21 C
Bengaluru
Wednesday, January 22, 2020

ಈ ವೃಕ್ಷವಾದರೂ ಯಾವುದು?

Latest News

ನೇಪಾಳ ದುರಂತ| ಮೂವರು ಮಕ್ಕಳ ಹುಟ್ಟುಹಬ್ಬಕ್ಕೆ ತೆರಳಿದ್ದ ಕೇರಳ ಕುಟುಂಬ ಮರಳಿದ್ದು ಶವವಾಗಿ

ಕೊಚ್ಚಿ: ನೇಪಾಳ ಪ್ರವಾಸಕ್ಕೆಂದು ತೆರಳಿ ಹೋಟೆಲ್​ವೊಂದರಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲ ಕುಟುಂಬದ ಕರುಣಾಜನಕ ಕತೆಯಿದು. ಮೃತ ತಿರುವನಂತಪುರ ನಿವಾಸಿ ಪ್ರವೀಣ್​ ಮತ್ತು ಸರಣ್ಯ...

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳಿಗೆ ಉಸಿರು ತುಂಬಿ!

ದಾವಣಗೆರೆ: ರಾಜ್ಯದಲ್ಲಿ ಸರಿಸುಮಾರು 3 ಸಾವಿರ ಸರ್ಕಾರಿ ಆಸ್ಪತ್ರೆಗಳಿದ್ದು, ನಿರ್ವಹಣೆ ಕೊರತೆ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿನ ಉಪಕರಣಗಳು ಜೀವ ಕಳೆದುಕೊಂಡಿವೆ. ಹೀಗಾಗಿ ಸಾವಿರಾರು ರೋಗಿಗಳು...

ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿದೆ: ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ

ಹಾಸನ: ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿರುವ ಅನುಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ...

ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಪೊಲೀಸ್​ ವಿಚಾರಣೆ ವೇಳೆ ಆರೋಪಿ ಆದಿತ್ಯರಾವ್ ಹೇಳಿದ್ದೇನು?​

ಬೆಂಗಳೂರು: ಸಮಾಜದ ವ್ಯವಸ್ಥೆಗೆ ಬೇಸತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದಾಗಿ ಆರೋಪಿ ಆದಿತ್ಯರಾವ್​ ಪೊಲೀಸ್​ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ವಿಐಪಿ ಗೆಸ್ಟ್ ಹೌಸ್​ನಲ್ಲಿ...

ನೇಪಾಳದ ಹೋಟೆಲ್​ನಲ್ಲಿ ಶವವಾಗಿ ಪತ್ತೆಯಾಗಿದ್ದ 8 ಕೇರಳ ಪ್ರವಾಸಿಗರ ಸಾವಿಗೆ ಕಾರಣವೇನು?: ಕುಟುಂಬದವರಿಗೆ ಮೃತದೇಹ ಹಸ್ತಾಂತರ

ಕಾಠ್ಮಂಡು: ನೇಪಾಳದ ಹೋಟೆಲ್​ವೊಂದರಲ್ಲಿ ಕೇರಳ ಮೂಲದ 8 ಪ್ರವಾಸಿಗರು ಶವವಾಗಿ ಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ. ರೂಮಿನೊಳಗೆ ಇಡಲಾಗಿದ್ದ ಔಟ್​ಡೋರ್​ ಹೀಟರ್​ನ ವಿಷಕಾರಿ ಕಾರ್ಬನ್​...

ಸಾಮಾನ್ಯವಾಗಿ ಲೋಕದಲ್ಲಿ ನಾವು ನೋಡುವ ವೃಕ್ಷಗಳ ಬೇರುಗಳು ಕೆಳಗೆ ಭೂಮಿಯ ಆಳದಲ್ಲಿರುತ್ತವೆ. ಕೊಂಬೆಗಳು ಮೇಲೆಲ್ಲ ಹರಡಿರುತ್ತವೆ.

ಆದರೆ ಶ್ರೀಕೃಷ್ಣನು ಗೀತೆಯಲ್ಲಿ-

ಊರ್ಧ್ವಮೂಲಮಧಃಶ್ಶಾಖಾ ಅಶ್ವತ್ಥಮ್ ಪ್ರಾಹುರವ್ಯಯಂ|

ಛಂದಾಂಸಿ ಯಸ್ಯ ಪರ್ಣಾನಿ, ಯಸ್ತಂ ವೇದ ಸ ವೇದವಿತ್||

‘ಮೇಲೆ ಬೇರು, ಕೆಳಗೆ ಕೊಂಬೆಗಳನ್ನುಳ್ಳ ಅಶ್ವತ್ಥವೃಕ್ಷವಿದೆ. ಅದನ್ನು ಆಮೂಲಾಗ್ರವಾಗಿ ಯಾರು ತಿಳಿಯುತ್ತಾರೋ ಅವನನ್ನೇ ವೇದವಿತ್- ವೇದವನ್ನು ತಿಳಿದವನು ಅಥವಾ ಸತ್ಯವನ್ನು ತಿಳಿದವನು ಎನ್ನಲಾಗುತ್ತದೆ’ ಎಂದಿದ್ದಾನೆ.

ಒಮ್ಮೆ ಶ್ರೀರಂಗ ಮಹಾಗುರುಗಳು ಶಿಷ್ಯರ ಸಮ್ಮುಖದಲ್ಲಿ ‘ಇಂಥದೊಂದು ವೃಕ್ಷವನ್ನು ನೀವೆಲ್ಲಾದರೂ ನೋಡಿದ್ದೀರಾ?’ ಎಂದು ಕೇಳಿದರು. ಅಲ್ಲಿದ್ದವರೆಲ್ಲ, ‘ನಿಸರ್ಗದಲ್ಲಿ ಅಂಥ ವೃಕ್ಷವನ್ನು ನೋಡಿಲ್ಲ’ ಎಂದಾಗ ‘ಇಲ್ಲೇ ಇವೆಯಪ್ಪಾ’ ಎಂದರು. ಆಗಲೂ ಗೊತ್ತಾಗದಿದ್ದಾಗ ಹೇಳಿದರು- ‘ಆ ವೃಕ್ಷವನ್ನು ಹೊತ್ತುಕೊಂಡು ನಾವೆಲ್ಲರೂ ಓಡಾಡುತ್ತಿದ್ದೇವಪ್ಪಾ, ನಮ್ಮ ಶರೀರವೇ ಅಂತಹ ವೃಕ್ಷವಾಗಿದೆ’ ಎಂದು ವಿವರಿಸಿದರು. ನಮ್ಮ ಮಸ್ತಿಷ್ಕ ಅಂದರೆ ತಲೆ, ಮೇಲಿದೆ. ಅದುವೇ ಈ ಜೀವನವೃಕ್ಷದ ಬೇರು. ಅದು ಹೇಳಿದಂತೆ ಶಾಖೆಗಳಂತಿರುವ ಕೈ-ಕಾಲುಗಳು ಕಾರ್ಯ ನಿರ್ವಹಿಸುತ್ತವೆ. ನಾವು ಯಾವ ಕ್ರಿಯೆಯನ್ನು ಮಾಡಬೇಕಾದರೂ ತಲೆ ಹೇಳಿದಂತೆಯೇ ಮಾಡಬೇಕು. ತಲೆ ಇಲ್ಲದಿದ್ದರೆ ಕೈ ಕಾಲುಗಳು ನಿಶ್ಚೇಷ್ಟಿತ. ನಮ್ಮ ನಮ್ಮ ಮಟ್ಟಿಗೆ ನಮ್ಮ ತಲೆಯೇ ನಮಗೆ ದೇವರು. ಅದರ ನಿರ್ದೇಶನದಲ್ಲೇ ನಾವು ಬದುಕುವುದು. ಎಂದೇ ತಲೆಯನ್ನು ಚೆನ್ನಾಗಿಟ್ಟುಕೊಂಡರೆ ಜೀವನ ಚೆನ್ನಾಗಿ ಆಗುತ್ತದೆ. ಬೇರಿಗೆ ಒಳ್ಳೆಯ ಸಂಸ್ಕಾರಗಳ ಕೃಷಿ ನಡೆದರೆ ಈ ಜೀವನವೃಕ್ಷದಲ್ಲೂ ಪರಮ ಫಲವನ್ನು ಪಡೆಯಬಹುದು ಎಂಬುದು ಈ ದೇಶದ ಮಹರ್ಷಿಗಳ ಮಾತು.

