು ಅರ್ಥ ಮಾಡಿಕೊಳ್ಳದೆ ಜನರು, ಷೇರುಪೇಟೆ ವಿಷಯ ಅರಿಯದವರು ಇಲ್ಲವೆ ಬ್ರೋಕರ್​ಗಳ ಸಲಹೆಯಂತೆ ಷೇರುಗಳನ್ನು ಕೊಂಡು ನಷ್ಟ ಮಾಡಿಕೊಳ್ಳುತ್ತಾರೆ. ಇದಲ್ಲದೆ ಇನ್ನು ಕೆಲವರು ಬೆಳಗ್ಗೆ ಷೇರು ಖರೀದಿಸಿ ಸಂಜೆ ಹೊತ್ತಿಗೆ ಮಾರಾಟ ಮಾಡಲು ಹೋಗಿ ಕೈ ಸುಟ್ಟುಕೊಳ್ಳುತ್ತಾರೆ. (Intra Day Trading)

ಷೇರುಗಳಲ್ಲಿ ಉತ್ತಮ ಕಂಪನಿಗಳ ಆಯ್ಕೆ ಮಾಡಿ, ದೀರ್ಘಕಾಲಿಕ ಹೂಡಿಕೆ ಮಾಡಿದರೆ ಲಾಭ ಅಧಿಕ ಮತ್ತು ನಷ್ಟ ಸಂಭವ ಕಡಿಮೆ. ದೀರ್ಘಕಾಲದ ಹೂಡಿಕೆಗೆ ಉದಾಹರಣೆಯೆಂದರೆ 8, 10, 15, 25, 35 ವರ್ಷಗಳು. 25 ವರ್ಷದ ವ್ಯಕ್ತಿ ಉದ್ಯೋಗದಿಂದ ನಿವೃತ್ತಿ ಆಗುವವರೆಗೆ ಅಂದರೆ ಸುಮಾರು 35 ವರ್ಷಗಳ ಕಾಲ ಮಾಸಿಕವಾಗಿ ಅಥವಾ ಒಮ್ಮೆಗೆ ದೊಡ್ಡ ಮೊತ್ತವನ್ನು ಉತ್ತಮ ಲಾಭ ಇರುವ ಕಂಪನಿಗಳ ಷೇರಿನಲ್ಲಿ ಹೂಡಿದರೆ ಬರುವ ಲಾಭ ಊಹೆಗೂ ನಿಲುಕದು.

ಷೇರುಗಳಲ್ಲಿ ಮೂರು ವಿಧ Large capitalisation, medium capitalisation and Small capitalisation. ಲಾಭ ಅಥವಾ ಸುರಕ್ಷತೆಯ ಆಧಾರದಲ್ಲಿ Large capitalisation ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಇವುಗಳನ್ನು Index Stocks ಎಂದೂ ಕರೆಯುತ್ತಾರೆ.

ನಿಮ್ಮ ಪ್ರಶ್ನೆಯಲ್ಲಿ ಎಷ್ಟು ಲಾಭ ಗಳಿಸಬಹುದು ಮತ್ತು ಉದಾಹರಣೆಯನ್ನು ಕೊಡಿ ಎಂದು ಕೇಳಿದ್ದೀರಿ. ಈ ವಿವರಣೆ ನಿಮಗೆ ಮಾತ್ರವಲ್ಲ ಎಲ್ಲಾ ಓದುಗರಿಗೂ ಉಪಯುಕ್ತವಾಗುತ್ತದೆ ಎಂದು ಎಣಿಸಿ ಕೆಲವು ಲಾಭದಾಯಕ ಕಂಪನಿಗಳನ್ನು ಇಲ್ಲಿ ನೀಡಲಾಗಿದೆ.

ಈ ಪಟ್ಟಿಯಲ್ಲಿರುವ ಅಂಕಿಅಂಶಗಳ ಷೇರುಗಳು 2000 ಇಸ್ವಿಯ ಜನವರಿ 3ರಂದುರೂ. 10 ಸಾವಿರಕ್ಕೆ ಖರೀದಿಸಿ 2017ರ ಡಿಸೆಂಬರ್ 1ರಂದು ಮಾರಿದಾಗ ಬಂದ ಒಟ್ಟು ಮೊತ್ತ ಮತ್ತು ಲಾಭ (ಕಂಪನಿಗಳ ವ್ಯಾವಹಾರಿಕ ಲಾಭವಲ್ಲ).

