ಬಾಗಲಕೋಟೆ: ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿಗಳು ಸೋಮವಾರ ಸಂಕ್ರಾ0ತಿ ಸುಗ್ಗಿ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿದರು.
ಬೆಳಗ್ಗೆ ಬೀಳೂರ ಗುರುಬಸವ ಮಹಾಸ್ವಾಮಿಗಳಿಗೆ ಪೂಜೆ ಸಲ್ಲಿಸಿ ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರು ಬಸವ ಸೂಳಿಭಾವಿ ಮೆರವಣಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಬ್ಬಗಳು ಭಾರತೀಯ ಸಂಸ್ಕೃತಿಯ ಏಕತೆಯ ಪ್ರತಿಕವಾಗಿವೆ. ಭಾರತದ ಸಂಸ್ಕೃತಿ, ಧರ್ಮ ಮತ್ತು ಕೃಷಿಯೊಂದಿಗೆ ಆಳವಾದ ಸಂಬAಧ ಹೊಂದಿರುವ ಹಬ್ಬವಾಗಿದೆ. ವೈವಿದ್ಯಮಯ ಸಮುದಾಯಗಳನ್ನು ಒಂದುಗೂಡಿಸುವ ಹಬ್ಬವಾಗಿದ್ದು, ಸೂರ್ಯನ ಉತ್ತರದ ಪ್ರಯಾಣ ಮಾತ್ರವಲ್ಲದೆ ನವೀಕರಣ, ಸಮೃದ್ಧಿ ಮತ್ತು ಕೌಟುಂಬಿಕ ಬಂಧನಗಳನು ಬಲಪಡಿಸಲು ಈ ಹಬ್ಬಗಳು ನಮಗೆ ಸಹಕಾರಿಯಾಗಿವೆ ಎಂದರು.
Àಉತ್ತರ ಕರ್ನಾಟಕದ ಸಾಂಪ್ರದಾಯಿಕ ಇಳಕಲ್ ಸೀರೆ ಉಟ್ಟು ತಲೆಗೆ ಪೇಟಾ ಧರಿಸಿ ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳು ಜನಪದ ನೃತ್ಯಕ್ಕೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು. ಜನಪದ ಹಾಡುಗಳು ರಂಜಿಸಿದವು. ಕಲರ್ ಕಲರ್ ಸೀರೆಯಲ್ಲಿ ಗ್ವಾಗಲ್ ಹಾಕಿದ್ದ ನಾರಿಯರು, ಪಂಚೆ ಉಟ್ಟು ದೇಸಿತನ ಮೆರೆದರು.
ಈ ಸಂದರ್ಭದಲ್ಲಿ ಸಂಘದ ಆಡಳಿತಾಽಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಪದನಿಮಿತ್ಯ ಕಾರ್ಯದರ್ಶಿ ಡಾ.ಎಸ್.ಎಂ.ಗಾAವಕರ, ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎನ್.ಎಚ್.ಬೇವಿನಹಳ್ಳಿ ಇದ್ದರು.