Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಇಸ್ಲಾಂನ ಧರ್ಮಸಮನ್ವಯ ಭಾವ

Friday, 13.07.2018, 3:03 AM       No Comments

ಇಸ್ಲಾಂ ಧರ್ಮದ ಸಂಸ್ಥಾಪಕರಾದ ಮುಹಮ್ಮದ್ (ಸ) ಪೈಗಂಬರ್ ಮತ್ತು ವೀರಶೈವಧರ್ಮದ ಉದ್ದೀಪನಾಚಾರ್ಯರಾದ ಶ್ರೀ ಬಸವೇಶ್ವರ – ಈ ಇಬ್ಬರೂ ಮೇರು ವ್ಯಕ್ತಿತ್ವದವರು. ‘ಮಹಾಪುರುಷರು ಕೂಡ ಮಾನವರಾಗಿ ಹುಟ್ಟಿ ಬೆಳೆದು ಅತಿಮಾನವರಾಗಿ ಮೆರೆಯುತ್ತಾರೆ’ ಎಂಬ ಮಾತು ಇವರಿಬ್ಬರಿಗೂ ಅನ್ವಯಿಸುತ್ತದೆ. ಪ್ರಪಂಚದ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ಇವರಿಬ್ಬರ ಸಂದೇಶಗಳ ಪಾಲನೆಯು ಎಂತಹ ಸತ್ಪಲವನ್ನು ನೀಡಬಹುದೆಂಬುದರ ಬಗ್ಗೆ ಆಲೋಚಿಸಬಹುದಾಗಿದೆ. ಈ ದೃಷ್ಟಿಯಿಂದ ಇಸ್ಲಾಂ ಹಾಗೂ ವೀರಶೈವ ಧರ್ಮಗಳ ಕಥೆಯು ತ್ಯಾಗ-ಬಲಿದಾನಗಳ ಕಥೆಯೇ ಎಂದು ಅನಿಸುತ್ತದೆ.

‘ನಿನ್ನ ಶೀಲ ಸ್ವಭಾವಗಳು ದೇವರ ಗುಣಗಳನ್ನು ಹೋಲುವಂತೆ ಮಾಡಿಕೊ’ ಎಂಬುದು ಪೈಗಂಬರರ ವಾಣಿ. ದಿವ್ಯಧರ್ಮನಿಷ್ಠರಾದ (ಹ) ಬೀಬೀ ಖದೀಜಾ (ರ)

ಅವರು ಮಹಾಸಾಧಕರಾದ ಪ್ರವಾದಿ ಮುಹಮ್ಮದ್ (ಸ) ಅವರನ್ನು ಕುರಿತು ಹೇಳಿರುವ ವ್ಯಾಖ್ಯಾನರೂಪದ ವಚನವಿದು. ಈ ರೂಪಕದಲ್ಲಿ ಮುಹಮ್ಮದರ (ಸ) ಸಮಗ್ರ ವ್ಯಕ್ತಿತ್ವವೂ, ಸ್ವಚ್ಛಂದ ಲಹರಿಯ ವಚನರತ್ನಗಳ ಸ್ವರೂಪವೂ ಅಡಗಿದೆ. ಅದೇ ರೀತಿ ದಿವ್ಯ ಅನುಭಾವಿಗಳಾದ ಅಲ್ಲಮಪ್ರಭುದೇವರು ಶ್ರೀ ಬಸವೇಶ್ವರರನ್ನು ಕುರಿತು ಬರೆದಿರುವ ವ್ಯಾಖ್ಯಾನರೂಪದ ವಚನವನ್ನು ನೋಡಿ:

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,

ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು

ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!

ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.

ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ?

ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?

ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು

ಬದುಕಿದೆನು ಕಾಣಾ ಸಿದ್ಧರಾಮಯ್ಯಾ. (ವಚನ ಸಾಹಿತ್ಯ ಸಂಪುಟ: ಪುಟ 591)

ಈ ರೂಪಕದಲ್ಲಿ ಬಸವೇಶ್ವರರ ಸಮಗ್ರ ವ್ಯಕ್ತಿಚಿತ್ರವೂ, ಸ್ವಚ್ಛಂದ ಲಹರಿಯ ವಚನರತ್ನಗಳ ಸ್ವರೂಪವೂ ಅಡಗಿದೆ.

Leave a Reply

Your email address will not be published. Required fields are marked *

Back To Top