ಇ-ಕೆವೈಸಿಗೆ ಸರ್ವರ್ ಸಮಸ್ಯೆ

blank

ನರಗುಂದ: ಪಡಿತರ ಸೋರಿಕೆ, ಬೋಗಸ್ ಕಾರ್ಡ್ ತಡೆಯಲು ಜಾರಿಗೆ ತಂದಿರುವ ಆಧಾರ್ ಕಾರ್ಡ್ ಜೋಡಣೆ (ಇ-ಕೆವೈಸಿ) ಯೋಜನೆಗೆ ಇದೀಗ ತಾಲೂಕಿನಲ್ಲಿ ಸರ್ವರ್ ಸಮಸ್ಯೆ ಎದುರಾಗಿದ್ದು, ಪಟ್ಟಣ ಸೇರಿ ಬಹುತೇಕ ಗ್ರಾಮಗಳ ಜನರು ಪಡಿತರ ಹಾಗೂ ಆಧಾರ್ ಸೇವಾ ಕೇಂದ್ರಗಳಿಗೆ ಅಲೆದಾಡುವಂತಾಗಿದೆ.

ಪಟ್ಟಣದಲ್ಲಿ 13, ಗ್ರಾಮೀಣ ಪ್ರದೇಶಗಳಲ್ಲಿ 19 ಸೇರಿ ತಾಲೂಕಿನಲ್ಲಿ 32 ಪಡಿತರ ಅಂಗಡಿಗಳಿವೆ. 1 ಈ ಪೈಕಿ ಪ್ರಸ್ತುತ 2,831 ಅಂತ್ಯೋದಯ, 21,119 ಬಿಪಿಎಲ್, 3783 ಎಪಿಎಲ್ ಸೇರಿ ಒಟ್ಟು 27,733 ಕಾರ್ಡ್​ಗಳಿದ್ದು, 90,483 ಪಡಿತರ ಪಡೆಯುವ ಸದಸ್ಯರಿದ್ದಾರೆ. ಇದರಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಾವಿರಾರು ಫಲಾನುಭವಿಗಳು ಮೃತಪಟ್ಟಿದ್ದಾರೆ. ಈ ಮೃತರ ಹೆಸರಿನಲ್ಲೇ ರೇಷನ್ ಪಡೆಯುವುದನ್ನು ತಪ್ಪಿಸಲು ಆಹಾರ ಇಲಾಖೆ ಜ. 1ರಿಂದ ಮಾ. 31ರವರೆಗೆ ಆಧಾರ್ ಜೋಡಣೆ (ಇ-ಕೆವೈಸಿ) ಯೋಜನೆ ಜಾರಿಗೆ ತಂದಿದೆ. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಸೇವೆ ದೊರೆಯುತ್ತಿಲ್ಲ.

ನರಗುಂದ ತಾಲೂಕಿನಲ್ಲಿ ಇನ್ನೂ ಆಧಾರ್ ಜೋಡಣೆ ಕಾರ್ಯವೇ ಆರಂಭವಾಗಿಲ್ಲ. ಗೋವಾ ಹಾಗೂ ಬೆಂಗಳೂರು, ಮಂಗಳೂರು, ಉಡುಪಿ ಸೇರಿ ವಿವಿಧೆಡೆಗೆ ಕೂಲಿ ಕೆಲಸಕ್ಕೆಂದು ತೆರಳಿದ್ದವರು ಇ-ಕೆವೈಸಿ ಮಾಡಿಸಲೆಂದು ತವರಿಗೆ ಆಗಮಿಸಿದ್ದಾರೆ. ಆದರೆ, ಇಲ್ಲಿ ಪಡಿತರ ಅಂಗಡಿಗಳಿಗೆ ಅಲೆದಾಡಿದರೂ ಆಧಾರ ಜೋಡಣೆ ಕಾರ್ಯವಾಗುತ್ತಿಲ್ಲ.

