21.7 C
Bengaluru
Tuesday, January 21, 2020

ಈಜುಕೊಳ ಮತ್ತೊಮ್ಮೆ ಸ್ಥಗಿತ

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ಕಾರವಾರ: ಇಲ್ಲಿನ ನಗರಸಭೆಯ ಈಜುಕೊಳ ಮತ್ತೊಮ್ಮೆ ಬಂದ್ ಆಗಿದೆ. ಕಳೆದ ಕೆಲ ತಿಂಗಳಿಂದ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಈಜು ಪ್ರಿಯರು ಬೇಸರಗೊಳ್ಳುವಂತಾಗಿದೆ.

2017 ರಿಂದ ಗುತ್ತಿಗೆದಾರರೊಬ್ಬರು ಈಜುಕೊಳ ನಡೆಸುತ್ತ ಬಂದಿದ್ದರು. ಆದರೆ, ಕಾಮಗಾರಿ ಅವೈಜ್ಞಾನಿಕವಾಗಿ ಆಗಿದೆ. ಆದರೆ, ನಷ್ಟದ ಕಾರಣ ನೀಡಿ ಬಂದ್ ಮಾಡಿದ್ದಾರೆ. ನಗರಸಭೆ ಅಧಿಕಾರಿಗಳೂ ಇದನ್ನು ಮರು ಚಾಲನೆ ನೀಡಲು ಆಸಕ್ತಿ ತೋರಿಸಿಲ್ಲ. ನೆಲಮಟ್ಟದಿಂದ ಕೆಳಗೆ ಈಜುಕೊಳ ಇರುವುದರಿಂದ ಕೊಳಚೆ ನೀರು ಒಳ ನುಗ್ಗುತ್ತದೆ. ನೀರನ್ನು ಹೊರ ಚೆಲ್ಲಲು ಚರಂಡಿ ವ್ಯವಸ್ಥೆ ಇಲ್ಲ. ಶುದ್ಧ ನೀರು ಇರುವಂತೆ ಮಾಡಲು 24 ಗಂಟೆ ಪಂಪ್ ಸೆಟ್ ಚಾಲನೆಯಲ್ಲಿ ಇಡಬೇಕಾಗಿದೆ. ಅಷ್ಟೊಂದು ಹೊತ್ತು ಪಂಪ್ ಚಾಲನೆ ಮಾಡಿದರೆ ಹೆಚ್ಚು ವಿದ್ಯುತ್ ಬಿಲ್ ಬರುತ್ತದೆ. ಮಾಸಿಕ 25 ಸಾವಿರ ರೂ. ಆದಾಯ ಬಂದರೆ ಅದು ವಿದ್ಯುತ್ ಬಿಲ್​ಗೂ ಸಾಕಾಗದ ಪರಿಸ್ಥಿತಿ ಇದೆ. ಕೋಚ್, ಹಾಗೂ ಸಹಾಯಕರ ವೇತನ, ಶುದ್ಧೀಕರಣ ರಾಸಾಯನಿಕಗಳ ಖರ್ಚು ಎಲ್ಲ ಸೇರಿ ಲಕ್ಷಾಂತರ ರೂ. ಖರ್ಚಿದೆ ಎಂಬುದು ಈಜುಕೊಳ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರ ಅಭಿಮತ. ನಗರಸಭೆ ಒಪ್ಪಂದದಂತೆ ವಿದ್ಯುತ್ ಬಿಲ್ ಹಾಗೂ ಕೊಳದ ನಿರ್ವಹಣೆ ಮಾಡಬೇಕು. ತಿಂಗಳ 8,500 ರೂ. ಬಾಡಿಗೆ ನೀಡಬೇಕು ಎಂದಿದೆ. ಆದರೆ, ಗುತ್ತಿಗೆದಾರರು ನಷ್ಟವಾಗುತ್ತಿದೆ ಎಂಬ ಕಾರಣ ನೀಡಿ ವಿದ್ಯುತ್ ಬಿಲ್ ಪಾವತಿಸಿಲ್ಲ. ಕೊಡಬೇಕಾದ ಬಾಡಿಗೆಯನ್ನೂ ಪಾವತಿಸಿಲ್ಲ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು. ಒಟ್ಟಾರೆ ಇಬ್ಬರ ಜಗಳದ ನಡುವೆ ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಿದ ನಗರಸಭೆ ಆಸ್ತಿ ಪಾಳು ಬಿದ್ದಿದೆ.

