Friday, 16th November 2018  

Vijayavani

Breaking News

ಈ ವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ

Sunday, 08.07.2018, 3:03 AM       No Comments

ಮೇಷ: ಸ್ವರ್ಣಾಕರ್ಷಣ ಭೈರವನ ಬಗೆಗಾಗಿನ ಆದ್ಯತೆಗೆ ಹೆಚ್ಚು ಆತುರ ತೋರಿ ಭೈರವನನ್ನು ಸ್ತುತಿಸಿ. ಕೆಂಪು ದಾಸವಾಳಕ್ಕೆ ಹಸುವಿನ ತುಪ್ಪ ಲೇಪಿಸಿ, ಅವಧೂತ ಗುರು ದತ್ತಾತ್ರೇಯನನ್ನು ಆರಾಧಿಸಿ. ಬಾಕಿ ಇರುವ ಹಣ ನಿಮಗೆ ಸಂದಾಯವಾಗಲು ಅವಕಾಶ ಜಾಸ್ತಿ. ಮನೆಯಲ್ಲಿ ಬೇಕಿರದ ವಸ್ತುಗಳ ರಾಶಿಯನ್ನು ಚೆನ್ನಾಗಿ ಸಫಾಯಿ ಮಾಡಿ. ನಿರರ್ಥಕ ವಸ್ತುಗಳು ಅಸಮತೋಲನ ಉಂಟುಮಾಡುತ್ತಿವೆ. ಉತ್ತರ ದಿಕ್ಕಿನ ವಾಸ್ತು ಬಲ ಸೊರಗಿದ್ದರೆ, ಸಕ್ಕರೆ ಬೆರೆಸಿದ ಹಸುವಿನ ಹಾಲಿನ ಕೆನೆಯನ್ನು ಹತ್ತಿಕಾಳಿ ನೊಂದಿಗೆ ತೊಗರಿ, ಬೇಳೆಕಾಳುಗಳೊಂದಿಗೆ ಬೆರೆಸಿ ಗೋಗ್ರಾಸ ಕೊಡಿ.

ಶುಭದಿಕ್ಕು: ದಕ್ಷಿಣ ಶುಭ ಸಂಖ್ಯೆ: 5


ವೃಷಭ: ಎಲ್ಲ ಎಚ್ಚರವೂ ಇರಲಿ. ಹಣದ ವಿಚಾರದಲ್ಲಿ ವಹಿಸಬೇಕಾದ ಮುತುವರ್ಜಿಯ ಬಗೆಗೆ ವಿಶೇಷವಾದ ಸಲಹೆ, ಸೂಚನೆಗಳನ್ನು ಅನ್ಯರಿಂದ ಪಡೆಯಬೇಕಾಗಿಲ್ಲ. ಸ್ವಯಂಪೂರ್ಣವಾದ ಅಸಲೀ ಪ್ರತಿಭೆ ನಿಮಗಿರುವುದರಿಂದ ಅದೃಷ್ಟದ ಬಗೆಗಾಗಿನ ಯಾಚನೆಯನ್ನು ವಿಶೇಷವಾಗಿ ಸುಬ್ರಹ್ಮಣ್ಯನ ಬಳಿಯೂ, ಮಾರುತಿಯ ಬಳಿಯೂ ವಿಶೇಷವಾಗಿ ಇರಲಿ. ಕೃಷಿ ಸಲಕರಣೆಯ ವ್ಯಾಪಾರ ವಹಿವಾಟು ಅಥವಾ ಸ್ನಾನಗೃಹದ ವಸ್ತುಗಳ ವಿಚಾರದ ವಹಿವಾಟು, ಸರಬರಾಜು ನಿಮಗೆ ಲಾಭ ತರಲಿದೆ. ಉದ್ರಿಯನ್ನು ನೀಡಲೇಬೇಡಿ.