ನ್ಯಾಯಬೆಲೆ ವರ್ತಕರು ಆಧಾರ ಜೋಡಣೆಗೆ ಲಾಗಿನ್ ಮಾಡಿದರೆ ಸರ್ವರ್ ಸಮಸ್ಯೆ ಎದುರಾಗಿ ಪುಟ ತೆರೆಯುವುದೇ ಇಲ್ಲ. ಕೆಲವೆಡೆ ಲಾಗಿನ್ ಆದರೂ ಫಲಾನುಭವಿಗಳ ಆಧಾರ್ ಜೋಡಣೆಯಾಗುತ್ತಿಲ್ಲ. ಈ ಹಿಂದೆ ತಾಲೂಕಿನಲ್ಲಿ 3 ಆಧಾರ್ ಕೇಂದ್ರಗಳಿದ್ದವು. ತಹಸೀಲ್ದಾರ್ ಕಚೇರಿಯಲ್ಲಿರುವ ಆಧಾರ ಸೇವಾ ಕೇಂದ್ರ 2016 ರಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಇದೀಗ ಉಳಿದಿರುವ ಎರಡು ಆಧಾರ ಕೇಂದ್ರಗಳಿಂದ ಸಾರ್ವಜನಿಕರಿಗೆ ಸೇವೆ ದೊರೆಯುತ್ತಿಲ್ಲ.

ತಾಲೂಕಿನಲ್ಲಿ ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಆಧಾರ್ ಜೋಡಣೆ ಕಾರ್ಯ ಸ್ಥಗಿತಗೊಂಡಿದೆ. 2016ರ ಮಹದಾಯಿ ಗಲಾಟೆಯಲ್ಲಿ ತಹಸೀಲ್ದಾರ್ ಕಚೇರಿಯಲ್ಲಿದ್ದ ಆಧಾರ್ ಸೇವಾ ಕೇಂದ್ರದ ಎಲ್ಲ ಪೀಠೋಪಕರಣಗಳು ಧ್ವಂಸಗೊಂಡಿದ್ದವು. ಹೀಗಾಗಿ ತಾಲೂಕಿನಲ್ಲಿ ಕೇವಲ ಎರಡು ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಮೇರೆಗೆ ಇದೀಗ ಹೊಸ ಸೇವಾ ಕೇಂದ್ರದ ಕಿಟ್ ನೀಡಿದ್ದಾರೆ. ಎರಡ್ಮೂರು ದಿನಗಳಲ್ಲಿ ಅದನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು.
| ಎ.ಎಚ್. ಮಹೇಂದ್ರ ತಹಸೀಲ್ದಾರ್, ನರಗುಂದ

ಈ ಹಿಂದಿನ ಅವಧಿಯಲ್ಲಿ ನರಗುಂದ ತಾಲೂಕಿನಲ್ಲಿ ಈಗಾಗಲೇ ಶೇ. 35ರಷ್ಟು ಆಧಾರ್ ಜೋಡಣೆ ಕಾರ್ಯ ಮಾಡಲಾಗಿದೆ. ಇ-ಕೆವೈಸಿ ಲಾಗಿನ್​ನಲ್ಲಿ ಕೆಲ ತಾಂತ್ರಿಕ ದೋಷವಿದೆ ಎಂದು ನ್ಯಾಯಬೆಲೆ ವರ್ತಕರಿಂದ ತಿಳಿದುಬಂದಿದೆ. ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸಾಫ್ಟವೇರ್ ಆರಂಭಿಸಲು ಇಲಾಖೆಯಲ್ಲಿ ಚಿಂತನೆ ನಡೆದಿದೆ. ವಾರದಲ್ಲಿ ಎಲ್ಲವೂ ಸರಿಯಾಗಲಿದೆ.
| ಅನೀಲ ಪವಾರ, ಆಹಾರ ನೀರೀಕ್ಷಕ ನರಗುಂದ

ಆಧಾರ್ ಕಾರ್ಡ್ ಗಾಗಿ ನಾವು ನಾಲ್ಕೈದು ತಿಂಗಳಿಂದ ಪೋಸ್ಟ್ ಆಫೀಸ್​ಗೆ ಅಲೆಯುತ್ತಿದ್ದೇವೆ. ಇದರಿಂದ ನಮ್ಮ ಎಲ್ಲ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ. ಇಲ್ಲಿನ ಅಧಿಕಾರಿಗಳು ಮಾತ್ರ ನಮ್ಮ ಕೆಲಸ ಮಾಡಿಕೊಡುತ್ತಿಲ್ಲ. ಈ ಕುರಿತು ಮೇಲಧಿಕಾರಿಗಳು ಗಮನ ಹರಿಸಬೇಕು.
| ಪವಿತ್ರಾ ಗುಡದರಿ, ಆಫ್ರೀನ್ ಬೀಳಗಿ, ನರಗುಂದ ನಿವಾಸಿಗಳು

Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…