ಇವಿಎಂಗಳ ಪ್ರಥಮ ಹಂತದ ರ್ಯಾಂಡಮೈಜೇಷನ್

ಯಾದಗಿರಿ: ಜಿಲ್ಲೆಯಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಸಿದ್ಧತೆ ಕೈಗೊಂಡಿರುವ ಜಿಲ್ಲಾ ಚುನಾವಣಾಧಿಕಾರಿ ಎಂ.ಕೂರ್ಮಾರಾವ್, ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಇವಿಎಂಗಳ ಪ್ರಥಮ ಹಂತದ ರ್ಯಾಂಡಮೈಜೇಷನ್( ಯಾದೃಚ್ಛೀಕರಣ) ನಡೆಸಿದರು.

ಕಲಬುರಗಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಗುರುಮಠಕಲ್ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಾದಗಿರಿ, ಶಹಾಪುರ ಹಾಗೂ ಶೋರಾಪುರ ವಿಧಾನಸಭಾ ಕ್ಷೇತ್ರಗಳ ಇವಿಎಂಗಳ ರ್ಯಾಂಡಮೈಜೇಷನ್ ನಡೆಸಲಾಯಿತು. ಈಗಾಗಲೇ ಬೆಂಗಳೂರಿನ ಬಿಇಎಲ್ ಇಂಜಿನಿಯರ್ಗಳು ಬಂದು ಪರೀಕ್ಷಿಸಿರುವ ಇವಿಎಂ(ಎಫ್ಎಲ್ಸಿ ಒಕೆಯಾಗಿರುವ)ಗಳಿಗೆ ಮೊದಲನೇ ರ್ಯಾಂಡಮೈಜೇಷನ್ ಮಾಡಿಸಿ, ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಆಯಾ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಲಾಯಿತು.

ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 1135 ಮತಗಟ್ಟೆಗಳಿದ್ದು, ಗುರುಮಠಕಲ್ ಮತಕ್ಷೇತ್ರಲ್ಲಿ 284, ಶಹಾಪುರ 265, ಶೋರಾಪುರ 319 ಹಾಗೂ ಯಾದಗಿರಿ ಮತಕ್ಷೇತ್ರದಲ್ಲಿ 267 ಮತಗಟ್ಟೆಗಳಿವೆ. ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು 2ನೇ ಹಂತದಲ್ಲಿ ರ್ಯಾಂಡಮೈಜೇಷನ್ ನಡೆಸಿ ಇವಿಎಂಗಳನ್ನು ಪ್ರತಿಮತಗಟ್ಟೆಗೆ ನಿಗದಿ ಪಡಿಸಲಿದ್ದಾರೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಸಹಾಯಕ ಆಯುಕ್ತ ಶಂಕರ್ಗೌಡ ಸೋಮನಾಳ್, ತಹಸೀಲ್ದಾರ್ ಅರುಣ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಪಾಟೀಲ್, ಬಿಜೆಪಿಯ ವೆಂಕಟರೆಡ್ಡಿ ಅಬ್ಬೆ ತುಮಕೂರು, ಜೆಡಿಎಸ್ನ ಶಾಂತಪ್ಪ ಡಿ. ಜಾಧವ, ಬಿಎಸ್ಪಿಯ ಬಸವರಾಜ.ಎಂ, ಕಾಂಗ್ರೆಸ್ನ ಶರಣಪ್ಪ ಎಂ ಕೊಳ್ಳೂರ ಇದ್ದರು.

Leave a Reply

Your email address will not be published. Required fields are marked *