ಶುಭದಿಕ್ಕು: ಪೂರ್ವ ಶುಭ ಸಂಖ್ಯೆ: 9


ಮಿಥುನ: ಕಾಲೆಳೆಯುವ ಜನ ಬೇಡವೆಂದರೂ ಸಿಗುತ್ತಿರುತ್ತಾರೆ. ಸಂತೆಯೊಳಗೊಂದು ಮನೆ ಮಾಡಿ ಶಬ್ದಗಳಿಗಂಜಿದೊಡೆಂತಯ್ಯ ಎಂಬ ಮಾತಿದೆ. ನಿಮಗಿದು ತಿಳಿಯದ ವಿಷಯವೇನಲ್ಲ. ಅರಣ್ಯದೊಳಗೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆ ಎಂತಯ್ಯ ಎಂಬ ಮಾತು ಗೊತ್ತಿದೆ. ವೃಥಾ ನಡೆಸುವ ಟೀಕೆ ಎಂಬ ಸದ್ದಿಗೆ ಹೆದರಬೇಡಿ. ಕಾಡುವ ಮೃಗಗಳಿಗೂ ಹೆದರದಿರಿ. ರಾಮರಕ್ಷಾ ಸ್ತೋತ್ರ ಓದಿ. ಹನುಮಾನ್ ಚಾಲೀಸಾ ಓದಿ. ರಕ್ಷೆಗಾಗಿನ ಬಲ ಒದಗಿ ಅನಾವಶ್ಯಕ ಟೀಕಾಕಾರರನ್ನು, ಮೃಗೀಯ ರೂಪದ ಜನರನ್ನು ಎದುರಿಸಿ ಗೆಲ್ಲಬಹುದು.

ಶುಭದಿಕ್ಕು: ದಕ್ಷಿಣ ಶುಭ ಸಂಖ್ಯೆ: 6


ಕಟಕ: ದೋಷಕಾರಕನಾದ ಕೇತುವು ಅಶಾಂತಿಯನ್ನು ನಿರ್ವಿುಸಲು ಕಾದಿದ್ದಾನೆ. ಸವೋತ್ಕೃ್ಟನಾದ ರಕ್ಷಣಾ ವ್ಯೂಹ ಆರ್ಥಿಕ ಸ್ಥಿರತೆಗಾಗಿ ಮರೆಯದೆ ನಿಮ್ಮ ಜತೆಗಿರಲಿ. ಅಡಕೆ ಹಾಗೂ ವೀಳ್ಯದೆಲೆಗೆ (ಜೋಡಿ ಎಲೆಗಳು) ಜೇನುತುಪ್ಪ ಮತ್ತು ಅಕ್ಷತೆ ಇರಿಸಿ ಜಗದ ಬೆಳಕಾದ ಮಹಾಲಕ್ಷಿ್ಮಯನ್ನು ಸ್ತುತಿಸಿ. ಒಂದು ಪುಟ್ಟ ತಾಮ್ರದ ಗಿಂಡಿಯಲ್ಲಿ ಶುದ್ಧವಾದ ನೀರು, ತುಳಸಿದಳ ಇರಿಸಿ ಜಗನ್ನಿಯಾಮಕ, ಗಗನಸದೃಶನಾದ ಮಹಾವಿಷ್ಣುವನ್ನು ಆರಾಧಿಸಿ. ಮನದ ಕ್ಲೇಶಕ್ಕೆ ಕಾರಣವಾಗದಂತೆ, ಧನನಾಶ ನಿಯಂತ್ರಣಕ್ಕೆ ಸಿಕ್ಕಿ ಆನಂದಕ್ಕೆ ದಾರಿ ಸಿಗಲಿದೆ.

ಶುಭದಿಕ್ಕು: ಪೂರ್ವ ಶುಭ ಸಂಖ್ಯೆ: 7


ಸಿಂಹ: ನಿಮಗೆ ಧಾವಂತದಿಂದ ಮುಂದುವರಿಯುವ ಅಪೇಕ್ಷೆಗಳು ಏಕಾಏಕಿ ಉದ್ಭವಿಸಿರಬಹುದು. ನಿಗೂಢವಾದ ಶಕ್ತಿಯನ್ನು ಶೇಖರಿಸಿಕೊಳ್ಳಲು ಸಿದ್ಧಿ ವಿನಾಯಕನ ಧ್ಯಾನ ಮಾಡಬೇಕು. ಮುಖ್ಯವಾಗಿ ಸ್ನಾನ ನಂತರ ಪೀತಾಂಬರ ಹಳದಿಯ ಬಣ್ಣವನ್ನು ಹೊಮ್ಮುವ ಬಟ್ಟೆ ಧರಿಸಿ ಅಥವಾ ಅದೇ ಬಣ್ಣದ ಚಿಕ್ಕ ಕರವಸ್ತ್ರದ ಅಳತೆಯ ಬಟ್ಟೆಯನ್ನು ನಿಮ್ಮ ಜತೆ ಶುಭ್ರವಾಗಿ ಇರಿಸಿಕೊಂಡು ವಿನಾಯಕನನ್ನು ಧ್ಯಾನಿಸಿ. ನಿಮಗೆ ಪದೋನ್ನತಿಗಾಗಿ ಅವಕಾಶ ಇದೆ. ಹೊಸ ಜವಾಬ್ದಾರಿ ಹಾಗೂ ಅಧಿಕಾರಿಗಳೊಂದಿಗಿನ ನಿಮಗಿಷ್ಟವಾದ ಕೆಲಸವೂ ಹೊಸದಾಗಿ ನಿಮಗೆ ಒದಗಿಬರಬಹುದು.

ಶುಭದಿಕ್ಕು: ಈಶಾನ್ಯ ಶುಭ ಸಂಖ್ಯೆ: 5


ಕನ್ಯಾ:  ನಿಮ್ಮ ದಾರಿಯನ್ನು ಕೆಲವು ಉದ್ದುದ್ದ, ಅಡ್ಡಡ್ಡ ಲಘು ವಿದ್ಯುತ್ ತರಂಗಗಳು ಏಕಾಗ್ರತೆಗೈಯ್ಯಲಾಗದ ಜಡತ್ವದ ಸ್ಥಿತಿಗೆ ತಳ್ಳುತ್ತಿರುತ್ತವೆ. ಶ್ರೀ ದೇವಿ ಐಂದ್ರಿತಾ ಸಿದ್ಧಿ ಸ್ತೋತ್ರಗಳನ್ನು ರಾಮರಕ್ಷಾ ಸ್ತೋತ್ರವನ್ನು ಪಠಿಸಿ. ಸರ್ಕಾರಿ ಕೆಲಸಗಾರರು ತೊಂದರೆದಾಯಕವಾದ ವರ್ಗಾವಣೆಗಾಗಿ ಈಗ ಸಜ್ಜಾಗಿರಬೇಕು. ಸಮಯ ಸಾಧಿಸಿ ಹಿಂದಿನಿಂದ ಚೂರಿ ಹಾಕುವ ಜನ ಈಗಾಗಲೇ ಬೇಡದ್ದನ್ನು ಮಾಡಿ ಮುಗಿಸಿದ್ದಾರೆ. ನೀವು ನಂಬಲೇಬೇಕಾದ ದಕ್ಷಿಣಾಮೂರ್ತಿಯನ್ನು ನಾರಾಯಣ, ಮಹಾಲಕ್ಷಿ್ಮೕಯರನ್ನೂ ಆರಾಧಿಸಿ. ಹಣದ ಬಟ್ಟಲಿಗೆ ಶಕ್ತಿ ಒದಗಲಿದೆ.

