ಉಗ್ರರ ಮಟ್ಟ ಹಾಕಲು ಈಗಲೂ ಸಿದ್ಧ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮೊಳಗಿದ ಬೋಲೋ ಭಾರತ್ ಮಾತಾಕಿ ಜೈ, ವಂದೇ ಮಾತರಂ ಘೋಷಣೆ, ಉಗ್ರರ ವಿರುದ್ಧ ಸಿಡಿದೆದ್ದ ಆಕ್ರೋಶ, ಪಾಕ್ ಪೋಷಿತ ಉಗ್ರರ ಜತೆ ದೇಶದ ಒಳಗಿರುವ ಭಯೋತ್ಪಾದಕರನ್ನು ಹೊಡೆದೋಡಿಸಬೇಕೆಂಬ ಒತ್ತಡ. ಪುಲ್ವಾಮಾದಲ್ಲಿ ನಮ್ಮ ಸೈನಿಕರನ್ನು ಮೋಸದಿಂದ ಕೊಂದ ಉಗ್ರರ ವಿರುದ್ಧ ರೊಚ್ಚಿಗೆದ್ದಿರುವ ಮಾಜಿ ಸೈನಿಕರ ಒಕ್ಕೊರಲ ಧ್ವನಿ ಇದು.
ದಿಗ್ವಿಜಯ 24*7 ನ್ಯೂಸ್ ಚಾನಲ್, ಪವರ್ ನ್ಯೂಸ್ ಆ್ಯಪ್ ಸಹಯೋಗದಡಿ ನಾಡಿನ ನಂ.1 ವಿಜಯವಾಣಿ ಪತ್ರಿಕೆ ಕಲಬುರಗಿ ಬ್ಯೂರೋ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರು, ಕೇಂದ್ರ ಸರ್ಕಾರದಿಂದ ಕರೆ ಬಂದರೆ ನಾವು ಮತ್ತೆ ಯುದ್ಧಕ್ಕೆ ಹೋಗಲು ಸಿದ್ಧ, ಭಯೋತ್ಪಾದಕರನ್ನು ಹೊಡೆದುರುಳಿಸಲು ಕೈ ಜೋಡಿಸುತ್ತೇವೆ ಎಂಬ ಪ್ರತಿಜ್ಞೆ ಮಾಡಿದರು.
ಹಿಂದೆ ಪಾಕಿಸ್ತಾನ, ಚೀನಾ, ಬಾಂಗ್ಲಾದಂಥ ದೇಶಗಳ ವಿರುದ್ಧ ನಡೆದ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರು ಸಂವಾದದ ಮೂಲಕ ಯುವಕರಿಗೆ ದೇಶಭಕ್ತಿ ಕುರಿತು ಮಾರ್ಗದರ್ಶನ ನೀಡಿದರು. ದುಷ್ಟ ರಾಜಕಾರಣ ಬಿಟ್ಟು ದೇಶಪ್ರೇಮ ಮೆರೆಯಿರಿ. ಸೈನಿಕರ ಬಗ್ಗೆ ಅನಗತ್ಯ ಅನುಮಾನ ಪಡಬೇಡಿ ಎಂದು ರಾಜಕಾರಣಿಗಳಿಗೆ ಕಿವಿಮಾತು ಹೇಳಿದರು.
ದೇಶದೊಳಗಿರುವ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಮಟ್ಟ ಹಾಕುವುದು ಅಗತ್ಯವಾಗಿದೆ. ನಮ್ಮ ಅನ್ನ ತಿಂದು ನಮ್ಮ (ದೇಶ) ಬಗ್ಗೆಯೇ ನಕಾರಾತ್ಮಕ ಧೋರಣೆ ತಳೆದಿರುವವರ ಬಾಯಿಗೆ ಮೊದಲು ಬೀಗ ಹಾಕಬೇಕಿದೆ ಎಂದು ಮಾಜಿ ಸೈನಿಕರೊಬ್ಬರು ತಮ್ಮ ಆಕ್ರೋಶ ಹೊರಹಾಕಿದರು.
ಅವಕಾಶ ಸಿಕ್ಕರೆ ಈಗಲೂ ದೇಶದ ಸುರಕ್ಷೆಗೆ ಹೋರಾಡಲು ಸಿದ್ಧರಿದ್ದೇವೆ. ಸರ್ಕಾರವೇನಾದರೂ ಕರೆ ಕೊಟ್ಟರೆ ನಾವು ನಮ್ಮ ಸ್ವಂತ ಹಣದಲ್ಲಿ ದೇಶದ ಗಡಿಗೆ ತೆರಳಿ ಶತ್ರುಗಳಿಗೆ ತಕ್ಕ ಶಾಸ್ತಿ ನೀಡಬಲ್ಲೆವು. ಕರ್ತವ್ಯದಿಂದ ನಿವೃತ್ತಿ ಹೊಂದಿರಬಹುದು. ಆದರೆ ದೇಶದ ಪರ ಸೇವಾ ಮನೋಭಾವದಿಂದ ಅಲ್ಲ ಎಂದು ತಮ್ಮದೇ ಧಾಟಿಯಲ್ಲಿ ದೇಶಭಕ್ತಿ, ದೇಶಪ್ರೇಮದ ಮಾತುಗಳನ್ನಾಡಿ ಮಾಜಿ ಸೈನಿಕ ಶಾಂತಯ್ಯ ಸ್ವಾಮಿ ನೆರೆದವರಲ್ಲಿ ಶತ್ರು ರಾಷ್ಟ್ರದ ವಿರುದ್ಧ ಕಿಚ್ಚು ಹೊತ್ತಿಸಿದರು.
ತಮ್ಮ ತಾರುಣ್ಯದ ದಿನಗಳಲ್ಲಿ ಸೈನ್ಯಕ್ಕೆ ಸೇರಿ 1961-62ರಲ್ಲೇ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಜತೆ ನಡೆದ ಯುದ್ಧದಲ್ಲಿ ಭಾಗವಹಿಸಿ ಶತ್ರುಗಳ ರುಂಡ ಚೆಂಡಾಡಿದ ಗೊಬ್ಬುರ ಗ್ರಾಮದ ಸುಬೇದಾರ ಶಾಂತಯ್ಯ ಸ್ವಾಮಿ, ತಮ್ಮ ಅನುಭವಗಳನ್ನು ಹೇಳುತ್ತಿದ್ದರೆ ಸಭಿಕರ ಮೈ ಜುಮ್ಮೆನ್ನುವಂತಿತ್ತು.
ಯಾವುದೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಲ್ಲದ, ಚಳಿ, ಗಾಳಿ, ಮಳೆ ತಡೆದುಕೊಳ್ಳುವ ಯಾವುದೇ ವೈಜ್ಞಾನಿಕ ಸಲಕರಣೆಗಳಿಲ್ಲದ ಸಂದರ್ಭದಲ್ಲಿ ಯುದ್ಧ ಗೆದ್ದು ಬಂದಿರುವ ನಾವು ಇನ್ನೂ ಇದ್ದೇವೆ. ಈಗ ಎಲ್ಲ ಆಧುನಿಕತೆ ಸೌಲಭ್ಯಗಳಿದ್ದು, ವೈರಿಗಳನ್ನು ಎದುರಿಸುವ ಶಕ್ತಿ ನಮ್ಮ ಸೈನಿಕರಲ್ಲಿದೆ. ಆದರೆ ಉಗ್ರರ ಮೋಸದ ವಿಧ್ವಂಸಕ ಕೃತ್ಯಕ್ಕೆ ಸಾಯುತ್ತಿರುವ ನಮ್ಮ ತರುಣರನ್ನು ನೋಡಿ ಕರುಳು ಕಿತ್ತು ಬರುತ್ತದೆ ಎಂದು ನೋವು ತೋಡಿಕೊಂಡರು.

ಸವಲತ್ತುಗಳ ವಿವರ ನೀಡಿದ ಅಧಿಕಾರಿ: ಸಂವಾದದಲ್ಲಿ ಪಾಲ್ಗೊಂಡಿದ್ದ ಸೈನಿಕರ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಕಚೇರಿ ವ್ಯವಸ್ಥಾಪಕ ಕೆ.ಕೃಷ್ಣ ಮಾತನಾಡಿ ಇಲಾಖೆಯಿಂದ ಮಾಜಿ ಸೈನಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಸೈನಿಕರ ಕಲ್ಯಾಣ ಮತ್ತು ಪುನರ್ವಸತಿಗಾಗಿ ಕರ್ನಾಟಕದಲ್ಲಿ 14 ಕಚೇರಿಗಳಿವೆ. ಕಲಬುರಗಿ, ಬೀದರ್, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ಕಲಬುರಗಿಯಲ್ಲಿ ಕಚೇರಿ ಇದೆ. ನಾಲ್ಕು ಜಿಲ್ಲೆಗಳ ಮಾಜಿ ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಈ ಕಚೇರಿಯಲ್ಲಿ ಕೇವಲ ಇಬ್ಬರು ಸಿಬ್ಬಂದಿ ಇದ್ದೇವೆ. ವಾಸ್ತವದಲ್ಲಿ ಒಬ್ಬ ಉಪನಿದರ್ೇಶಕ, ವ್ಯವಸ್ಥಾಪಕ, ಕಚೇರಿ ಅಧೀಕ್ಷಕ, ಎಸ್ಡಿಎ, ಎಫ್ಡಿಎ ಹುದ್ದೆಗಳಿದ್ದು, ಖಾಲಿ ಇವೆ. ಹೀಗಿದ್ದೂ ಮಾಜಿ ಸೈನಿಕರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸುತ್ತಿದ್ದೇವೆ. ಹಣಕಾಸಿನ ನೆರವು ನೀಡುವಲ್ಲಿ ವಿಳಂಬವಾಗುತ್ತಿಲ್ಲ. ಆದರೆ ಕೆಲವರು ಜಮೀನು ಬೇಕು ಎಂದು ಅಜರ್ಿ ಸಲ್ಲಿಸುತ್ತಾರೆ. ಜಮೀನು ಮಂಜೂರು ಅಧಿಕಾರ ಜಿಲ್ಲಾಧಿಕಾರಿಗಳಿಗಿದೆ. ನಮ್ಮ ಇಲಾಖೆಗಿಲ್ಲ. ಇನ್ನು ವೀರಮರಣವನ್ನಪ್ಪಿದ ಯೋಧರ ಅವಲಂಬಿತರಿಗೆ ಅನುಕಂಪ ಆಧಾರದ ಮೇಲೆ ನೌಕರಿ ಕೊಡಿಸಬೇಕು ಎಂದರೆ, ಸೈನಿಕ ಹುದ್ದೆ ಕೇಂದ್ರ ಸಕರ್ಾರದ ವ್ಯಾಪ್ತಿಗೆ ಬರುತ್ತದೆ. ರಾಜ್ಯ ಸಕರ್ಾರ ಈ ಕೆಲಸ ಕೊಡಲು ಕಾನೂನು ತೊಡಕುಗಳಿವೆ. ಇವೆಲ್ಲವೂ ಪರಿಹಾರವಾಗಬೇಕಿದೆ ಎಂದು ವಿವರಿಸಿದರು.

ಸೈನಿಕರ ನಿವೃತ್ತಿ ಬದುಕು ಸಹ್ಯವಾಗಿರಲಿ: ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸವರಾಜ ಬಿರಾದಾರ ಮಾತನಾಡಿ, ಮನುಷ್ಯ ಜೀವನದ ಅಮೂಲ್ಯ ಎನಿಸುವ 20ರಿಂದ 40 ವರ್ಷದ ವಯೋಮಿತಿಯನ್ನು ಭಾರತೀಯ ಸೈನ್ಯದಲ್ಲಿ ಕಳೆಯುವ ಯೋಧರು ತಮಗಾಗಿ ಚಿಂತಿಸದೆ ದೇಶಕ್ಕಾಗಿ ಚಿಂತಿಸುತ್ತ ಬದುಕುತ್ತಾರೆ. ಯಾವುದೇ ದುರಂತಗಳಾಗದೆ ನಿವೃತ್ತರಾದ ನಂತರದ ಬದುಕಿಗೆ ಮತ್ತೆ ಸಂಘರ್ಷ ಮಾಡುವ ಪರಿಸ್ಥಿತಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಬೇಕು. ಆರ್ಥಿಕವಾಗಿ ಸಾಕಷ್ಟು ತೊಂದರೆ ಇರುವವರೇ ಸೈನ್ಯಕ್ಕೆ ಸೇರುವುದು ನಿಜವಾದರೂ, ದೇಶಪ್ರೇಮಕ್ಕಾಗಿ ಸೇರುವವರ ಸಂಖ್ಯೆಯೂ ಹೆಚ್ಚಿದೆ. ಅವರಿಗೆ ಅಗತ್ಯ ಸವಲತ್ತು ನೀಡಬೇಕು. ಸೈನಿಕ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು. ಸೈನಿಕ ಮಕ್ಕಳಿಗೆ ವಸತಿಗೃಹಗಳಲ್ಲಿ ಆದ್ಯತೆ ನೀಡಬೇಕು. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸೈನಿಕ ಭರ್ತಿ ಕಚೇರಿ ಸ್ಥಾಪಿಸಬೇಕು. ಮಿಲಿಟರಿ ಸ್ಟೇಷನ್ ಸ್ಥಾಪಿಸಿ ಕ್ಯಾಂಟೀನ್ಗಳನ್ನು ನಿರ್ಮಿಸಬೇಕು. ಸೈನಿಕರ ಕಲ್ಯಾಣ ಇಲಾಖೆಗೆ ಹೆಚ್ಚಿನ ಸಿಬ್ಬಂದಿ ನೀಡಬೇಕು. ನಿಷ್ಠೆಯಿಂದ ದೇಶ ಸೇವೆ ಮಾಡಿದ ಸೈನಿಕರಿಗೆ ನಿವೃತ್ತಿ ಬದುಕು ನೆಮ್ಮದಿಯಾಗಿರುವಂತೆ ನೋಡಿಕೊಳ್ಳಬೇಕಿದೆ ಎಂದರು.

ಸೈನ್ಯ ಸೇರಿಸಿದ ಸಿನಿಮಾ: ನನಗಾಗ 16 ವರ್ಷ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ನಿತ್ಯದ ಊಟಕ್ಕೆ ಪರದಾಡುವಂಥ ಪರಿಸ್ಥಿತಿ. ಅದರಲ್ಲಿ ಸಿನಿಮಾ ನೋಡುವ ಹುಚ್ಚು. ಹೇಗೋ ಐಡಿಯಾ ಮಾಡಿ ಪುಕ್ಕಟೆ ಸಿನಿಮಾ ನೋಡುತ್ತಿದ್ದೆ. ಆಗ್ ಕಾ ಪಂಛಿ ಎಂಬ ಹಿಂದಿ ಸಿನಿಮಾ 16 ಬಾರಿ ನೋಡಿದೆ. ಯುದ್ಧದ ಕುರಿತ ಸಿನಿಮಾ ಅದು. ನಾನೂ ಸೈನಿಕನಾಗಿ ಯುದ್ಧ ಮಾಡಬೇಕು ಎಂಬ ಉತ್ಕಟ ಹಂಬಲ ಉಂಟಾಯಿತು. ರೈಲ್ವೆ ಟಿಕೆಟ್ ಇಲ್ಲದೆ ಸಿಕಿಂದರಾಬಾದ್ಗೆ ಪ್ರಯಾಣಿಸಿದೆ. ಅವರಿವರ ಸಹಾಯದಿಂದ ಕೊನೆಗೂ ಸೈನ್ಯಕ್ಕೆ ಸೇರಿ ಮೂರು ಯುದ್ಧಗಳಲ್ಲಿ ಭಾಗವಹಿಸಿದೆ ಎಂದು ಸೇನಾ ಮೆಡಲ್ ಪಡೆದ ನಿವೃತ್ತ ಸುಬೇದಾರ ಶಾಂತಯ್ಯ ಸ್ವಾಮಿ ನನೆಪಿನ ಬುತ್ತಿ ಬಿಚ್ಚಿಟ್ಟರು.

