ಹೂವಿನಹಡಗಲಿ: ಮಾಗಳ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿರುವ ರಂಗಾಪುರ ಉಗ್ರ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ನರಸಿಂಹ ಸ್ವಾಮಿ ಜಯಂತಿ ಆಚರಿಸಲಾಯಿತು.

ಉಗ್ರ ನರಸಿಂಹಸ್ವಾಮಿಗೆ ಅಭಿಷೇಕ, ವಿವಿಧ ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಉಗ್ರ ನರಸಿಂಹಸ್ವಾಮಿಯ ಮುಳ್ಳು ಗದ್ದುಗೆ ಉತ್ಸವ ಜರುಗಲಿದೆ.
ಈ ಉತ್ಸವದಲ್ಲಿ ಹಿಂದಿನ ಕಾಲದಲ್ಲಿ ಮಾಗಳ ಗ್ರಾಮದಲ್ಲಿ ವಾಸವಾಗಿದ್ದ 200 ಬ್ರಾಹ್ಮಣರ ಕುಟುಂಬದವರು ಭಾಗವಹಿಸುತ್ತಾರೆ. ಬೆಳಗ್ಗೆ ಉಗ್ರನರಸಿಂಹ ಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಹೊರವಲಯದಲ್ಲಿರುವ ಕಾರಿ ಮುಳ್ಳಿಗೆ ಪೂಜೆ ಮಾಡಿ ದೇಗುಲಕ್ಕೆ ಮರಳಿದ ನಂತರ ಮುಳ್ಳು ಗದ್ದುಗೆ ಉತ್ಸವ ನಡೆಯಲಿದೆ.