ತೀರ್ಥಹಳ್ಳಿ: ಕಾಶ್ಮೀರದಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ನಡೆದಿರುವ ದಾಳಿಯನ್ನು ಶಾಸಕ ಆರಗ ಜ್ಞಾನೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ನಮ್ಮ ಸೈನ್ಯ ಶಕ್ತಿಯನ್ನು ಎದುರಿಸುವ ಧೈರ್ಯ ಇಲ್ಲದ ಪಾಪಿಗಳು ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿಯನ್ನು ಧರ್ಮ ಕೇಳಿ ಮಾಡುತ್ತಾರೆ ಎಂದರೆ ಅವರ ಧರ್ಮಾಂಧತೆಗೆ ಧಿಕ್ಕಾರವಿರಲಿ. ಪಾಕಿಸ್ತಾನ ಪೋಶಿಸುತ್ತಿರುವ ಉಗ್ರರು ಇದಕ್ಕೆ ತಕ್ಕ ಬೆಲೆ ತೇರಬೇಕಾಗುತ್ತದೆ ಎಂದಿರುವ ಶಾಸಕರು, ಈ ರೀತಿ ಧರ್ಮ ಕೇಳಿ ಕೊಲ್ಲುವ ಕೃತ್ಯ ಮಾಡಿದವರ ವಿರುದ್ಧ ಈಗಲಾದರೂ ಈ ದೇಶದ ಜನ ಧರ್ಮ, ಜಾತಿ, ಪಕ್ಷ ಮೀರಿ ಪ್ರತಿಭಟಿಸುವ ಕೆಲಸ ಮಾಡಬೇಕಿದೆ.
ಭಾರತದ ಸೈನ್ಯದ ಶಕ್ತಿಯನ್ನು ಎದುರಿಸಲು ಭಯಪಡುವ ಪಾಕಿಸ್ತಾನ ಉಗ್ರರ ಮೂಲಕ ಈ ಕೃತ್ಯ ನಡೆಸಿರುವುದು ಖಂಡನೀಯ. ಇದಕ್ಕೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ತಕ್ಕ ಉತ್ತರ ನೀಡಲಿದೆ ಎಂದಿದ್ದಾರೆ.
ದಾಳಿ ಮಾಡಿದ ಸಂದರ್ಭದಲ್ಲಿ ಬದುಕಿದವರ ಮುಂದೆ ನಿಮ್ಮ ಮೋದಿಗೆ ಹೋಗಿ ಹೇಳಿ ಎಂದು ಕಳಿಸಿದ್ದೀರಿ. ಉಗ್ರಗಾಮಿಗಳೇ ನಿಮ್ಮ ಹುಟ್ಟಡಗಿಸುವ ಕಾರ್ಯಕ್ಕೆ ನೀವೇ ಚಾಲನೆ ಕೊಟ್ಟಿದ್ದೀರಿ. ಕಾದು ನೋಡಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
