ಈ ವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ

ದಿನಾಂಕ 24-12-2017ರಿಂದ 30-12-2017

ಮೇಷ: ನಿಮ್ಮದೇ ಆದ ಛಾಪೊಂದನ್ನು ಮೂಡಿಸಲು ಹೆಣಗಾಡುವ ನಿಮಗೆ ಜಯ ಇಲ್ಲವೆಂದಲ್ಲ. ಮುಖ್ಯವಾಗಿ ಗಣಪತಿ, ದೇವಿಯ ಆರಾಧನೆಯೊಂದಿಗೆ ಸಕ್ಕರೆ ಹಾಗೂ ಮೊಸರು ಬೆರೆಸಿದ ಖಾದ್ಯವನ್ನು ಸುಬ್ರಹ್ಮಣ್ಯನಿಗೆ ನೈವೇದ್ಯ ಮಾಡಿ. ಮಂಗಳವಾರದಂದು ಇದು ನೆರವೇರಲಿ. ಪ್ರತಿದಿನವೂ ನೈವೇದ್ಯ ಬೇಕಾಗಿಲ್ಲ. ದಿವ್ಯಸ್ತುತಿ ಪ್ರಾರ್ಥನೆ ಮಾಡಿ ನಿಮ್ಮದಾದ ಅಪರೂಪ ಸಾಧನೆಗೆ ಯಶಸ್ಸಿನ ಸಿದ್ಧಿ ದೊರಕಿಸಿಕೊಳ್ಳಲು ಇದರಿಂದ ದಾರಿ. ಹೋರಾಟ ಸುಲಭವಾಗಿರದು, ದೃಢವಾಗಿರಿ. ನಿಮ್ಮ ಪ್ರಚಂಡ ಶಕ್ತಿಯನ್ನು ಧೂಳಿಪಟ ಮಾಡುವ ಘಾತುಕರು ನಿರಂತರವಾದ ತಡೆ ತರುತ್ತಾರೆ. ತಪ್ಪದೆ ಜಾಗ್ರತೆ ವಹಿಸಿ. ಶುಭದಿಕ್ಕು: ಪೂರ್ವ ಶುಭಸಂಖ್ಯೆ:7

ವೃಷಭ: ಅಷ್ಟಮ ಶನಿಕಾಟ ಇದೆ ಎಂದ ಮಾತ್ರಕ್ಕೆ ನಿಷ್ಕ್ರಿಯತೆ ತೋರದಿರಿ. ತುಳಸಿದಳಕ್ಕೆ ಶ್ರೀಗಂಧ ಸವರಿ ಪೂರ್ಣಪ್ರಮಾಣದಲ್ಲಿ ಸದ್ಗುರು ರಾಮನಿಗೆ ವರಿಸಿ ಸ್ತುತಿಸಿ, ರಾಮರಕ್ಷಾ ಸ್ತೋತ್ರ ಪಠಿಸಿ, ಅನೇಕ ರೀತಿಯ ಮನೋಸಂಕಲ್ಪ ಈಡೇರಲು ದಾರಿ ಸುಗಮ. ಭಾವನಾತ್ಮಕವಾಗಿ ಕೆರಳದಿರಿ, ಮನಸ್ಸು ಶಾಂತವಾಗಿರಲಿ. ಅನ್ಯರ ತಪು್ಪಗಳು ಮುಚ್ಚಿಹೋಗಿ ನಿಮ್ಮ ತಪು್ಪ ಪ್ರಧಾನವಾಗುವ ರೀತಿಯಲ್ಲಿ ನೀವು ಪೇಚಿಗೆ ಸಿಲುಕುವ ಸಾಧ್ಯತೆಯಿದೆ. ನಿಮ್ಮ ನಿಯಂತ್ರಣ ನಿಮಗಿದ್ದರೆ ಸಾಕು. ಮುಂದಿನದನ್ನು ನಿಮ್ಮ ಪ್ರತಿಭೆಗೆ ಬಿಡಿ, ಸಮಾಧಾನ ಇದ್ದೇ ಇದೆ. ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ:9

