ಇಬ್ಬರು ಪ್ರಥಮ ದರ್ಜೆ ಸಹಾಯಕರು ಅಮಾನತು

blank

ಕಳಸ: ಕರ್ತವ್ಯಚ್ಯುತಿ ಆರೋಪದ ಮೇರೆಗೆ ತಾಲೂಕು ಕಚೇರಿಯ ಇಬ್ಬರು ಪ್ರಥಮ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಶರತ್‌ಕುಮಾರ್ ಮತ್ತು ಪ್ರಕಾಶ್ ಅವರು ಮೇಲಧಿಕಾರಿಗಳ ನಿರ್ದೇಶನ ಪಾಲಿಸುತ್ತಿಲ್ಲ. ಸಾರ್ವಜನಿಕರ ಭೇಟಿಗೆ ಸಿಗದೆ ಕರ್ತವ್ಯ ಚ್ಯುತಿ ಎಸಗುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಇಬ್ಬರ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ ಇಬ್ಬರನ್ನೂ ಅಮಾನತುಗೊಳಿಸಿದ್ದಾರೆ.
ಪ್ರಥಮ ದರ್ಜೆ ಸಹಾಯಕ ಪ್ರಕಾಶ್ 2024-2025ನೇ ಸಾಲಿನ ಮಳೆಹಾನಿ ಪರಿಹಾರದ ಸಂತ್ರಸ್ತರ ವಿವರವನ್ನು ತಂತ್ರಾಂಶದಲ್ಲಿ ಅಳವಡಿಸಲು ನಿರ್ಲಕ್ಷ್ಯ ತೋರಿಸಿದ್ದರು. ನೌಕಕರ ಇ-ಆಫೀಸ್ ಲಾಗಿನ್ ಸ್ವತಃ ಬಳಕೆ ಮಾಡದೆ ಆಪರೇಟರ್ ಮೂಲಕ ಕಡತ ವಿಲೇವಾರಿ ಕೆಲಸ ಮಾಡಿಸುತ್ತಿದ್ದರು ಎಂಬ ಆರೋಪ ಇತ್ತು.
ಮತ್ತೊಬ್ಬ ಸಿಬ್ಬಂದಿ ಶರತ್‌ಕುಮಾರ್ ಕೂಡ ಕಚೇರಿ ಕರ್ತವ್ಯಕ್ಕೆ ನಿಗದಿತ ಸಮಯಕ್ಕೆ ಬಾರದೆ ನಿರ್ಲಕ್ಷ್ಯ ತೋರುತ್ತಿದ್ದರು. ಸಾರ್ವಜನಿಕ ಕೆಲಸಗಳ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದರು. ಇವರು ಕೂಡ ಇ-ಆಫೀಶ್ ಲಾಗಿನ್ ಅನ್ನು ಬಳಕೆ ಮಾಡದೆ ಆಪರೇಟರ್ ಮೂಲಕ ಕಡತ ವಿಲೇವಾರಿ ಮಾಡಿಸುತ್ತಿದ್ದರು ಎಂಬ ದೂರು ಇತ್ತು.
ಇಬ್ಬರ ಮೇಲಿನ ಈ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟಿರುವ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…