ಇಸ್ರೋಗೆ ಮತ್ತೊಂದು ಶತಕ ಸಂಭ್ರಮ

ನವದೆಹಲಿ: ಅಂತರಿಕ್ಷ ಕ್ಷೇತ್ರದಲ್ಲಿ ನಿರಂತರವಾಗಿ ಸಾಧನೆಗಳ ಮೈಲಿಗಲ್ಲು ನೆಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಮತ್ತೊಂದು ಮುಕುಟವನ್ನು ಮುಡಿಗೇರಿಸಿಕೊಳ್ಳಲಿದೆ. ಭೂ ಪರಿವೀಕ್ಷಣೆ ಉದ್ದೇಶದ ಕಾಟೋಸ್ಯಾಟ್-2 ಸೇರಿ 31 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿ

ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ಉಡಾಯಿಸಲು ಕ್ಷಣಗಣನೆ ಆರಂಭವಾಗಿದೆ. ಈ ಪೈಕಿ ಕಾಟೋಸ್ಯಾಟ್-2, ಮೈಕ್ರೋ ಮತ್ತು ನ್ಯಾನೋ ಉಪಗ್ರಹಗಳು ಇಸ್ರೋ ಉಡಾವಣೆಗೊಳಿಸುತ್ತಿರುವ ನೂರನೇ ಉಪಗ್ರಹ ಗಳೆಂಬುದು ವಿಶೇಷ. ಈ ಪ್ರಯೋಗ ಯಶಸ್ವಿಯಾದಲ್ಲಿ ಇಂತಹ ಸಾಧನೆ ಮಾಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.

ಕಳೆದ ಆಗಸ್ಟ್ 31ರಂದು ದೇಶದ 8ನೇ ನ್ಯಾವಿಗೇಷನ್ ಐಆರ್​ಎನ್​ಎಸ್​ಎಸ್-1ಎಚ್ ಉಪಗ್ರಹ ಉಡಾವಣೆಯಲ್ಲಿ ವಿಫಲವಾಗಿದ್ದ ಇಸ್ರೋ, ಈಗ ಪಿಎಸ್​ಎಲ್​ವಿ-ಸಿ 40 ರಾಕೆಟ್ ಮೂಲಕ 31 ಉಪಗ್ರಹಗಳನ್ನು ನಭಕ್ಕೆ ಸೇರಿಸಲು ಮುಂದಾಗಿದೆ. 2018ರಲ್ಲಿ ಇಸ್ರೋ ಕೈಗೊಳ್ಳುತ್ತಿರುವ ಮೊದಲ ಉಡಾವಣೆ ಇದಾಗಿದ್ದು, ಈ ವರ್ಷ ಪ್ರತಿ ತಿಂಗಳಿಗೊಂದು ರಾಕೆಟನ್ನು ನಭಕ್ಕೆ ಕಳುಹಿಸಲು ಚಿಂತಿಸಿದೆ. ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ ಕೂಡ ಈ ವರ್ಷದ ಉಡಾವಣಾ ಪಟ್ಟಿಯಲ್ಲಿದೆ. ಅತ್ಯಾಧುನಿಕ ಸಂವಹನ ಉಪಗ್ರಹಗಳಾದ ಜಿಸ್ಯಾಟ್-6ಎ ಮತ್ತು ಜಿಸ್ಯಾಟ್-29ಗಳು ಸಹ ಈ ವರ್ಷ ಉಡ್ಡಯನವಾಗಲಿವೆ. -ಏಜೆನ್ಸೀಸ್

ಕಾಟೋಸ್ಯಾಟ್-2 ವಿಶೇಷತೆ

ಕಾಟೋಸ್ಯಾಟ್-2 ಉಪಗ್ರಹವು 710 ಕೆ.ಜಿ ತೂಕದ್ದಾಗಿದ್ದು, ರೇಖಾಭೂಪಟ, ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದ ಚಿತ್ರಣ, ಕರಾವಳಿ ಅಂಚಿನ ಭೂಮಿಯನ್ನು ರಸ್ತೆ ನಿರ್ವಣಕ್ಕೆ ಬಳಕೆ ಮಾಡುವ ಉದ್ದೇಶ ರೇಖಾಚಿತ್ರಗಳನ್ನು ಅತ್ಯಾಧುನಿಕ (ಹೈ ಬೀಮ್ ತಂತ್ರಜ್ಞಾನದಲ್ಲಿ ಸೆರೆಹಿಡಿದು ರವಾನಿಸಲಿದೆ. ಹವಾಮಾನ ಕುರಿತ ಉಪಯುಕ್ತ ಮಾಹಿತಿಯನ್ನೂ ಕಾಟೋಸ್ಯಾಟ್ ಕಳುಹಿಸಲಿದೆ.

# ಕೆನಡಾ, ಫ್ರಾನ್ಸ್, ಫಿನ್ಲೆಂಡ್, ದಕ್ಷಿಣ ಕೊರಿಯಾ, ಬ್ರಿಟನ್ ಮತ್ತು ಅಮೆರಿಕಗಳ 28 ಉಪಗ್ರಹ (3 ಮೈಕ್ರೋ, 25 ನ್ಯಾನೊ)

# ಸ್ವದೇಶಿ ನಿರ್ವಿುತ 3 ಸ್ಯಾಟಲೈಟ್ (ಕಾಟೋಸ್ಯಾಟ್, ತಲಾ ಒಂದೊಂದು ಮೈಕ್ರೋ ಮತ್ತು ನ್ಯಾನೊ)

6ದೇಶಗಳೊಂದಿಗೆ ಇಸ್ರೋದ ಅಂತರಿಕ್ಷ್ ಕಾರ್ಪೆರೇಷನ್ ಮಾಡಿಕೊಂಡಿರುವ ವಾಣಿಜ್ಯ ಒಪ್ಪಂದದಂತೆ ಸ್ಯಾಟಲೈಟ್​ಗಳನ್ನು ಉಡಾವಣೆ ಮಾಡಲಾಗುತ್ತಿದೆ.

| ಎಂ.ಅಣ್ಣಾದೊರೈ ಶ್ರೀಹರಿಕೋಟಾದ ಸ್ಯಾಟಲೈಟ್ ಕೇಂದ್ರ ನಿರ್ದೇಶಕ

# ಒಟ್ಟಾರೆ ಉಪಗ್ರಹಗಳ ತೂಕ 1,323 ಕೆ.ಜಿ

# ಕಾಟೋಸ್ಯಾಟ್-2 ಉಪಗ್ರಹ 750 ಕೆ.ಜಿ

# ಮೈಕ್ರೋ ಸ್ಯಾಟ್​ಲೈಟ್ 100 ಕೆ.ಜಿ

# ನ್ಯಾನೊ ಉಪಗ್ರಹ 5 ಕೆ.ಜಿ

Leave a Reply

Your email address will not be published. Required fields are marked *