ಈಜುಕೊಳ ನಿರ್ವಹಣೆ ಗುತ್ತಿಗೆ ನೀಡಿದರೂ ನಗರಸಭೆ ಕರಾರುಪತ್ರ ಮಾಡಿಕೊಟ್ಟಿಲ್ಲ. ಅಲ್ಲದೆ, ಈಜುಕೊಳ ಕಟ್ಟಡದ ಮೊದಲ ಮಹಡಿಯ ಜಾಗವನ್ನು ಬಳಕೆಗೆ ನೀಡುವುದಾಗಿ ಗುತ್ತಿಗೆ ಸಂದರ್ಭದಲ್ಲಿ ತಿಳಿಸಿದ್ದರು. ಅದನ್ನೂ ನೀಡಿಲ್ಲ. ಪ್ರತಿ ತಿಂಗಳು 80 ಸಾವಿರ ರೂ. ಖರ್ಚಿಗೆ ಬರುತ್ತದೆ. 25 ಸಾವಿರದಷ್ಟು ಮಾತ್ರ ಆದಾಯವಿದೆ. ಇದರಿಂದ ಸಾಕಷ್ಟು ನಷ್ಟವಾಗುತ್ತಿದೆ. ಆದರೂ ಒಂದು ವರ್ಷ ವ್ಯವಸ್ಥಿತವಾಗಿ ನಡೆಸಿದ್ದೇವೆ. ಇನ್ನೂ ನಷ್ಟ ಭರ್ತಿಗೆ ಸಾಧ್ಯವಿಲ್ಲ. ನಾವು ಕೊಳ ನಡೆಸುವುದಿಲ್ಲ ಎಂದು 6 ತಿಂಗಳ ಹಿಂದೇ ನಗರಸಭೆಗೆ ಪತ್ರ ನೀಡಿದ್ದೇವೆ. ನಗರಸಭೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
| ಛತ್ರಪತಿ ಮಾಳ್ಸೇಕರ್
ಗುತ್ತಿಗೆದಾರ

ಈಜುಕೊಳ ನಿರ್ವಹಣೆಯಲ್ಲಿ ನಷ್ಟವಾಗುತ್ತದೆ ಎಂಬುದು ಗುತ್ತಿಗೆದಾರರ ಅಭಿಮತ ಅದೇನೇ ಇದ್ದರೂ ನಗರಸಭೆಗೆ ಬರಬೇಕಾದ ಆದಾಯ ಬರಲೇಬೇಕು. ಒಂದು ರೂಪಾಯಿಯೂ ಸಿಗದೇ ನಗರಸಭೆ ಆಸ್ತಿ ಬಳಕೆ ನೀಡಲು ಸಾಧ್ಯವಿಲ್ಲ. ಇದರಿಂದ ಚುನಾವಣೆ ನೀತಿ ಸಂಹಿತೆ ಬಳಿಕ ನಾವು ಮರು ಟೆಂಡರ್ ಮಾಡಲಿದ್ದೇವೆ.
| ಕೆ.ಎಂ.ಮೋಹನರಾಜ್ ಇಂಜಿನಿಯರ್

ಒಂದಿಲ್ಲೊಂದು ತೊಂದರೆ
ನಗರದ ಎಂ.ಜಿ.ರಸ್ತೆಯಲ್ಲಿ 2012 ರಲ್ಲಿ ಈಜುಕೊಳವನ್ನು ಸುಮಾರು 1 ಕೋಟಿ ರೂ. ಖರ್ಚು ಮಾಡಿ ನಿರ್ವಿುಸಿ, ಉದ್ಘಾಟಿಸಲಾಯಿತು. ಆಗಿನಿಂದಲೂ ಈಜುಕೊಳ ನಗರಸಭೆಗೆ ಆದಾಯ ತರುವ ಬದಲು ನಷ್ಟದ ಲೆಕ್ಕವಾಗಿಯೇ ಉಳಿದುಕೊಂಡಿದೆ. ಸುರಳೀತವಾಗಿ ನಡೆಯಲು ಒಂದಲ್ಲ ಒಂದು ತೊಂದರೆ ಉಂಟಾಗುತ್ತಲೇ ಇದೆ. ಕೊಳ ಉದ್ಘಾಟನೆಗೂ ಪೂರ್ವದಲ್ಲಿ ಕಾರ್ವಿುಕನೊಬ್ಬ ಬಿದ್ದು, ಮೃತಪಟ್ಟಿದ್ದ. ಉದ್ಘಾಟನೆಯ ನಂತರ ಈಜಲು ಹೋದ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ನಂತರವೂ ಟೆಂಡರ್ ಪ್ರಕ್ರಿಯೆ ವಿಳಂಬ, ರಿಪೇರಿ ಹೀಗೆ ಮತ್ತೆ ಮತ್ತೆ ಕೊಳ ಬಂದ್ ಆಗುತ್ತಲೇ ಇದೆ. ಈಗ ನಗರಸಭೆ ಹಾಗೂ ಗುತ್ತಿಗೆ ಪಡೆದ ವ್ಯಕ್ತಿಗಳ ನಡುವಿನ ಭಿನ್ನಾಭಿಪ್ರಾಯದಿಂದ 6 ತಿಂಗಳಿಂದ ಈಜುಕೊಳ ಬಂದಾಗಿದೆ.

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...