ಇನ್ನೂ ರಾರಾಜಿಸುತ್ತಿವೆ ನಾಮಫಲಕ

ಶಿರಹಟ್ಟಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪಟ್ಟಣದ ತಾಲೂಕು ಪಂಚಾಯಿತಿ ಎದುರು ಹಾಕಲಾದ ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮ ಹಾಗೂ ಉದ್ಯೋಗ ಖಾತರಿ ಯೋಜನೆಯ ನಾಮಫಲಕವನ್ನು ಇನ್ನೂ ತೆಗೆದು ಹಾಕದಿರುವುದು ಪ್ರಜ್ಞಾವಂತ ನಾಗರಿಕರ ಕಂಗೆಣ್ಣಿಗೆ ಗುರಿಯಾಗಿದೆ.

ವಿಶೇಷವೆಂದರೆ ತಹಸೀಲ್ದಾರ್ ಅವರ ಮನೆ ಎದುರೇ ಇರುವ ಈ ಜಾಹೀರಾತಿನ ನಾಮಫಲಕವನ್ನು ತೆರವುಗೊಳಿಸದಿರುವು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.

ಬಸ್ ಟಿಕೆಟ್​ನಲ್ಲೂ ಜಾಗೃತಿ: ನರೇಗಲ್ಲ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ, ಜಿಲ್ಲಾ, ತಾಲೂಕು ಹಾಗೂ ಸ್ಥಳೀಯ ಆಡಳಿತಗಳು ಮತದಾನ ಜಾಗೃತಿಗೆ ಮುಂದಾಗಿವೆ. ಯುವ ಮತದಾರರು ಮತದಾನದಿಂದ ವಂಚಿತರಾಗುವುದನ್ನು ತಪ್ಪಿಸಲು ಆಯಾ ಬೂತ್ ಮಟ್ಟದಲ್ಲಿಯೇ ಮಿಂಚಿನ ನೋಂದಣಿ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಪ್ರಯಾಣಿಕರಿಗೆ ನೀಡುವ ಟಿಕೆಟ್​ಗಳ ಮೇಲೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ, ಪ್ರಜಾಪ್ರಭುತ್ವ ಉಳಿಸಿ ಎನ್ನುವ ಘೊಷ ವಾಕ್ಯದೊಂದಿಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.