ಶುಭದಿಕ್ಕು: ದಕ್ಷಿಣ ಶುಭ ಸಂಖ್ಯೆ: 8


ತುಲಾ: ಬಯಸಿದ ಮಾರ್ಗವನ್ನು ಪಡೆಯುವ, ಅದೇ ಮಾರ್ಗದಲ್ಲಿ ಸಂಚರಿಸಿ ಯಶಸ್ಸನ್ನು ಸಂಪಾದಿಸುವ ವಿಶೇಷ ಶಕ್ತಿಯನ್ನು ಸಂಪಾದಿಸುತ್ತೀರಿ. ಎಲ್ಲ ರೀತಿಯ ಸರಳ ಪ್ರಯತ್ನಗಳೇ ಯಶಸ್ಸು ತರುತ್ತವೆ ಎಂದೇನಿಲ್ಲ. ನಿಮ್ಮ ಉತ್ತಮವಾದ ಪ್ರಯತ್ನಗಳು ನಿರೀಕ್ಷಿತ ಯಶಸ್ಸನ್ನು ತರಲು ಕೆಲವು ಪರದಾಟಗಳಿಗೂ ಅವಕಾಶ ಇದ್ದೇ ಇದೆಯಾದರೂ ಶ್ರಮ ಹಾಗೂ ಏಕಾಗ್ರತೆಯಿಂದ ಅಂತಿಮವಾದ ಗೆಲುವಿನ ನಗೆ ಬೀರಲು ಅದೃಷ್ಟ ನಿಮ್ಮ ಕಡೆಗೆ ಬಂದು ಪುರಸ್ಕರಿಸುತ್ತದೆ. ಗೋಡಂಬಿಗೆ ಜೇನು ಬೆರೆಸಿ ದುರ್ಗೆಗೆ (ಮಂಗಳವಾರ, ಶುಕ್ರವಾರದಂದು) ನೈವೇದ್ಯ ಮಾಡಿ. ಕ್ಷೇಮ.

ಶುಭದಿಕ್ಕು: ನೈಋತ್ಯ ಶುಭ ಸಂಖ್ಯೆ: 9


ವೃಶ್ಚಿಕ:  ನೀವು ಕೈಗೊಳ್ಳುವ ಕೆಲಸದ ವಿಚಾರದಲ್ಲಿ ಪೂರ್ವ ತಯಾರಿಗಳ ಬಗೆಗೆ ಹೆಚ್ಚಿನ ಎಚ್ಚರ ಇರಲಿ. ಇನ್ನೂ ದಿನಗಳಿವೆ ಎಂದು ತುಸು ನಿರಾಳವಾಗಿರುವ ವಿಚಾರ ಮಾಡಬೇಡಿ. ನಿಶ್ಚಿತವಾದುದರ ಬಗೆಗಿನ ತಯಾರಿಗೆ ವಿಳಂಬ ಬೇಡ. ಶುಭಸ್ಯ ಶೀಘ್ರಂ. ಆದರೂ ಸಮತೋಲನ ಕೆಡದಂತೆ ಎಚ್ಚರ ಇರಲಿ. ನೀಲಿ ಹೂಗಳಿಂದ ನೀವು ಮಾರುತಿಯನ್ನು ಆರಾಧಿಸಿ. ಹಿಮಾಲಯವನ್ನೂ ಹತ್ತುವ ಕೆಲಸ ಸುಲಭವಾಗಲೇಬೇಕು. ಈಶ್ವರನ ಇಚ್ಛೆ ನೆರವೇರಬೇಕು ಎಂಬುದು ನಮ್ಮ ಆರ್ಷೆಯ ನಂಬಿಕೆ. ನಿಮಗಿದು ಅನುಭವಕ್ಕೆ ಬರುವ ಕಾಲವಾಗಿದೆ.