ಕಡ್ಡಾಯ ಸೈನ್ಯ ತರಬೇತಿ ಅಗತ್ಯ: ಸರ್ಕಾರಿ ಉದ್ಯೋಗ ಸೇರುವವರಿಗೆ ಕಡ್ಡಾಯ ಸೈನ್ಯ ತರಬೇತಿ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂಬುದು ಬಹುತೇಕ ಮಾಜಿ ಸೈನಿಕರ ಅಭಿಪ್ರಾಯವಾಗಿತ್ತು. ಸೈನ್ಯದ ಶಿಸ್ತು, ದೇಶಪ್ರೇಮ ಸಕರ್ಾರಿ ನೌಕರರಿಗೆ ಬಂದರೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಬಹುದಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳ ಪದವಿಪೂರ್ವ ಕಾಲೇಜುಗಳಿಗೆ ತೆರಳಿ ಯುವಕರಿಗೆ ಸೈನ್ಯಕ್ಕೆ ಸೇರಲು ಪ್ರೋತ್ಸಾಹಿಸುವುದರ ಜತೆ ಸೇನೆಗೆ ಸೇರಬೇಕಾದ ಕ್ರಮಗಳ ಕುರಿತು ತರಬೇತಿ ನೀಡಲು ಸಿದ್ಧ ಎಂದು ಮಾಜಿ ಸೈನಿಕರ ಕಲ್ಯಾಣ ಸಂಘದ ಅಧ್ಯಕ್ಷ ಬಸವರಾಜ ಬಿರಾದಾರ ತಿಳಿಸಿದರು.

ಸಂವಾದಕ್ಕೆ ಸಾಕ್ಷಿಯಾದ ಮಾಜಿ ಸೈನಿಕರು: ಅಣವೀರಪ್ಪ ಟೆಂಗಳಿ, ಸಿದ್ಧಾರೂಢ ಪೂಜಾರಿ, ಮಹಾದೇವಪ್ಪ ಹೊನ್ನಶೆಟ್ಟಿ, ನಾಗಭೂಷಣ ಸ್ವಾಮಿ, ರತನಚಂದ್ರ ಗೊಗಡೆ,ಪರಮೇಶ್ವರ ಶಿವಗೊಂಡ, ಸಂತೋಷಕುಮಾರ, ಸಿದ್ರಾಮಪ್ಪ ಪಾಟೀಲ, ಸುಭಾಷಚಂದ್ರ ಕಲಶೆಟ್ಟಿ, ವಿಲಾಸ ಬಾಬು, ಹಣಮಂತ, ರವೀಂದ್ರ ಪ್ರಸಾದ ದೀಕ್ಷಿತ್, ಓಂಕಾರರೆಡ್ಡಿ, ಬಸವರಾಜ, ವಸಂತ ಜೋಶಿ, ಸಿದ್ರಾಮಪ್ಪ, ಶಿವಪುತ್ರ ಲಂಗೋಟಿ ಇತರರು ಭಾಗವಹಿಸಿದ್ದರು.

ಸೋಗಿನ ಪ್ರಗತಿಪರರಿಗೆ ಶಾಸ್ತಿ: ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ದೇಶ ವಿರೋಧಿ ಹೇಳಿಕೆಗಳನ್ನು ನೀಡುವವರನ್ನು ಮಟ್ಟ ಹಾಕಲು ಸೇನೆಗೆ ಅಧಿಕಾರ ನೀಡಬೇಕು. ವಿಶ್ವವಿದ್ಯಾಲಯ, ವಿವಿಧ ಸಂಘಟನೆಗಳಲ್ಲಿದ್ದು, ಸಕರ್ಾರದ ಸಂಬಳ ತೆಗೆದುಕೊಂಡು ಸರ್ಕಾರದ ವಿರುದ್ಧವೇ ಹೇಳಿಕೆ ನೀಡುವವರನ್ನು ಮಟ್ಟ ಹಾಕಬೇಕು ಎಂಬ ಮಾಜಿ ಯೋಧರ ಒಕ್ಕೊರಲ ಒತ್ತಾಯ ಸಂವಾದದಲ್ಲಿ ಕೇಳಿಬಂದಿತು.