Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಈ ವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ

Sunday, 04.02.2018, 3:04 AM       1 Comment

| ಎಂ. ಎಂ. ಕೆ. ಶರ್ಮ ಬೆಂಗಳೂರು, 94483 13270

04-02-2018ರಿಂದ 10-02-2018ರವರೆಗೆ

ಮೇಷ

ಮಾಂದಿ ದೋಷ ಕಾಡುವ ಸಮಯ ಇದು. ವಿಶೇಷವಾಗಿ ಆರೋಗ್ಯದ ಕುರಿತು ಎಚ್ಚರವಿರಲಿ. ಅಷ್ಟಮ ಭಾವದಲ್ಲಿರುವ ಕುಜನು ಸರ›ನೆ ಆಹಾರಾದಿ ಪರಕೀಯ ವಸ್ತುಗಳಿಂದ ದುರ್ಬಲತೆಗೆ ಸಿಲುಕಿ ಉದರಸಂಬಂಧಿ ಕಾಯಿಲೆಗಳಿಗೆ ಕಾರಣನಾಗಬಹುದು. ಶನೈಶ್ಚರನ ಕಾಟ ಇರದಿದ್ದರೂ ಬಲ ಕೊಡುವ ಚಂದ್ರನನ್ನು ಶನೈಶ್ಚರ ಕೆಣಕಿದ್ದಾನೆ. ಹೂ, ಹಣ್ಣು, ತರಕಾರಿ, ಔಷಧೀಯ ವನಸ್ಪತಿಗಳ ಸಂಸ್ಕರಣೆ, ಸಾಗಾಟ, ಮಾರಾಟ ವಹಿವಾಟುಗಳಲ್ಲಿ ಉತ್ತಮವಾದ ಯಶಸ್ಸು ಸಂಪಾದಿಸುತ್ತೀರಿ. ಕಟ್ಟಡ ಸಾಮಗ್ರಿ ಮಾರಾಟಗಾರರಿಗೆ ಎಚ್ಚರಿಕೆ ಇರಲಿ. ದತ್ತಾತ್ರೇಯನನ್ನು ಸ್ತುತಿಸಿ.

ಶುಭದಿಕ್ಕು: ಪೂರ್ವ

ಶುಭಸಂಖ್ಯೆ: 1


ವೃಷಭ

ಕೈಲಾಗದು ಎಂದು ಕುಳಿತಿರಬೇಕಾದ ಸಮಯ ಎಂದು ಅನಿಸುತ್ತಿರುವ ಸಮಯ. ಆದರೆ ನಿಮ್ಮಲ್ಲಿ ನೀವು ಭರವಸೆ ಇಟ್ಟುಕೊಳ್ಳಿ. ಭಾಗ್ಯದಲ್ಲಿರುವ ಶುಕ್ರನಿಗೆ ಶಕ್ತಿ ಇದೆ. ಕೇತುವಿನ ಕಾರಣದಿಂದ ಒದಗುವ ಅಡೆತಡೆಗಳನ್ನು ನಿಗ್ರಹಿಸುವುದಕ್ಕೆ ಗಣಪತಿಯನ್ನು ಆರಾಧಿಸಿ. ರಾಮರಕ್ಷಾ ಸ್ತೋತ್ರ ಕೂಡ ಓದಿ. ಅಷ್ಟಮ ಶನಿಕಾಟಕ್ಕೊಂದು ಬ್ರೇಕ್ ಸಿಗಲು ಇದರಿಂದ ದಾರಿ. ತಾಳ್ಮೆಯನ್ನು ಇಟ್ಟುಕೊಂಡಿರಾದರೆ ಯಶಸ್ಸನ್ನು ನಿರೀಕ್ಷಿತ ಪ್ರಮಾಣದ ಶೇಕಡಾ ತೊಂಭತ್ತು ಭಾಗದಷ್ಟು ನಿಶ್ಚಿತವಾಗಿ ಸಂಪಾದಿಸಬಹುದು. ಮನೆಯೆದುರಿಗೆ ಹಾಕಿದ ರಂಗೋಲಿಯನ್ನು ಮರೆತೂ ತುಳಿಯಬೇಡಿ.