ಶುಭದಿಕ್ಕು: ಪಶ್ಚಿಮ ಶುಭ ಸಂಖ್ಯೆ: 1


ಧನು: ದಣಿವರಿಯದೆ ಮುನ್ನುಗ್ಗುವ ಇಚ್ಛಾಶಕ್ತಿ ಬೆಳೆಸಿಕೊಳ್ಳಿ. ದ್ರೋಣ ಪುಷ್ಪಗಳನ್ನು ಪರಿಫೂರ್ಣನಾದ ಶಿವನಿಗೂ, ಕೆಂಪು ತಾವರೆಯನ್ನು ವಿಷ್ಣುವಿಗೂ ಪ್ರತಿದಿನ ಅರ್ಪಿಸಿ, ಆಂಜನೇಯನನ್ನು ಸ್ತುತಿಸಿ. ನಿಮ್ಮ ತಾಕಲಾಟದ ದಾರಿಯು, ಅವಿರತವಾದ ಯಶಸ್ಸಿಗೆ ಹಿನ್ನಡೆ ತರಬಹುದಾದ ವಿಘ್ನ ಗಳನ್ನು ನಿವಾರಿಸಿ ಸುರಳೀತವಾದ ಗುರಿಗೆ ತಲುಪಿಸುತ್ತದೆ. ನೋವು ತರುವ ಮಾತುಗಳನ್ನಾಡುವ ಜನರನ್ನು ನಯವಾಗಿ ನಿರ್ಲಕ್ಷಿ್ಯಸಿ. ಆತ್ಮಪ್ರಾಮಾಣ್ಯದ ನಿಮ್ಮ ನಡೆಯ ಶಕ್ತಿಯನ್ನು ಸುಡುವ ದಾವಾಗ್ನಿಯೂ ಏನೂ ಮಾಡಲಾಗದೆ ಸೋಲುತ್ತದೆ.

ಶುಭದಿಕ್ಕು: ವಾಯವ್ಯ ಶುಭ ಸಂಖ್ಯೆ: 3


ಮಕರ: ಎಲ್ಲವೂ ತುಂಬಿಕೊಂಡಿದೆಯಾದರೂ ನೆರವೇರಿಸಬೇಕಾದ ಕೆಲವು ಜವಾಬ್ದಾರಿ ಗಳನ್ನು ಮಾಡಿ ಮುಗಿಸಲು ಹಿನ್ನಡೆಯಾಗುತ್ತಿದೆ. ವಾಯವ್ಯ ದಿಕ್ಕಿನ ಕ್ಷತ್ರಿಮ ಶಕ್ತಿಗಳು ನಿಮ್ಮ ಸಂಕಲ್ಪವನ್ನು ದುರ್ಬಲಗೊಳಿಸುತ್ತಿವೆ. ಶುಭಕರವಾದ ಒಬ್ಬ ಅವಧೂತರಿಂದ ಕಷ್ಟಗಳಿಗೆ ವಿರಾಮ ಸಿಗಬೇಕು. ನಿಮ್ಮ ಏಳ್ಗೆಯನ್ನು ಸಹಿಸಲಾರದ, ನಿಮ್ಮ ಹತ್ತಿರದವರೇ ಆದ ಜನರ ಒಂದು ಗುಂಪು ನಿಮ್ಮನ್ನು ತೀವ್ರವಾಗಿ ಬಾಧಿಸುತ್ತಿದೆ. ಕರುಣಾಳುವಾದ ಪರಮೇಶ್ವರನನ್ನು ನಂದಿಗೆ(ಎತ್ತಿಗೆ) ಹತ್ತಿಕಾಳು, ಶುದ್ಧ (ವನಸ್ಪತಿಗಳನ್ನು ಬೆರೆಸಿದ) ಕಲಗಚ್ಚನ್ನು ಕುಡಿಯಲು ಕೊಡಿ. ಕಾರ್ಯಕ್ಕೆ ಸಂಕಲ್ಪ ಸಿದ್ಧಿ ಇದೆ.

