More

  ಇತಿಹಾಸದ ಮಹತ್ವ ಅರಿಯಬೇಕು

  ಬಳ್ಳಾರಿ : ವಸ್ತು ಸಂಗ್ರಹಾಲಯಗಳು ಮಾನವನು ತಾನು ಪ್ರಾಚೀನತೆಯಿಂದ ಆಧುನಿಕತೆಯೆಡೆಗೆ ಸಾಗಿಬಂದ ಪುರಾವೆ ತಿಳಿಸುತ್ತವೆ. ಆದ್ದರಿಂದ ಇಂದಿನ ಪೀಳಿಗೆ ಇತಿಹಾಸದ ಮಹತ್ವ ಅರಿಯಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
  ಇಲ್ಲಿನ ಡಾ. ರಾಜಕುಮಾರ ರಸ್ತೆಯ ರಾಬರ್ಟ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ಆವರಣದಲ್ಲಿ ಸೋಮವಾರ ನಡೆದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತಿಹಾಸ ಮತ್ತು ವಸ್ತು ಸಂಗ್ರಹಾಲಯಗಳಿಗೆ ಅವಿನಾಭಾವ ಸಂಬಂಧ ಹೊಂದಿದೆ. ಜಿಲ್ಲೆಯಲ್ಲಿನ ರಾಬರ್ಟ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
  ವಿಮರ್ಶಕ ಗಣೇಶ್ ಎನ್. ದೇವಿ ಮಾತನಾಡಿ, ರಾಬರ್ಟ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಹಲವಾರು ಪುರಾತನ ಪಳೆಯುಳಿಕೆಗಳನ್ನು ಸಂಗ್ರಹಿಸಲಾಗಿದ್ದು, ಆಕರ್ಷಣೀಯ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ. ವೈಜ್ಞಾನಿಕತೆಯಿಂದ ನಾವೆಲ್ಲರೂ ಹಿಂದಿನ ಹಾದಿ ಸ್ಮರಿಸಬೇಕು. ತಂತ್ರಜ್ಞಾನ ಬದಲಾದರೂ ಪುರತಾನ ಸಂಸ್ಕ್ರತಿಯ ಜ್ಞಾನ ಬದಲಾಗುವುದಿಲ್ಲ, ಈ ಭಾಗದಿಂದ ಯುವ ಸಂಶೋಧನಾಕಾರರು ರಾಜ್ಯವ್ಯಾಪಿಯಲ್ಲಿ ಹೊರಹೊಮ್ಮಬೇಕು ಎಂದು ಆಶಿಸಿದರು.
  ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ಗೌರವ ನಿರ್ದೇಶಕ ಪ್ರೊ.ರವಿ ಕೋರಿ ಶೆಟ್ಟರ್ ಮಾತನಾಡಿದರು. ಗಣ್ಯರು ದಿ.ಪ್ರೊ.ಪಿ.ಸತ್ಯನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

  See also  ಬೆಂಗಳೂರಲ್ಲಿ 28ರಂದು ಪ್ರತಿಭಟನೆ; ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಜಿ.ಸಾಗರ್ ಹೇಳಿಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts