ಇಂದು ತೆರೆಗೆ ಶ್ರೀನಿವಾಸ ಕಲ್ಯಾಣ

ಟ್ರೇಲರ್ ಮೂಲಕ ನಿರೀಕ್ಷೆ ಸೃಷ್ಟಿಸಿರುವ ‘ಶ್ರೀನಿವಾಸ ಕಲ್ಯಾಣ’ ಚಿತ್ರ ಇಂದು (ಫೆ. 24) ತೆರೆಕಾಣುತ್ತಿದೆ. ಭರತ್ ಜೈನ್ ನಿರ್ವಣದ ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜತೆಗೆ ನಾಯಕನಾಗಿಯೂ ಎಂ. ಜಿ. ಶ್ರೀನಿವಾಸ್ ಅಭಿನಯಿಸಿದ್ದಾರೆ. ಅವರಿಗೆ ಜೋಡಿಯಾಗಿ ನಿಖಿಲಾ ರಾವ್ ಮತ್ತು ಕವಿತಾ ಬಣ್ಣ ಹಚ್ಚಿದ್ದಾರೆ. ಮಿಥುನ್ ಮುಕುಂದನ್ ಹಾಗೂ ರಘು ತಾಣೆ ಸಂಗೀತ ನೀಡಿದ್ದು, ಅಶ್ವಿನ್ ಕಡಂಬೂರ್ ಛಾಯಾಗ್ರಹಣ ಮಾಡಿದ್ದಾರೆ. ವಿಶೇಷ ಪಾತ್ರದಲ್ಲಿ ಹುಚ್ಚ ವೆಂಕಟ್ ಅಭಿನಯಿಸಿದ್ದಾರೆ. ವಿಕ್ರಮ್ ಶ್ರೀಧರ್ (ಸಂಕಲನ), ಭೂಷಣ್ (ನೃತ್ಯ ಮುಂತಾದವರು ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.

Leave a Reply

Your email address will not be published. Required fields are marked *