Friday, 16th November 2018  

Vijayavani

Breaking News

ಇಂದು ಭಾರತ-ಲಂಕಾ 2ನೇ ಏಕದಿನ

Thursday, 13.09.2018, 2:03 AM       No Comments

ಗಾಲೆ: ಭಾರತ ಹಾಗೂ ಶ್ರೀಲಂಕಾ ಮಹಿಳಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ಗುರುವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ 9 ವಿಕೆಟ್​ಗಳಿಂದ ಜಯ ದಾಖಲಿಸಿರುವ ಮಿಥಾಲಿ ರಾಜ್ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ 300 ವಿಕೆಟ್ ಕಬಳಿಸಿರುವ ಜೂಲಾನ್ ಗೋಸ್ವಾಮಿ ಸಾರಥ್ಯದ ಬೌಲಿಂಗ್ ಪಡೆ ಮತ್ತೊಮ್ಮೆ ಆತಿಥೇಯ ತಂಡಕ್ಕೆ ಕಂಟಕವಾದರೂ ಅಚ್ಚರಿಯಿಲ್ಲ. ಒಂದು ಪಂದ್ಯ ಬಾಕಿ ಇರುವಾಗಲೇ ಪ್ರವಾಸಿ ತಂಡ ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿದೆ. ಸ್ಮೃತಿ ಮಂದನಾ ಮೊದಲ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್​ನಿಂದ ಗಮನಸೆಳೆದಿದ್ದು, ಮುಂಬರುವ ಟಿ20 ಸರಣಿಗೂ ಭರ್ಜರಿ ಸಿದ್ಧತೆ ಕೈಗೊಂಡಿದ್ದಾರೆ. ಅನುಭವಿ ಹಾಗೂ ಸ್ಟಾರ್ ಆಟಗಾರ್ತಿಯರ ಒಳಗೊಂಡ ಭಾರತ ತಂಡ ಮತ್ತೊಂದು ಸುಲಭ ಜಯದ ನಿರೀಕ್ಷೆಯಲ್ಲಿದೆ.

Leave a Reply

Your email address will not be published. Required fields are marked *

Back To Top