ಇಲ್ಲಿ ಬೆಳೆದುಬಂದ ಸಂಸ್ಕೃತಿ, ನಾಗರಿಕತೆಗಳೆಲ್ಲವೂ ಮಾನವನ ಮೇಲ್ಬೇರಾದ ಮಸ್ತಿಷ್ಕವನ್ನು ಸಹಜವಾಗಿ ಬೆಳೆಸುವ, ಅದಕ್ಕಾಗಿ ಮಾಡುವ ಕೃಷಿಯಾಗಿಯೇ ಬೆಳೆದುಬಂದಿವೆ ಎಂಬುದನ್ನು ಮರೆಯದಿರೋಣ. ಜೀವನ ವ್ಯವಸಾಯವನ್ನು ಚೆನ್ನಾಗಿ ಬಲ್ಲ ಭಾರತೀಯ ಮಹರ್ಷಿಗಳು ಇಲ್ಲಿನ ಸಂಸ್ಕಾರಗಳು, ಪೂಜೆ ಪುರಸ್ಕಾರಗಳು, ಹೋಮ ಹವನಗಳು, ತೀರ್ಥಕ್ಷೇತ್ರಗಳು, ಗುಡಿ-ಗೋಪುರಗಳು ಎಲ್ಲವನ್ನೂ ನಮ್ಮ ಜೀವನವೃಕ್ಷದ ಬೇರಿಗೆ ನೀರೆರೆಯುವ, ಅದನ್ನು ಐಹಿಕ ಪಾರಮಾರ್ಥಿಕ ಎರಡನ್ನೂ ಆನಂದವಾಗಿ ಅನುಭವಿಸುವ ಮಹಾಜೀವನ ವೃಕ್ಷವಾಗಿ ಬೆಳೆಸುವ ಸಾಧನಗಳನ್ನಾಗಿಯೇ ತಂದಿದ್ದಾರೆ. ಅವರ ಜೀವಲೋಕದ ಮೇಲಿನ ಅಪಾರವಾದ ಕರುಣೆ ಅವಿಸ್ಮರಣೀಯ. ವೇದಗಳು ನಮ್ಮ ಶರೀರ-ಪಿಂಡಾಂಡ, ಮತ್ತು ಹೊರಗಿನ ಬ್ರಹ್ಮಾಂಡ ಇವುಗಳ ಸ್ವರೂಪವನ್ನು ಅಂತರಂಗದ ಅನುಭವದಿಂದ ತಿಳಿಸುವುವಾಗಿದೆ. ಅಂತಹ ಸ್ವರೂಪವನ್ನು ಕಾಪಿಟ್ಟುಕೊಂಡಾಗಲೇ ನಮ್ಮ ಒಳ ಹೊರ ಜೀವನಗಳು ಸಮೃದ್ಧ. ಅದುವೇ ಈ ಜೀವನ ವೃಕ್ಷದ ಪರಮಫಲ. ಇಂತಹ ಜೀವನವೃಕ್ಷವಾದ ನಮ್ಮೀ ಶರೀರವನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡವನೇ ನಿಜವಾದ ವೇದವಿತ್ ಎಂಬ ಭಗವಂತನ ಮಾತು ಎಷ್ಟು ಉದ್ಬೋಧಕವಾಗಿದೆಯಲ್ಲವೇ?

| ಸುಬ್ರಹ್ಮಣ್ಯ ಸೋಮಯಾಜಿ

(ಲೇಖಕರು ಹವ್ಯಾಸಿ ಬರಹಗಾರರು) 

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...