18.1 C
Bangalore
Saturday, December 7, 2019

ಇಟಗಿ ಭೀಮಾಂಬಿಕೆ ಜಾತ್ರೆ 8ರಂದು

Latest News

ಅಂಗನವಾಡಿಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿ

ಕಾರವಾರ: ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಗಜೇಂದ್ರಗಡ: ಸದ್ಗುಣಗಳ ಸಂಪನ್ನೆ, ಇಷ್ಟಾರ್ಥ ಈಡೇರಿಸುವ ತಾಯಿ, ಬನಶಂಕರಿ ದೇವಿ ಅಂಶಜಳೆನಿಸಿದ ಶಿವಶರಣೆ ಭೀಮಾಂಬಿಕೆ ಮಹಾರಥೋತ್ಸವ ನ. 8ರಂದು ಜರುಗಲಿದೆ.

ನ. 6ರಂದು ಗುಡ್ಡಕ್ಕೆ ಆರತಿ ಬೆಳಗಲಾಗುವುದು. ಪುರಾಣದೊಂದಿಗೆ ಮಾಸಿಕ 424ನೇ ಶಿವಾನುಭವಗೋಷ್ಠಿ ನಡೆಯಲಿದೆ. ನ. 7ರಂದು ಶ್ರೀಚಂದ್ರಾಂಬಿಕಾ ದೇವಿಗೆ ಕುಂಕುಮ ಅಭಿಷೇಕ, ಶ್ರೀ ಭೀಮಾಂಬಿಕಾ ದೇವಿ ಕರ್ತೃ ಗದ್ದುಗೆಗೆ ಅಭಿಷೇಕ, ದೀಪಾವಳಿ ಅಮಾವಾಸ್ಯೆ ಪೂಜೆ ನಡೆಯಲಿದೆ. ನ. 8ರಂದು ಬೆಳಗ್ಗೆ ಶ್ರೀ ಧರ್ಮಮೂರ್ತಿ ಮೆರವಣಿಗೆ, ಸಂಜೆ 5ಕ್ಕೆ ಶ್ರೀ ಗುರು ಧರ್ಮದೇವರ ಮಹಾರಥೋತ್ಸವ ಜರುಗಲಿದೆ.

ಧರ್ಮದೇವತೆ ಭೀಮಾಂಬಿಕೆ: ಶಿವಶರಣೆಯಾಗಿ ಭಕ್ತರನ್ನು ಉದ್ಧರಿಸಿದ ಮಹಾಮಾತೆ ಇಟಗಿ ಭೀಮವ್ವ ಧರ್ಮರ ವಂಶಕ್ಕೆ ಸೇರಿದ್ದ ಸೋಮಣ್ಣ ಹಾಗೂ ಹನುಮವ್ವ ದಂಪತಿ ಮೂರನೇ ಸುಪುತ್ರಿ. ಹನುಮವ್ವಗೆ ಸಕ್ರಪ್ಪ, ಅರ್ಜುನ ಎಂಬ ಇಬ್ಬರು ಪುತ್ರರು ಇದ್ದರು. ಆದರೆ, ಹೆಣ್ಣು ಮಗು ಪಡೆಯಬೇಕೆಂಬ ಅಪೇಕ್ಷೆಯಿಂದ ತಾಯಿ ಹನುಮವ್ವ ಅವರು ಬಾದಾಮಿಯ ಅಧಿದೇವತೆ ಬನಶಂಕರಿಯನ್ನು ಪೂಜಿಸಿದಾಗ ಆಶೀರ್ವಾದ ಫಲವಾಗಿ ಭೀಮಾಂಬಿಕೆ ಜನಿಸಿದಳು ಎನ್ನುವ ಪ್ರತೀತಿಯಿದೆ.

ಬಾಲ್ಯದಲ್ಲೇ ತಾಯಿ ಹನುಮಾಂಬಿಕೆಯ ಪೂಜಾ ಕಾರ್ಯಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ಭೀಮಾಂಬಿಕೆ ಅಧ್ಯಾತ್ಮದತ್ತ ಒಲವು ಬೆಳೆಸಿಕೊಂಡಳು. ಹುಟ್ಟಿದ ಕೂಸು ತಾಯಿ ಹಾಲು ಬಯಸುವುದು ಸಹಜ. ಆದರೆ, ಭೀಮಾಂಭಿಕೆ ಅನ್ನ ಸೇವಿಸಿ ಅರಗಿಸಿಕೊಂಡವಳು. ಇದು ಎಲ್ಲರಲ್ಲಿ ಅಚ್ಚರಿ ಮೂಡಿಸಿತ್ತು. ಸಕಲ ಜೀವಗಳು ಸಂತೋಷವಾಗಿರಲಿ ಎಂದು ಬೇಡಿಕೊಳ್ಳುತ್ತಿದ್ದ ಭೀಮಾಂಬಿಕೆ ದಾರಿ ತಪ್ಪಿ ನಡೆದರೆ ಆಪತ್ತು ತಪ್ಪಿದ್ದಲ್ಲ, ಸನ್ಮಾರ್ಗದಲ್ಲಿ ನಡೆದರೆ ಮನುಷ್ಯನನ್ನು ಉತ್ತುಂಗಕ್ಕೆ ಒಯ್ಯಲಿದೆ ಎನ್ನುವ ತತ್ತ್ವನ್ನು ಜಗತ್ತಿಗೆ ಸಾರಿದಳು.

ಅಧ್ಯಾತ್ಮದಲ್ಲಿ ತೊಡಗಿದ್ದ ಭೀಮಾಂಬಿಕೆ ಸಂಸಾರ ಸೆಳೆತದಿಂದ ದೂರವಿದ್ದಳು. ಆದರೆ, ಸೋದರಮಾವ ನಿಡಗುಂದಿಕೊಪ್ಪದ ಬಿಲ್ಲಾರ ಬುಡ್ಡಪ್ಪನ ಮಗ ವಗೆದಾಡೆಪ್ಪನ ಜೊತೆ ಮದುವೆ ಪ್ರಸ್ತಾಪ ಬಂದಾಗ ನಿರಾಸಕ್ತಿ ತೋರಿದರು. ಹಿರಿಯರ ಒತ್ತಾಯಕ್ಕೆ ಮಣಿದು ಮದುವೆಯಾಗಿ ಕೊಪ್ಪ ಗ್ರಾಮಕ್ಕೆ ಬಂದಳು. ಗಂಡನ ಮನೆ ಸೇರಿದರೂ ಪ್ರತಿದಿನ ಧರ್ಮನ ಪೂಜಾ ಸಮಯಕ್ಕೆ ಇಟಗಿ ಗ್ರಾಮದಲ್ಲಿ ಪ್ರತ್ಯಕ್ಷವಾಗುತ್ತಿದ್ದಳು. ಅದನ್ನು ಕಂಡ ನಿಡಗುಂದಿ, ಇಟಗಿ ಗ್ರಾಮಸ್ಥರು ಆಕೆಯಲ್ಲಿ ಪ್ರೇತ-ಭೂತವಿದೆ ಎಂದು ಶಂಕಿಸತೊಡಗಿದರು.

ಧರ್ಮದೇವತೆಗೆ ಪರೀಕ್ಷೆ: ಪವಾಡಮೂರ್ತಿ ಭೀಮಾಂಬಿಕೆ ಬಗೆಗೆ ನಿಡಗುಂದಿಕೊಪ್ಪದ ಹನುಮಪ್ಪ ಪೂಜಾರ, ಶಿರಪ್ಪ ಅವರು ಟೀಕಾಪ್ರಹಾರ ನಡೆಸಿದ್ದರು. ಅದನ್ನರಿತ ಭೀಮಾಂಬಿಕೆ ‘ಮೂರು ದಿನಕ್ಕೆ ಶಿರಪ್ಪನ ಹಗ್ಗ ಹರಿಯುತ್ತದೆ’ ಎಂದಿದ್ದರು. ಮೂರು ದಿನಕ್ಕೆ ಶಿರಪ್ಪ ಮೃತಪಟ್ಟನು. ಶಿರಪ್ಪನ ಸಾವಿಗೆ ಭೀಮಮ್ಮನೇ ಕಾರಣ ಎಂದು ಜನತೆ ಮಾತನಾಡತೊಡಗಿದರು. ಈ ಸಂದರ್ಭದಲ್ಲಿ ಬಂದ ಭೀಮಾಂಬಿಕೆ ಶಿರಪ್ಪನ ಶವದ ಹತ್ತಿರ ನಿಂತು ನಿನ್ನ ಸಾವಿಗೆ ಕಾರಣ ಯಾರು ಹೇಳು ಎಂದಾಗ ಶವವಾಗಿದ್ದ ಶಿರಪ್ಪ ಎದ್ದು ನನ್ನ ಸಾವಿಗೆ ನನ್ನಲ್ಲಿರುವ ಅಹಂಕಾರವೇ ಕಾರಣ. ಭೀಮಾಂಬಿಕೆ ಭೂತ-ಪ್ರೇತವಲ್ಲ. ದೈವಿಶಕ್ತಿಯುಳ್ಳವಳು ಎಂದು ಹೇಳಿ ಕೊನೆಯುಸಿರೆಳೆದನು ಎಂಬ ಪ್ರತೀತಿಯಿದೆ.

ಪತಿ ಪ್ಲೇಗ್ ರೋಗಕ್ಕೆ ಬಲಿಯಾದ ಬಳಿಕ ವಿರಕ್ತಳಾಗಿ ದೇವರ ಆರಾಧನೆಯಲ್ಲಿ ತೊಡಗಿದ ಭೀಮಾಂಬಿಕೆ ಸಂಕಷ್ಟ ಎಂದು ಬರುವ ಭಕ್ತರನ್ನು ಉದ್ಧರಿಸಿದಳು. ಬರಗಾಲ ಬಂದಾಗ ಜನರನ್ನು ರಕ್ಷಿಸಿದಳು.

ಭಕ್ತರ ಇಷ್ಟಾರ್ಥ ಸಿದ್ಧಿಯ ಗದ್ದುಗೆ: ಭೀಮಾಂಬಿಕೆ ಅಗೋಚರವಾಗಿದ್ದು, ನಂಬಿ ಬಂದ ಭಕ್ತರ ಇಷ್ಟಾರ್ಥ ಪೂರೈಸುತ್ತಾಳೆಂಬ ನಂಬಿಕೆಯಿದೆ. ಹೀಗಾಗಿ ಭಕ್ತ ಸಮೂಹವೇ ಗದ್ದುಗೆಯತ್ತ ಹರಿದು ಬರುತ್ತದೆ. ಹಿಂದು-ಮುಸ್ಲಿಂ ಭೇದ-ಭಾವವಿಲ್ಲದೇ ಜಗನ್ಮಾಥೆಯನ್ನು ಆರಾಧಿಸುತ್ತಾರೆ. ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿ ದೇವಸ್ಥಾನದಲ್ಲಿ ತೆಂಗಿನಕಾಯಿ ಕಟ್ಟುತ್ತಾರೆ. ಮಕ್ಕಳಾಗದವರು ಬಂದು ಇಲ್ಲಿನ ತೊಟ್ಟಿಲಿಗೆ ಕಾಯಿ ಕಟ್ಟಿ ತೂಗಿದರೆ ಸಂತಾನ ಭಾಗ್ಯ ಲಭಿಸುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

ಸಂಗಟಿ ತಿಂದರೆ ಸಂಕಟ ದೂರ: ಇಟಗಿಯ ಶ್ರೀ ಭೀಮಾಂಬಿಕೆ ದರ್ಶನಕ್ಕೆ ಬರುವ ಭಕ್ತರು ನೀಡಿದ ಜೋಳವನ್ನು ನುಚ್ಚು ಮಾಡಿ ಸಂಗಟಿ ಸಾರು ದಾಸೋಹ ನಡೆಸಲಾಗುತ್ತದೆ. ಇಲ್ಲಿನ ಸಂಗಟಿ ತಿಂದರೆ ಸಂಕಟ ದೂರಾಗುತ್ತದೆ ಎನ್ನುವ ನಂಬಿಕೆ ಇದೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಅಮಾವಾಸ್ಯೆಯಂದು ಜನದಟ್ಟಣೆ ಹೆಚ್ಚಿರುತ್ತದೆ.

ಆಚಾರ-ವಿಚಾರಗಳ ಸದ್ಗುಣಗಳ ಸಂಪನ್ನೆ ಇಟಗಿಯ ಶ್ರೀ ಭೀಮಾಂಬಿಕೆ ದೇವಸ್ಥಾನ ಇಂದಿಗೂ ಜಾಗೃತ ದೇಗುಲ. ಪವಾಡಗಳನ್ನು ಮಾಡಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದಾಳೆ. ಹಾಗಾಗಿ ಅಸಂಖ್ಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

| ಇಸ್ಮಾಯಿಲ್ ಹೊರಪೇಟಿ, ಇಟಗಿ ಗ್ರಾಮಸ್ಥ

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...