ಶುಭದಿಕ್ಕು: ವಾಯವ್ಯ

ಶುಭಸಂಖ್ಯೆ: 7


ಮಿಥುನ

ಹೊಯ್ದಾಡದಿರಿ. ನಿಶ್ಚಿತವಾದ ಗುರಿ, ಕಾರ್ಯತಂತ್ರ ಪರಿಣಾಮಕಾರಿಯಾದ ಫಲವನ್ನು ನಿಶ್ಚಿತವಾಗಿ ಒದಗಿಸಿಕೊಡುತ್ತದೆ. ನಿಮ್ಮ ಮನೆತನದ ಸಾರಾವಳಿಯ ದೇವ ಕಾರ್ಯಗಳು ವ್ಯತ್ಯಯವಾಗದಂತೆ ಎಚ್ಚರವಹಿಸಿ. ಕುತಂತ್ರಿಗಳು ದಾರಿಯ ಮೇಲೆ ಕಲ್ಲುಮುಳ್ಳು ತಂದುಹಾಕುವ ಕೆಲಸ ಮಾಡುತ್ತಾರೆ. ದೇವತಾನುಗ್ರಹದಿಂದಾಗಿ ತಾಳ್ಮೆಯು ನಿಮ್ಮನ್ನು ಕಾಪಾಡುವ ಶಕ್ತಿ ಪಡೆದಿರುತ್ತದೆ. ಹೀಗಾಗಿ ತಾಳ್ಮೆಯು ನಿಮ್ಮ ವಜ್ರಾಯುಧವಾಗಿರಲಿ. ಎಲ್ಲವನ್ನೂ ಜಯಿಸುವ ಶಕ್ತಿಯನ್ನು ಶ್ರೀ ದೇವಿ ಮಹಿಷಾಸುರಮರ್ಧಿನಿಯು ಅನುಗ್ರಹಿಸುತ್ತಾಳೆ. ನಂಬಿದವರಿಗೆ ಜಯವಿದೆ.

ಶುಭದಿಕ್ಕು: ದಕ್ಷಿಣ

ಶುಭಸಂಖ್ಯೆ: 5


ಕಟಕ

ರಾಹುವಿನ ತೊಂದರೆಯಿಂದ ಮಾನಸಿಕವಾದ ಒತ್ತಡವನ್ನು ಎಡದುರಿಸಬೇಕಾಗುತ್ತದೆ. ಬಾಳ ಸಂಗಾತಿಯ ಜತೆ ಚರ್ಚೆಗಿಳಿಯದಿರಿ. ಉದ್ವಿಗ್ನ ವಾತಾವರಣವನ್ನು ಬೆಳೆಯಲು ಬಿಡದಿರಿ. ಕೇತುವಿನ ಅವಕೃಪೆಯಿಂದಾಗಿ ಎಡಬಿಡದ ಸೋಲೇ ಎದುರಾಗಿದೆ ಎಂಬ ಖಿನ್ನತೆ ಬಂದು ಪರದಾಡುವುದಾಗುತ್ತದೆ. ಗ್ರಹಣ ಮುಗಿದ ನಂತರವೂ ತೊಂದರೆಯ ತೆಳು ಪರದೆ ಇರಿಸುಮುರಿಸು ತರುತ್ತಿರುತ್ತದೆ. ವ್ಯವಧಾನವಿರಲಿ. ಮಕ್ಕಳನ್ನು ನಿಮ್ಮ ಕಣ್ಣಿನಂತೆ ಕಾಪಾಡಿ. ಸಂತೋಷ ನೀಡಬಲ್ಲ ಘನಶಕ್ತಿಯನ್ನವರು ಪಡೆದಿರುತ್ತಾರೆ. ನರಸಿಂಹನನ್ನು ಸ್ತುತಿಸಿ.

ಶುಭದಿಕ್ಕು: ಪೂರ್ವ

ಶುಭಸಂಖ್ಯೆ: 9


ಸಿಂಹ

ನಂಬಿದವರು ಕೈಕೊಟ್ಟರು, ಇವರಿಗೆ ಸಹಾಯ ಮಾಡಿದೆ, ಬೆನ್ನಿಗೆ ಚೂರು ಹಾಕಿದ ಎಂಬ ಗೊಣಗಾಟಗಳೆಲ್ಲ ಉಪಯೋಗಕ್ಕೆ ಬಾರದು. ನಂಬಿದವರೇ ಕೈಕೊಡುವುದು. ಸಹಾಯ ಪಡೆದವರೇ ಬೆನ್ನು ತಿರುಗಿಸಿ ನಿಮ್ಮನ್ನು ಕಂಡೂ ಕಾಣದಂತೆ ಅಡಗಿಕೊಳ್ಳುವುದು, ಇದು ಬದುಕು. ಎಲ್ಲರೂ ಪುಣ್ಯಕೋಟಿ ಹಸುಗಳಾಗಿ ಇರಲಾರರು. ಆದರೆ ನೀವು ಅನ್ಯಾಯದ ಮಾರ್ಗ ಹಿಡಿಯದಿರಿ. ಅನಂತ ಸ್ವರೂಪಿಯಾದ ಶ್ರೀಹರಿಯನ್ನು ನಂಬಿ. ರಾಮರಕ್ಷಾ ಸ್ತೋತ್ರ ಪಠಿಸಿ. ಅನೇಕ ರೀತಿಯ ತಾಪತ್ರಯಗಳಿದ್ದರೂ ಶಾಂತವಾಗಿ ಎದುರಿಸಿ. ಗೆಲುವಿಗಿದೆ ಉತ್ತಮ ದಾರಿ.

ಶುಭದಿಕ್ಕು: ಈಶಾನ್ಯ

ಶುಭಸಂಖ್ಯೆ: 1


ಕನ್ಯಾ

ಸುಖದ ವಿಚಾರದಲ್ಲಿ ನಿಧಾನವಾದ ಪ್ರಗತಿ ಎಂದು ಗ್ರಹಗಳು ತಿಳಿಸುತ್ತಿವೆ. ಧೈರ್ಯದ ವಿಚಾರದಲ್ಲಿ ಸೂಕ್ಷ್ಮಮತಿ ಹೊಂದಿರಿ. ಇತಿಮಿತಿ ತಿಳಿದು ಮುಂದಾಗಿ. ಧೈರ್ಯಂ ಸರ್ವತ್ರ ಸಾಧನಂ ಎಂಬ ಮಾತು ಸರಿ. ಆದರೆ ಸೂಕ್ತವಾದ ಮಿತಿಯೊಳಗೆ ಇರಲಿ. ಹುಲಿಯನ್ನು ಎದುರಿಸಬಹುದು. ಇಲಿಯನ್ನು ಎದುರಿಸುವುದು ಕಷ್ಟ. ನುಣುಚಿಕೊಂಡು ಓಡಿ ಬಿಲ ಸೇರಿ ನಿಮ್ಮನ್ನು ಬಸವಳಿಸುತ್ತದೆ. ಯೋಚನೆ ಮಾಡಿ. ಬುದ್ಧಿವಂತರು ನೀವು. ಆದರೆ ಒಮ್ಮೊಮ್ಮೆ ಅದೋ ಇದೋ ಎಂಬ ಜಿಜ್ಞಾಸೆಯ ಭಾರದಲ್ಲಿ ಕುಸಿಯುತ್ತೀರಿ. ದುರ್ಗಾಳನ್ನು ಆರಾಧಿಸಿ.

ಶುಭದಿಕ್ಕು: ದಕ್ಷಿಣ

ಶುಭಸಂಖ್ಯೆ: 3


ತುಲಾ

ಅಪರಿಚಿತರನ್ನು ಗೌರವದಿಂದ ಆದರಿಸಿ. ಆದರೆ ಇನ್ನಿಲ್ಲದಂತೆ ನಂಬಬೇಡಿ. ಹೊಸ ಊರಿಗೆ ಸರ›ನೆ ಪ್ರವಾಸ ಕೈಗೊಳ್ಳುವ ಸಂದರ್ಭ ಬರಬಹುದು. ವಾಣಿಜ್ಯ ವ್ಯವಹಾರ, ಬಂಧುಗಳನ್ನು ಭೇಟಿ ಮಾಡಲು ಅಥವಾ ಕೃಷಿಗೆ ಸಂಬಂಧಿಸಿದ ಭೂಮಿಯ ಮಾರಾಟ ಅಥವಾ ಖರೀದಿಯ ಕುರಿತು ಪ್ರವಾಸ ಕೂಡಿಬರಬಹುದು. ಆದರೆ ಅನಿರೀಕ್ಷಿತವಾದ ಆಮಿಷಕ್ಕೆ ಒಳಗಾಗುವ ವಿಚಾರದಲ್ಲಿ ಎಚ್ಚರವಾಗಿರಿ. ಹಣ, ಲಾಭ, ಪ್ರಲೋಭನೆಗೆ ಸಿಕ್ಕಿ ಇನ್ನೇನನ್ನೋ ರೂಪಿಸಿಕೊಳ್ಳುವ ಹೊಯ್ದಾಟಗಳಿಂದ ದುರ್ಬರ ಎದುರಾದೀತು. ತರ್ಕಬದ್ಧರಾಗಿ ಯೋಚಿಸಿ. ಶಿವವನ್ನು ಆರಾಧಿಸಿ.

ಶುಭದಿಕ್ಕು: ವಾಯವ್ಯ

ಶುಭಸಂಖ್ಯೆ: 5


ವೃಶ್ಚಿಕ

ನಿಮ್ಮ ಮನದ ಆಶೋತ್ತರಗಳನ್ನು ಈಡೇರಿಸಿಕೊಳ್ಳುವ ಸರಳ ರಸ್ತೆ ಗೋಚರಿಸುತ್ತಿದೆ ಎಂಬ ಭ್ರಾಂತಿ ನಿಮ್ಮ ಪಾಲಿಗೆ ಸ್ಪಷ್ಟವಾಗಿದ್ದರೂ ಸೂಕ್ತ ವ್ಯವಧಾನವಿರಲಿ. ದುಷ್ಟನಾದ ರಾಹುವು ಶನೈಶ್ಚರನನ್ನು ದಕ್ಕಿಸಿಕೊಂಡು ಯಶಸ್ಸಿನ ಓಟಕ್ಕೆ ವಿನಾಕಾರಣವಾದ ಅಡೆತಡೆ ತರುತ್ತಿರುತ್ತಾನೆ. ಸ್ವಚ್ಛವಾದ ಬಿಳಿಬಟ್ಟೆಯ ಮೇಲೆ ಕುಂಕುಮ ಮತ್ತು ಅರಿಶಿಣ ಬೀರಿ, ಅಕ್ಷತೆಗಳನ್ನೂ ಸೇರಿಸಿ, ಒಂದು ಅಡಿಕೆ (ಹೋಳಾಗಿರದ)ಯನ್ನಿರಿಸಿ ಪ್ರತಿದಿನ ಲಕ್ಷಿ್ಮೕ ಸಹಸ್ರನಾಮಾವಳಿ ಓದಿ. ಹನುಮಾನ್ ಚಾಲೀಸಾ ಓದಿ. ಆರ್ಥಿಕ ಅಭಿವೃದ್ಧಿಗೆ ಹಾಗೂ ಶನಿಪೀಡೆ ನಿವಾರಣೆಗಿದು ಸರಳ ದಾರಿ. ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 8


ಧನುಷ್​

ದತ್ತಾತ್ರೇಯನ ಧ್ಯಾನ ಮತ್ತು ರಾಮರಕ್ಷಾ ಸ್ತೋತ್ರ ಪಠಣ ಮಾಡಿ. ನೀಲಿಯ ಬಣ್ಣದ ಕಿರು ಅಂಗವಸ್ತ್ರಕ್ಕೆ ಕೊಂಚ ಅಕ್ಕಿ ಇರಿಸಿ, ಮಡಿಸಿ ಎದುರುಗಡೆ ಇಟ್ಟುಕೊಂಡು ಶ್ರೀಗುರು ಚರಿತ್ರೆಯನ್ನು ಪಠಿಸಿ. ಪಠಣದ ನಂತರ ಅಕ್ಷತವನ್ನು ಧಾರಣ ಮಾಡಿ. ಸರ್ವಾರಿಷ್ಟ ದೂರಗೊಳಿಸಿ ಮನೋಕಾಮನೆಗಳನ್ನು ನೆರವೇರಿಸುವ ಶಕ್ತಿಯನ್ನು ನೀವು ಸಂಪಾದಿಸಲಿದ್ದೀರಿ. ವಾಮದಿಕ್ಕಿನ ಎಕ್ಕದ ಗಿಡದ ಬಳಿ ಹೋಗಬೇಡಿ. ರಾಮರಕ್ಷಾ ಸ್ತೋತ್ರ ಕೂಡ ಓದಿ. ನಿಮ್ಮದಾದ ಹಲವು ಯೋಜನೆಯನ್ನು ಪೂರೈಸುವ ಸಿದ್ಧಿ ನಿಮಗೆ ಲಭ್ಯವಾಗುತ್ತದೆ. ಏಕಾಗ್ರತೆಯಿಂದ ಆರಾಧಿಸಿ.

ಶುಭದಿಕ್ಕು: ಉತ್ತರ

ಶುಭಸಂಖ್ಯೆ: 4


ಮಕರ

ನಿಮ್ಮ ಹತ್ತಿರದವರೇ ತುಂಬ ಕೆಟ್ಟದಾಗಿ ವರ್ತಿಸುತ್ತಾರೆ. ದೈವಸಂಕಲ್ಪ ಎಂದು ವರ್ತಿಸಿ ಸುಮ್ಮನಿರಿ. ನಿಮ್ಮ ಮಾತು ಜೋರಾಗದಿರಲಿ. ನಯಗಾರಿಕೆಯಿಂದ ಜನರನ್ನು ಹತ್ತಿರ ಮಾಡಿಕೊಳ್ಳಿ. ಕೌಟುಂಬಿಕ ವಿಚಾರಗಳಲ್ಲಿ ಕಾಳಜಿ ವಹಿಸಿ ಮನಸ್ತಾಪಗಳು ಹೊರಬಾರದಂತೆ ನೋಡಿಕೊಳ್ಳಿ. ದಶರಥ ರಾಜ ವಿರಚಿತ ಶನೈಶ್ಚರ ಸ್ತೋತ್ರ ಪಠಿಸಿ. ತಂತಾನೆ ಒದಗಿಬರುತ್ತಿರುವ ವಿನಾಕಾರಣವಾದ ನಿಂದನೆ, ಕುತಂತ್ರದ ಜನರ ಹಾವಳಿಗಳು, ಒಳಿತಿಗಾಗಿ ಮುಂದಾಗಿ ಪ್ರಾಮಾಣಿಕ ಕೆಲಸ ಮಾಡಿದರೂ ಬರುವ ಅಪಕೀರ್ತಿ ಸಾಮಾನ್ಯ. ಗಟ್ಟಿಯಾದ ಮನಸ್ಸು, ಇರಲಿ ಕ್ಷೇಮ.

