ಇಂದು ಕಾವೇರಿ ಮಾತೆ ರಥೋತ್ಸವ, ತೆಪ್ಪೋತ್ಸವ

ಕೆ.ಆರ್.ಸಾಗರ: ತುಲಾ ಸಂಕ್ರಮಣದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ತಲಾಕಾವೇರಿಯಲ್ಲಿ ತೀರ್ಥೋದ್ಭವ ನಡೆಯಲಿದ್ದು, ಶುಕ್ರವಾರ ಕೆ.ಆರ್.ಸಾಗರದ ಬೃಂದಾವನದಲ್ಲಿಯೂ ಕಾವೇರಿ ಮಾತೆಗೆ ವಿಶೇಷ ಪೂಜೆ, ಹೋಮ, ರಥೋತ್ಸವ ಹಾಗೂ ತೆಪ್ಪೋತ್ಸವ ನಡೆಯಲಿದೆ. ಮಧ್ಯಾಹ್ನ 12.15 ರಿಂದ 1.15 ರೊಳಗೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಕಾವೇರಿ ಮಾತೆಯ ಉತ್ಸವಮೂರ್ತಿಯ ರಥೋತ್ಸವ ನಡೆಯಲಿದೆ ಎಂದು ಕಾವೇರಿ ಮಾತೆಯ ದೇವಸ್ಥಾನದ ಅರ್ಚಕ ಪ್ರಸನ್ನಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *