ಸಿನಿಮಾ

ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ


ಯಾದಗಿರಿ: ಮುಖ್ಯಶಿಕ್ಷಕರು ಹುದ್ದೆಯ ಅಗತ್ಯತೆಗೆ ವೈಯಕ್ತಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡು ಶೈಕ್ಷಣಿಕ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ತೊಡಗಿಸಿಕೊಂಡು ಸಮುದಾಯದ ಸಹಭಾಗಿತ್ವ ಖಾತ್ರಿಪಡಿಸುವುದು ಪ್ರಮುಖವಾಗಿದೆ ಎಂದು ಜಿಪಂ ಸಿಇಒ ಗರಿಮಾ ಪನ್ವಾರ್ ಅವರು ಹೇಳಿದರು.
ನಗರದ ಅಜೀಂ ಪ್ರೇಮ್ಜೀ ಪ್ರತಿಷ್ಠಾನದ ಶಾಲಾ ಸಭಾಂಗಣದಲ್ಲಿ ಸೋಮವಾರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಮಂತ್ರ ಸೋಸಿಯಲ್ ಸವರ್ಿಸ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಮರ್ಥ-ಮುಖ್ಯ ಶಿಕ್ಷಕರ ನಾಯಕತ್ವ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿ, ಮುಖ್ಯಗುರುಗಳು, ಶಿಕ್ಷಕರ ವ್ಯಕ್ತಿತ್ವ ವಿದ್ಯಾಥರ್ಿಗಳ ಮೇಲೆ ಅಗಾಧ ಪ್ರಭಾವ ಬಿರುವ ನಿಮಿತ್ತ ಶಿಕ್ಷಕರು ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ವರ್ಷ ಪೂತರ್ಿ ಶಿಕ್ಷಕರಿಗೆ ಶಾಲಾ ಹಂತದಲ್ಲಿ ನಾವಿನ್ಯಯುತ ಯೋಜನೆಗಳನ್ನು ಮಾಡಲು ಅವಕಾಶ ಕಲ್ಪಿಸುತ್ತದೆ ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯ ಜತೆಗೆ ಜಿಪಂ ಸಹ ಈ ಕಾರ್ಯಕ್ರಮದ ಅನುಷ್ಠಾನದ ಜವಾಬ್ದಾರಿ ವಹಿಸುತ್ತದೆ ಎಂದರು.
ಜಿಲ್ಲಾ ಪಂಚಾಯತಿ ಇತ್ತೀಚಗೆ ನಡೆದ ಕಾರ್ಯಕ್ರಮ ಮೇ.22 ರಂದು ಕಲಬುರಗಿ, ಅಪರ ಆಯುಕ್ತರ ಕಚೇರಿಯ ಕಾಯರ್ಾಗಾರದಲ್ಲಿ ಜಿಲ್ಲೆಯ ಎಲ್ಲ ಸಕರ್ಾರಿ ಶಾಲೆಗಳ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು. ಇವರುಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತಿಳಿಸಿರುವಂತೆ ನಾಯಕತ್ವ ಆಯಾಮಗಳಾದ ಸ್ವಯಂ ಅಭಿವೃದ್ದಿ, ಸಾಂಸ್ಥಿಕ ಅಭಿವೃದ್ಧಿ, ಸಮುದಾಯದ ಪಾಲ್ಗೊಳ್ಳುವಿಕೆ, ಶೈಕ್ಷಣಿಕ ಒಳಗೊಳ್ಳುವಿಕೆ ಮುಂತಾದ ವಿಷಯಗಳ ಬಗ್ಗೆ ಚಚರ್ಿಸಲಾಗಿದೆ. ಕಾಯರ್ಾಗಾರದಲ್ಲಿ ಶಾಲೆಯಲ್ಲಿ ಮಗುವಿಗೆ ಕಲಿಕಾ ಅನುಭವವನ್ನು ಕಟ್ಟಿ ಕೊಡುವ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಶಾಲಾ ಪರಿಸ್ಥಿತಿ ಮತ್ತು ಅವಕಾಶಗಳನ್ನು ಅವಲೋಕಿಸಲಾಯಿತು ಎಂದು ವಿವರಿಸಿದರು.
ತರಬೇತಿಯ ಅಂಗವಾಗಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಶೈಕ್ಷಣಿಕ ಯೋಜನೆಗಳನ್ನು ಕೈಗೆತ್ತ್ತಿಕೊಂಡು ಶಾಲಾಭಿವೃದ್ಧಿ ಸಾಸುವ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು ಸಕ್ರೀಯವಾಗಿ ತೊಡಗಿಕೊಳ್ಳುವ ಕಾರ್ಯಯೋಜನೆ ಬಗ್ಗೆ ಚಚರ್ಿಸಲಾಯಿತು. ಈ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಡಯಟ್ ಪ್ರಾಚಾರ್ಯರ ಶ್ರೀಶೈಲ್ ಬಿರಾದಾರ ಮಾತನಾಡಿ, 1ನೇ ತರಗತಿಗೆ ದಾಖಲಾದ ಮಗು 10 ನೇ ತರಗತಿಯವರೆಗೆ ಶಿಕ್ಷಣ ಮುಂದುವರೆಸಲು ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಮಕ್ಕಳು ಶಾಲೆಯಲ್ಲಿ ಉಳಿದುಕೊಳ್ಳುವಂತೆ ಹಾಗೂ ಗುಣಾತ್ಮಕ ಶಿಕ್ಷಣ ಸಿಗುವಂತೆ ಪ್ರಯತ್ನಿಸಬೇಕು ಎಂದು ಹೇಳಿದರು.
ಡಯಟ್ನ ಎಲ್ಲ ಹಿರಿಯ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ತರಬೇತಿಯಲ್ಲಿದ್ದರು.

Latest Posts

ಲೈಫ್‌ಸ್ಟೈಲ್