ಶುಭದಿಕ್ಕು: ಆಗ್ನೇಯ

ಶುಭಸಂಖ್ಯೆ: 9


ಕುಂಭ

ನಿಮ್ಮದಾದ ವರ್ಚಸ್ಸು ಇನ್ನಿಷ್ಟು ಉತ್ತಮವಾಗಿ ಬೆಳೆದು ನಿಲ್ಲಲು ಇದು ಸಕಾಲ. ಶನೈಶ್ಚರನ ಕೃಪೆಯಿಂದಾಗಿ ಹೆಚ್ಚಿನ ಯಶಸ್ಸಿಗೆ ಬೇಕಾದ ಏಣಿ ಲಭ್ಯ. ಸಾವಧಾನವಾಗಿ ಜನರನ್ನು ನಿಮ್ಮ ಮಾತಿನ ಚಾತುರ್ಯದಿಂದ ನಿಮ್ಮ ದಾರಿಗೆ ತಂದುಕೊಳ್ಳುವ ಕೆಲಸ ನಿಮಗೆ ದೇವರ ಒಂದು ವರವೇ ಸರಿ. ರಾಜಕೀಯದಲ್ಲಿ ರುದ್ರಶಕ್ತಿಯನ್ನು ಜಾಗೃತಗೊಳಿಸಿಕೊಂಡರೆ ಸಿದ್ಧಿ ಪಡೆಯುವ ಸದವಕಾಶವಿದೆ. ಯಾವ ಕಾರಣಕ್ಕೂ ವೈಢೂರ್ಯ ಧಾರಣೆಯನ್ನು ಮಾಡದಿರಿ. ಸಂಪ್ರೀತಿಯಿಂದ ಸಿದ್ಧಿವಿನಾಯಕನನ್ನು ಆರಾಧಿಸಿ. ಹೂವನ್ನು ಮೇಲೆತ್ತಿದಂತೆ ಕೆಲಸ ಸುಲಭ.

ಶುಭದಿಕ್ಕು: ಪಶ್ಚಿಮ

ಶುಭಸಂಖ್ಯೆ: 6


ಮೀನ

ಮನಸ್ಸಿನ ಕಾರ್ಯ ನೆರವೇರಿಸುವ ತವಕ ನಿಮ್ಮಲ್ಲಿದೆ. ಆದರೆ ಆರೋಗ್ಯದ ಸಿದ್ಧಿ ಅವಕಾಶ ಕೊಡಲು ತಡೆ ತರುತ್ತಿರುತ್ತದೆ. ಬಿಲ್ವಪತ್ರೆಯನ್ನು ರುದ್ರ ಚಮಕ ಪಠಣಸಹಿತವಾಗಿ ಶಕ್ತಿ ಸಂವರ್ಧನೆಗೊಳಿಸಿ. ಶಿವನಿಗೆ ಅದನ್ನು ಏರಿಸುವ ವಿಚಾರ ಶಿಸ್ತಿನಿಂದ ಮಾಡಿ, ಪೂರೈಸಿ. ಕರುಳಿಗೆ, ಕಾಲು, ಮಂಡಿ, ತಲೆನೋವಿಗೆ ಸಂಬಂಧಿಸಿದ ಪೀಡೆಗಳಿಂದ ಹೊರಬರುವಿರಿ. ತೆಂಗಿನ ಎಳೆ ನೀರನ್ನು ಶಂಖದ (ಸ್ವಚ್ಛ) ಮೂಲಕ ನಾಗರಮೂರ್ತಿಗೆ ಅಭಿಷೇಕ ಪೂರೈಸಿ. ನಂತರ ಜಲಾಭಿಷೇಕ ಮಾಡಿ. ಅಗಾಧವಾದ ಯಸಸ್ಸಿಗೆ ಬೇಕಾದ ಏಣಿಯು ಲಭ್ಯವಾಗಲಿದೆ.

ಶುಭದಿಕ್ಕು: ನೈಋತ್ಯ

ಶುಭಸಂಖ್ಯೆ: 2

One thought on “ಈ ವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ

Leave a Reply

Your email address will not be published. Required fields are marked *

Back To Top