ಮಿಥುನ: ಯಾವುದೇ ಸಂದರ್ಭದಲ್ಲೂ ರತ್ನಾಭರಣ ವ್ಯಾಪಾರದ ಕುರಿತು ಮುಂದಾಗದಿರಿ. ಕೃಷಿಕರಿಗೆ ಸಂತಸದ ಸುದ್ದಿ ಇದೆ. ಸರ್ಕಾರಿ ಕೆಲಸಗಾರರಿಗೆ ಮೇಲಧಿಕಾರಿಗಳ ಮೂಲಕ ಚಿವುಟುವ, ತೂಗುವ ಮಿಶ್ರ ಎಡಬಿಡಂಗಿತನದ ಅನುಭವವಾಗಲಿದೆ. ಅನುಭವದ ದಟ್ಟ ಸಂಪನ್ನತೆ ಗಟ್ಟಿಯಾಗಿದ್ದಲ್ಲಿ ಸ್ವಂತ ಕೆಲಸಕ್ಕೆ ಕೈಹಾಕಿ. ಇದ್ದುದನ್ನು ಬಿಟ್ಟು ಮತ್ತೊಂದಕ್ಕೆ ಕೈಹಾಕದಿರಿ. ಶ್ವೇತ ಬಟ್ಟೆಯ ಮೇಲಿರಿಸಿದ ಗೋದಿಗೆ ಏಳೆಂಟು ಕಾಳು ಗೋದಿ ಚೆಲ್ಲಿ ಶ್ರೀಹರಿಯ ಸ್ತುತಿ ಮಾಡಿ. ತುಳಸಿದಳಗಳನ್ನೂ ಏರಿಸಿ ಲಕ್ಷ್ಮಿಯನ್ನು ಆರಾಧಿಸಿ. ಧನಭಾವಕ್ಕೆ ಸಿದ್ಧಿ ಸಿಗಲು ಇದು ಅನುಕೂಲಕರ. ಶುಭದಿಕ್ಕು:ನೈಋತ್ಯ ಶುಭಸಂಖ್ಯೆ: 1

ಕಟಕ: ನಿಮಗೆ ಶಕ್ತಿ ಉಂಟು. ಆದರೆ ಸೂಕ್ಷ್ಮ ಸ್ವಭಾವದ ನೀವು ಆಗಾಗ ಅನ್ಯರ ಟೀಕೆಗಳಿಂದ ಗೊಂದಲಕ್ಕೆ ಒಳಗಾಗುತ್ತೀರಿ. ಟೀಕೆಗಳಿಗೆ ತಲೆಕೆಡಿಸಿಕೊಂಡರೆ ಅನೇಕ ರೀತಿಯ ಶ್ರೇಷ್ಠ ಸಾಧನೆ ಮಾಡಬೇಕಾದ ನಿಮಗೆ ಹಿನ್ನಡೆಯಾಗಲು ಸಾಧ್ಯ, ನಿಮ್ಮಲ್ಲಿ ಸತ್ಯ ಇರುವಾಗ ಯಾಕೆ ಹೆದರುತ್ತೀರಿ. ದೊಡ್ಡ ರೀತಿಯ ಸ್ಪರ್ಧೆಗೆ ಒಡ್ಡಿಕೊಳ್ಳುವ ನಿಮ್ಮನ್ನು ವರ್ತಮಾನ ಮೇಲೆತ್ತಲು ಸಾಧ್ಯ. ಜನರನ್ನು ನಿಮ್ಮತ್ತ ಸೆಳೆಯುವ, ನಾಯಕತ್ವ ನಿಭಾಯಿಸುವ ಚೈತನ್ಯ ಸಂಪಾದಿಸಿಕೊಳ್ಳಿ. ನಿಮ್ಮ ಧೈರ್ಯ, ಸಾಹಸಗಳು, ನೀವೇ ಆಶ್ಚರ್ಯಪಡುವ ಉನ್ನತಿಗೆ ವಹಿಸುತ್ತದೆ. ದತ್ತಾತ್ರಯನನ್ನು ಆರಾಧಿಸಿ. ಶುಭದಿಕ್ಕು:ಪೂರ್ವ ಶುಭಸಂಖ್ಯೆ: 4

