Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಇಂದು-ನಾಳೆ ಅಮಿತ್ ಷಾ ರಾಜ್ಯ ಪ್ರವಾಸ

Tuesday, 09.01.2018, 3:01 AM       No Comments

ಬೆಂಗಳೂರು: ಪ್ರತಿ ಬಾರಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸುತ್ತಿದ್ದಾರೆ ಎಂದಾಗ ಚಳಿಯಲ್ಲೂ ಬೆವರುತ್ತಿದ್ದ ರಾಜ್ಯ ಬಿಜೆಪಿ ಮುಖಂಡರು, ಮಂಗಳವಾರದ ಸಭೆಗೆ ಸ್ವಲ್ಪ ಆತ್ಮವಿಶ್ವಾಸದಿಂದಲೇ ತಯಾರಿ ನಡೆಸಿದ್ದಾರೆ.

224 ವಿಧಾನಸಭಾ ಕ್ಷೇತ್ರಗಳಿಗೂ ಉಸ್ತುವಾರಿಗಳನ್ನು ಆಗಸ್ಟ್​ನಲ್ಲಿ ಬಂದಿದ್ದಾಗಲೆ ಷಾ ನೇಮಿಸಿದ್ದರು. ಆದರೆ ನಮ್ಮ ರಾಜಕಾರಣವೇ ಸಾಕು ಎಂದು ರಾಜ್ಯ ನಾಯಕರು ತಮ್ಮ ಪಾಡಿಗೆ ತಾವಿದ್ದರು. ಜ.31ರ ಸಭೆಯಲ್ಲಿ ಈ ಕುರಿತು ಕೆಲವರನ್ನು ಎದ್ದು ನಿಲ್ಲಿಸಿ ಪ್ರಶ್ನಿಸಿ ಎಲ್ಲ ಜನಪ್ರತಿನಿಧಿಗಳಿಗೆ ಚುರುಕು ಮುಟ್ಟಿಸಿದ್ದರು.

ಇದೀಗ, ರಾಜ್ಯದ ಶೇ.99 ಉಸ್ತುವಾರಿಗಳು ಕ್ಷೇತ್ರ ಪ್ರವಾಸ ಮಾಡಿ ಬೂತ್ ಸಮಿತಿ ಹಾಗೂ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ. ಭಾನುವಾರ ಯೋಗಿ ಆದಿತ್ಯನಾಥ ಕಾರ್ಯಕ್ರಮ ಇದ್ದುದರಿಂದ ಬೆಂಗಳೂರು ಭಾಗದ ಕೆಲ ಶಾಸಕರು ಪ್ರವಾಸ ಮಾಡಿರಲಿಲ್ಲ. ಇವರು ಸೋಮವಾರ ತಮ್ಮ ಕೆಲಸ ಮುಗಿಸಿದ್ದಾರೆ. ಕೆಲ ಉಸ್ತುವಾರಿಗಳು 3-4 ಭೇಟಿಯನ್ನೂ ಮಾಡಿದ್ದು, ವಿಶ್ವಾಸದಿಂದ ವರದಿ ನೀಡುವ ನಂಬಿಕೆಯಿದೆ ಎಂದು ಬಿಜೆಪಿ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಉತ್ತರ-ದಕ್ಷಿಣ ಪ್ರತ್ಯೇಕ: ವಿಭಿನ್ನ ರಾಜಕೀಯ, ಸಾಮಾಜಿಕ ವಾತಾವರಣ ಹೊಂದಿರುವ ಉತ್ತರ ಹಾಗೂ ದಕ್ಷಿಣ ಕರ್ನಾಟಕಕ್ಕೆ ಪ್ರತ್ಯೇಕವಾಗಿಯೇ ಚುನಾವಣಾ ತಂತ್ರ ರೂಪಿಸಲು ಬಿಜೆಪಿ ನಿರ್ಧರಿಸಿದೆ. ಈ ಹಿಂದೆಯೂ ಅನೇಕ ಬಾರಿ ಉತ್ತರ ಮತ್ತು ದಕ್ಷಿಣದ ಪದಾಧಿಕಾರಿಗಳ ಪ್ರತ್ಯೇಕ ಸಭೆ ನಡೆಸಲಾಗಿತ್ತು. ಮಂಗಳವಾರ ಷಾ ಸಂಜೆ 4.45ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಯಲಹಂಕ ರಸ್ತೆಯ ಖಾಸಗಿ ಹೋಟೆಲ್​ನಲ್ಲಿ 5ರಿಂದ 8 ಗಂಟೆವರೆಗೆ ಹಾಗೂ 8ರಿಂದ 10.30ರವರೆಗೆ ಎರಡು ಸಭೆ ನಡೆಸಲಿದ್ದಾರೆ.

ಜನಪ್ರತಿನಿಧಿಗಳು, ಜಿಲ್ಲಾ ಸಂಚಾಲಕರು, ವಿಧಾನಸಭಾ ಕ್ಷೇತ್ರ ಉಸ್ತುವಾರಿಗಳು ಮತ್ತು ಸಂಚಾಲಕರ ಜತೆ ರ್ಚಚಿಸಲಿದ್ದಾರೆ. ಮೊದಲಿಗೆ ಉತ್ತರ ಕರ್ನಾಟಕ, ನಂತರ ದಕ್ಷಿಣ ಕರ್ನಾಟಕ ಭಾಗದ ಸಭೆ ನಡೆಯಲಿದೆ. ರಾತ್ರಿ ಹೋಟೆಲ್​ನಲ್ಲೇ ವಾಸ್ತವ್ಯ ಹೂಡಿ, ಬೆಳಗ್ಗೆ ಹೊಳಲ್ಕೆರೆಯಲ್ಲಿ ನಡೆಯುವ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಯಡಿಯೂರಪ್ಪ ಸೇರಿ ಕೆಲ ಪ್ರಧಾನ ಕಾರ್ಯದರ್ಶಿಗಳು ಚಿತ್ರದುರ್ಗ ಪ್ರವಾಸದಲ್ಲಿರುವ ಕಾರಣ ಸಭೆಗೆ ಗೈರಾಗಲಿದ್ದಾರೆ.

Leave a Reply

Your email address will not be published. Required fields are marked *

Back To Top