ಇಳಕಲ್ಲ (ಗ್ರಾ) : ಪಟ್ಟಣದ ಎಸ್‌ಆರ್‌ಕೆ ಕಾಲನಿಯಲ್ಲಿನ ರಾಜೇಸಾಬ ಭಾವಿಕಟ್ಟಿ ಅವರ ಮನೆಯಲ್ಲಿ ಮಂಗಳವಾರ ಸಿಲಿಂಡರ್ ಸ್ಫೋಟಗೊಂಡಿದ್ದು, ಅಗ್ನಿ ಶಾಮಕ ದಳದ ಸಿಬ್ಬಿಂದಿ ಬೆಂಕಿ ನಂದಿಸಿದರು.
ಮೊದಲಿದ್ದ ಸಿಲಿಂಡರ್ ಖಾಲಿಯಾಗಿದ್ದರಿಂದ ವಿತರಕರು ಹೊಸ ಸಿಲಿಂಡರ್ ಇಳಿಸಿದ್ದರು. ಆದರೆ ಅದನ್ನು ಬಳಸಿರಲಿಲ್ಲ. ಸಿಲಿಂಡರ್ ಲೀಕೇಜ್ ಇದ್ದ ಕಾರಣ ಅದು ಗಾಳಿಯಲ್ಲಿ ಪಸರಿದೆ. ಅನ್ಯ ಕಾರ‌್ಯಕ್ಕೆ ಬೆಂಕಿ ಕಡ್ಡಿ ಕೊರೆದಾಗ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಎಚ್‌ಪಿ ಗ್ಯಾಸ್ ಸೆಂಟರ್ ಮಾಲೀಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಳಕಲ್ಲ ಶಹರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.