ಸಿಂಹ: ಪದೇಪದೆ ಎಲ್ಲವೂ ಸುಲಭವಾಗಿರುವುದನ್ನು ಕಷ್ಟಕರವಾಗಿಸುವ ದಾರಿಗೆ ತಳ್ಳುತ್ತದೆ. ಆದರೆ ನಿಮ್ಮ ಎಚ್ಚರದ ಸ್ಥಿತಿಯು ಉತ್ತಮಮಟ್ಟದಲ್ಲಿದ್ದರೆ ತೊಂದರೆ ಅನುಭವಿಸುವುದನ್ನು ತಡೆಯಬಹುದು. ಸಾಲದ ವಿಷಯದಲ್ಲಿ ಜಾಗ್ರತೆ. ಸ್ಥಿರಾಸ್ತಿ, ಜಮೀನು, ಮನೆ, ಸೈಟುಗಳು ಥಟ್ಟನೆ ನಿಮಗೆ ಬೇಕಾದ ಮೊತ್ತಕ್ಕೆ ಮಾರಾಟವಾಗದೆ ಪರದಾಟವಾಗಬಹುದು. ಗಿರಾಕಿಗಳೇ ಸಿಗದಿರಬಹುದು. ಹನುಮಾನ್ ಚಾಲೀಸಾ ಓದಿ. ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 6

ಕನ್ಯಾ: ಸಮುದ್ರದ ಉಪು್ಪ ಹರಳನ್ನು ಸಕ್ಕರೆಯೊಂದಿಗೆ ಬೆರೆಸಿ ಅರ್ಧ ಲೋಟ ನೀರಿಗೆ ಸೇರಿಸಿ ಪ್ರತಿದಿನ ತೆಂಗಿನ ಮರದ ಕೆಳಕ್ಕೆ ಸುರಿಯಿರಿ. ಕಾಲಭೈರವನನ್ನು ಧ್ಯಾನಿಸಿ. ಆರೋಗ್ಯದ ಪೀಡೆ ನಿವಾರಿಸಿಕೊಳ್ಳಲು ಇದು ಸಹಾಯಕ. ಚಾತುರ್ಯ ಹೊಂದಿದ ನಿಮಗೆ ಯಾರಿಂದ, ಯಾವಾಗ ಅನುಕೂಲ ಎಂಬುದು ತಿಳಿದಿರುತ್ತದೆ. ನಿಮ್ಮ ಪ್ರಾಮಾಣಿಕ ನಿಲುವಿಗೆ ಕೂಡ ನಿಮ್ಮದೇ ಆದ ವ್ಯಕ್ತಿತ್ವಕ್ಕೆ ಮೆರಗು ಕೊಡಲು ಪೂರ್ತಿ ಶಕ್ತಿ ಇದೆ. ಉದ್ದೇಶಿತ ಕಾರ್ಯಗಳನ್ನು ನೀವು ಈಡೇರಿಸಿಕೊಳ್ಳಲು ಚೈತನ್ಯ ಪಡೆಯುತ್ತೀರಿ. ಶತ್ರುಗಳು ಟೀಕೆ ಮಾಡುತ್ತಾರೆ. ಹಿಂಜರಿಯದಿರಿ. ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ:7

ತುಲಾ: ನಂಬದಿರಲಾಗದು. ಹಾಗೆಂದು ಪೂರ್ತಿಯಾಗಿ ಅನ್ಯರನ್ನು ನಂಬದಿರಿ. ನಂಬಿಸಿ ಕೈಕೊಡುವ ಸ್ಥಿತಿ ಎದ್ದೇಳುವ ಸಾಧ್ಯತೆ ಇದೆಯಾದರೂ ನಾಗಾರಾಧನೆ, ಭುಜಂಗ ಕವಚ ಪಠಣಗಳಿಂದ ಸಾವಿರ ಸಮಸ್ಯೆಗಳನ್ನು ಎದುರಿಸಿ, ಗೆಲ್ಲುವ ವಿಚಾರ ನಿಮಗೆ ಸಾಧ್ಯವಾಗುತ್ತದೆ. ಚುನಾವಣೆಯ ದಿನಗಳು ಸಮೀಪಿಸಿವೆ ಎಂದಾದರೆ ಪ್ರಯತ್ನ ಜೋರಾಗಿರಲಿ. ಮನೆಯ ಬ್ರಹ್ಮಸ್ಥಾನದಲ್ಲಿ ಚಿಕ್ಕ ನೀಲಿಯ ದಾರದ ತುಂಡನ್ನು (ಸಿಲ್ಕ್ ದಾರ ಇರಲಿ) ಚೆಲ್ಲಿ ಅದನ್ನು ತಿರುಗಿ ಎತ್ತಿ ಹತ್ತಿರದ ವಿಶಾಲ ಮರದ ಕೆಳಗೆ ಇರಿಸಿ ಹೋಗಿ. ಸಾತ್ವಿಕ ಶಕ್ತಿಯಾಗಿ ಅದೃಷ್ಟವೂ ಒಗ್ಗೂಡಲಿದೆ. ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 1

ವೃಶ್ಚಿಕ: ಪರಿಸ್ಥಿತಿಯು ಅನುಕೂಲಕರವಾಗಿದೆ ಎಂಬ ಭ್ರಮೆ ಆವರಿಸುತ್ತದೆ. ಹೀಗಾಗಿ ಒಮ್ಮೆಗೆ ಬಹುದೊಡ್ಡದನ್ನು ಮಾಡಲು ಮುಂದಾಗುವ ನಿರ್ಧಾರವನ್ನು ತೆಗೆದುಕೊಳ್ಳದಿರಿ. ಅಪರೂಪದ್ದಾದ ಕುಜಸಿದ್ಧಿ ಇರುವುದರಿಂದ ಸುಬ್ರಹ್ಮಣ್ಯನನ್ನು ಆರಾಧಿಸಿ. ಸಾಡೇಸಾತಿ ಕಾಟ ನಿವಾರಣೆಗೆ ಹನುಮಾನ್ ಚಾಲೀಸಾ ಓದಿ. ನಿಶ್ಚಯವಾಗಿಯೂ ಗೆಲ್ಲಬಲ್ಲಿರಿ ಎಂಬ ಸಮಸ್ಯೆಯನ್ನು ಇನ್ನಷ್ಟು ಆಳವಾಗಿ ವಿಶ್ಲೇಷಿಸಿಕೊಳ್ಳಿ. ಸೂರ್ಯನ ಆರಾಧನೆಯಿಂದ ಮಹತ್ವದ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಿ. ಉತ್ತಮವಾದ ಕೆಲಸ ಹಿಡಿಯಬಲ್ಲಿರಿ. ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 8

ಧನು: ಸಾಡೇಸಾತಿ ಕಾಟದ ಸಮಯ. ಗುರುತರವಾದ ಜವಾಬ್ದಾರಿ ನಿರ್ವಹಿಸುವಾಗ ಎಡವಟ್ಟುಗಳಾಗಲು ಸಾಧ್ಯ. ಎಕ್ಕದ ಹೂಗಳಿಂದ ಶಿವನ ಆರಾಧನೆ ಮಾಡಿ. ದುರ್ಗಾ ಆರಾಧನೆಯೂ ಉತ್ತಮ. ತೀವ್ರತರವಾದ ನಿರೋಧ ತರುವ ಎದುರಾಳಿಗಳನ್ನು ಎದುರಿಸುವ ಶಕ್ತಿ ಸಿಗುತ್ತದೆ. ಮಾತಿನಲ್ಲಿ ಕಠೋರತೆ ಬೇಡ. ಏರುಧ್ವನಿಯಲ್ಲಿ ಮಾತನಾಡುವವರ ಬಳಿ ಮೌನವಾಗಿರಿ. ಜಗಳವಾಡಿದರೆ ಸಜ್ಜನರ ಜತೆ ಜಗಳ ಮಾಡಬೇಕು. ಅಲ್ಪರು ಮಾನಹಾನಿಗೆ ಕಾರಣರಾಗುತ್ತಾರೆ. ಕ್ಷಣಕಾಲದ ಕೋಪದಿಂದ ವರ್ಚಸ್ಸು ಕಳೆದುಕೊಳ್ಳದಿರಿ. ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 3

ಮಕರ: ನಿಮ್ಮ ರಾಶಿಯ ಯಜಮಾನನಾದ ಶನೈಶ್ಚರನೇ ಚಂದ್ರನ ಜತೆ ಯುದ್ಧ ಹೂಡಿದ್ದಾನೆ. ಚಂದ್ರನ ಸಂಘರ್ಷದಿಂದಾಗಿ ಮನೆಯಲ್ಲಿ ಅಶಾಂತಿ ತುಂಬಬಹುದು. ತಾಳ್ಮೆ ಇರಲಿ. ಗಂಡ-ಹೆಂಡತಿಯರ ನಡುವಣ ಜಗಳದಿಂದ ಏನೂ ತಿಳಿಯದ ಮಕ್ಕಳ ನೆಮ್ಮದಿಗೆ ತೊಂದರೆ ಬಾರದಿರಲಿ. ಮಕ್ಕಳನ್ನು ಉತ್ತೇಜಿಸಿ. ನಿಮ್ಮ ಬಿಕ್ಕಟ್ಟುಗಳು, ಒತ್ತಡಗಳು ದೂರವಾಗಲು ಸಾಧ್ಯ. ನೀಲಿ ಸಿಲ್ಕ್ ನೂಲಿನ ತುಂಡುಗಳನ್ನು ಕತ್ತಲಹೊತ್ತಿನಲ್ಲಿ ಕಾಳಿಕಾಳ ಧ್ಯಾನ ಪೂರೈಸಿ, ತುಳಸಿ ಗಿಡದಡಿಗೆ ಚೆಲ್ಲಿ. ಶಕ್ತಿ ಸಂಚಯನ ಸಾಧ್ಯ. ಶುಭದಿಕ್ಕು: ನೈಋತ್ಯ ಶುಭಸಂಖ್ಯೆ:9

ಕುಂಭ: ನಿಮ್ಮದೇ ಆದ ಹಲವು ಯೋಜನೆಗಳನ್ನು ಅರ್ಥಪೂರ್ಣವಾಗಿ ಗೆಲ್ಲಿಸಬಲ್ಲಿರಿ. ಹಿರಿಯರ, ಗೆಳೆಯರ ಬೆಂಬಲ ಅಬಾಧಿತವಾಗಿದೆ. ಧನ ಲಾಭದ ಕುರಿತು ಭರವಸೆ ಇಡಬಹುದು. ಗುರುಬಲವು ಅರ್ಥಪೂರ್ಣವಾಗಿರುವುದರಿಂದ ಮಹತ್ವಾಕಾಂಕ್ಷೆಗಳ ದಾರಿಯನ್ನು ಸಮರ್ಥವಾಗಿ ಕ್ರಮಿಸಲಿದ್ದೀರಿ. ಅನ್ಯಲಿಂಗಿಗಳ ಬಗ್ಗೆ ಎಚ್ಚರ ಇರಲಿ. ಸಕಾರಾತ್ಮಕ ಶಕ್ತಿಯನ್ನು ಹಾಳುಮಾಡುವ ಸಾಧ್ಯತೆ ಇರುತ್ತದೆ. ಶ್ರೀ ದೇವಿಲಲಿತಾ ಸಹಸ್ರನಾಮ ಓದಿ. ನಿಮ್ಮನ್ನು ವಿಷಮಸ್ಥಿತಿಯಿಂದ ತಾಯಿ ನಿಮ್ಮನ್ನು ಕಾಪಾಡಬಲ್ಲಳು. ಶುಭದಿಕ್ಕು: ಉತ್ತರ ಶುಭಸಂಖ್ಯೆ:5

ಮೀನ: ನಿಮ್ಮ ವಿಚಾರದಲ್ಲಿ ತಪ್ಪು ಅಭಿಪ್ರಾಯ ಹುಟ್ಟುವಂತೆ ಕೆಲವರು ಸದಾ ನಿರತರಾಗುತ್ತಾರೆ. ಆದರೂ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಡಬೇಡಿ. ಕಣ್ಣಾರೆ ಕಂಡು ಪರಾಂಬರಿಸಿ ನೋಡಿ. ಹೆಚ್ಚಿನ ಮುತುವರ್ಜಿಯೊಡನೆ ದೊಡ್ಡದನ್ನು ಸಾಧಿಸಲು ಸಾಧ್ಯತೆ ಹೇರಳ. ಕೈಕೆಳಗಿನವರಿಗೆ ಸಲಿಗೆ ಕೊಡಬೇಡಿ. ಶ್ರೀ ದೇವಿ ಖಡ್ಗಮಾಲಿನಿಯನ್ನು ಆರಾಧಿಸಿ, ಸ್ತುತಿಸಿ. ಬಹಳವಾದ ರೀತಿಯ ಸಂಪನ್ನತೆಗಳನ್ನು ತಾಯಿಯ ಅನುಗ್ರಹದಿಂದ ಸಂಪಾದಿಸಬಲ್ಲಿರಿ. ಚೆಕ್​ಬುಕ್ ಬಗ್ಗೆ ಎಚ್ಚರ ಇರಲಿ. ತೊಂದರೆಗೆ ದಾರಿ ಆಗದಿರಲಿ. ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ:2

Leave a Reply

Your email address will not be published. Required fields are marked *