ಶುಭದಿಕ್ಕು: ಉತ್ತರ ಶುಭ ಸಂಖ್ಯೆ: 8


ಕುಂಭ: ನಿರಂತರವಾದ ಧ್ಯಾನ ಸದ್ಗುರುವಾದ ವಿಠೋಬನಿಗೂ, ಕರುಣಾಳುವಾದ ರುಕುಮಾಯಿಗೂ ನಿಮ್ಮಿಂದ ಅನವರತವಾಗಿ (ಬೆಳಗಿನಲ್ಲಿ, ಸಾಯಂಕಾಲದ ಹೊತ್ತು) ಮುಂದಿನ ಏಳು ದಿನ ನೆರವೇರಲ್ಪಡಲಿ. ಒಣ ದ್ರಾಕ್ಷಿ ಹಾಗೂ ಗೋಡಂಬಿ ಬೆರೆಸಿದ ಪಾಯಸವನ್ನು ನೈವೇದ್ಯ ಮಾಡಿ. ನಿಂತ ನೀರಿನಂತೆ ಅನಿಸುತ್ತಿರುವ ವರ್ತಮಾನವನ್ನು ಸುಲಲಿತವಾದ ಶುದ್ಧ ಸಾಂದ್ರತೆಗೆ ಪರಿವರ್ತಿಸಿ ಗಂಗೆಯಂತೆ ಶುದ್ಧವಾಗಿ ಹರಿಸಲು ವಿಕೋಬ ರುಕುಮಾಯಿ ಮೂಲಾಧಾರ ಶಕ್ತಿ ಒದಗಿಸುತ್ತಾರೆ. ವರ್ಚಸ್ಸಿಗೆ ಬೇಕಾದ ಸಿದ್ಧಿಗೆ ಇದರಿಂದ ದಾರಿ ಸರಳವಾಗಿ ಇರುತ್ತದೆ.

ಶುಭದಿಕ್ಕು: ಆಗ್ನೇಯ ಶುಭ ಸಂಖ್ಯೆ: 2


ಮೀನ: ನಿಮಗೆ ಬೌದ್ಧಿಕ ತೀಕ್ಷ್ಣತೆ ತೀವ್ರವಾಗಿಯೇ ಇದ್ದರೂ ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಮಂದಿ ಅಪರೂಪ. ನಿಮ್ಮ ತಾಳ್ಮೆಯನ್ನು ಕೆಡಿಸಿಕೊಳ್ಳದೆಯೇ ಇರುವ ಜನ ಬಲದಲ್ಲಿಯೇ ಕೆಲಸ ಮುಂದುವರಿಸಿಕೊಂಡು ಮುನ್ನುಗ್ಗಿ. ನಿಮ್ಮ ಪಾಲಿನ ತೀವ್ರತರವಾದ, ಮನದಾಳದ ಸದಿಚ್ಛೆಯನ್ನು ಸದ್ಗುರುವಾದ ದತ್ತಾತ್ರೇಯನು ನೆರವೇರಿಸಿಕೊಡಲು ಕಮಂಡಲದಲ್ಲಿ ನೀರು, ತ್ರಿದಳ ಹಾಗೂ ಬಿಳಿ ಹೂಗಳನ್ನು ಒಟ್ಟಿಗಿರಿಸಿದ ಅವಭೃಥ ಧಾರೆಯಲ್ಲಿ ದತ್ತಾತ್ರೇಯನ ಅಭಿಷೇಕ ನಡೆಸಿ. ಪರಿಣಾಮಕಾರೀ ಸಿದ್ಧಿ, ಬುದ್ಧಿ, ಸಂಪತ್ತು, ಸಾತ್ವಿಕ ಬಲಕ್ಕಾಗಿ ಪ್ರಾರ್ಥಿಸಿ. ಅಪರೂಪದ ಯಶಸ್ಸು ಸಿಗಲಿದೆ.

ಶುಭದಿಕ್ಕು: ವಾಯವ್ಯ ಶುಭ ಸಂಖ್ಯೆ: 4

Leave a Reply

Your email address will not be published. Required fields are marked *

Back To Top