Large capitalisation ಕಂಪನಿಗಳು- ಈಚರ್ ಮೋಟಾರ್ಸ್-ರೂ. 60,10,749 (ಸಿಎಜಿಆರ್ 42.97 %), ಬಜಾಜ್ ಫೈನಾನ್ಸ್-ರೂ. 34,38,554 (ಸಿಎಜಿಆರ್ 38.58 %), ವೇದಾಂತ-ರೂ. 17,28,313 (ಸಿಎಜಿಆರ್ 33.35 %), ಕೋಟಕ್ ಮಹಿಂದ್ರಾ ಬ್ಯಾಂಕ್-ರೂ. 8,98,882 (ಸಿಎಜಿಆರ್ 28.57 %). ಏಷ್ಯನ್ ಪೇಂಟ್ಸ್-ರೂ. 6,04,436 (ಸಿಎಜಿಆರ್ 26.69%).

ಇನ್ನಿತರ ಕಂಪನಿಗಳ ಷೇರು

ಮಂದರ್​ಸನ್ ಸುಮಿ- 1,05,29,412 (ಸಿಎಜಿಆರ್ 47.52 %), ಬಾಲಕೃಷ್ಣ ಇಂಡಸ್ಟ್ರೀಸ್-ರೂ. 78,89,474 (ಸಿಎಜಿಆರ್ 45.16 %), ಹ್ಯಾವೆಲ್ಲೆಸ್ ಇಂಡಿಯಾ (ಏಪ್ರಿಲ್ 2001ರಲ್ಲಿ ಷೇರು ಖರೀದಿ)-ರೂ. 42,37,083 (ಸಿಎಜಿಆರ್ 44.28 %), ಶ್ರೀರಾಮ ಟ್ರಾನ್ಸ್​ಪೋರ್ಟ್ ಫೈನಾನ್ಸ್- ರೂ.20,41,846(ಸಿಎಜಿಆರ್ 34.60%).

ದೀರ್ಘಕಾಲದ ರಿಟನ್ಸ್

ವಿಪ್ರೋ (1980ರಲ್ಲಿ ಮಾಡಿದ್ದ ಹೂಡಿಕೆ)-ರೂ. 5,55,74,40,000 (37 ವರ್ಷ ಆರು ತಿಂಗಳಲ್ಲಿ ದೊರೆತ ಲಾಭ) (ಸಿಎಜಿಆರ್ 42.30 %), ಇನ್ಪೋಸಿಸ್ (1993ರ ಜೂನ್​ನಲ್ಲಿ ಹೂಡಿಕೆ)-ರೂ. 4,90,75,200 (24 ವರ್ಷ 9 ತಿಂಗಳಲ್ಲಿ ದೊರೆತ ಲಾಭ) (ಸಿಎಜಿಆರ್ 40.97 %).

ಷೇರುಪೇಟೆ ಏರಿಳಿತಗಳ ಬಗ್ಗೆ ತಿಳಿಯಲು ಷೇರು ಮಾರುಕಟ್ಟೆಯ ಅಧ್ಯಯನ ನಡೆಸಬೇಕು. ಹೆಚ್ಚು ಶಿಕ್ಷಣ ಪಡೆಯಬೇಕು. ಷೇರು ಮಾರುಕಟ್ಟೆ ಕುರಿತು ನಡೆಯುವ ಸೆಮಿನಾರ್, ಕಾರ್ಯಾಗಾರಗಳಲ್ಲಿ ಭಾಗವಹಿಸಬೇಕು. ಸಮಗ್ರ ಮಾಹಿತಿ ಪಡೆದುಕೊಂಡರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಪಡೆಯಬಹುದು.

ನೀವೂ ಪ್ರಶ್ನೆ ಕೇಳಬಹುದು

ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ-ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ- ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸಬೇಕಾದ ಇಮೇಲ್: [email protected]

Leave a Reply

Your email address will not be published. Required fields are marked *

Back To Top