Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಇಂದಿನಿಂದ ಭಾರತ-ಆಫ್ಘನ್ ಟೆಸ್ಟ್

Thursday, 14.06.2018, 3:03 AM       No Comments

ಬೆಂಗಳೂರು: ಒಂದೆಡೆ ರಷ್ಯಾದಲ್ಲಿ ಫಿಫಾ ವಿಶ್ವಕಪ್ ಫುಟ್​ಬಾಲ್​ಗೆ ಅದ್ಧೂರಿ ಚಾಲನೆ ಸಿಗಲಿದ್ದರೆ, ಇನ್ನೊಂದೆಡೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವ ನಂ.1 ಟೀಮ್ ಇಂಡಿಯಾ ಹಾಗೂ ಕ್ರಿಕೆಟ್​ನಲ್ಲಿ ಅಂಬೆಗಾಲಿಡುತ್ತಿರುವ ಅಫ್ಘಾನಿಸ್ತಾನ ತಂಡಗಳ ನಡುವಿನ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯವೂ ಗುರುವಾರವೇ ಆರಂಭವಾಗಲಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಹೋರಾಟಕ್ಕೆ ಸಜ್ಜಾಗಿರುವ ಅಜಿಂಕ್ಯ ರಹಾನೆ ಸಾರಥ್ಯದ ಭಾರತಕ್ಕೆ ಮುಂಬರುವ ಮಹತ್ವದ ಇಂಗ್ಲೆಂಡ್ ಪ್ರವಾಸಕ್ಕಿದು ಪೂರ್ವ ತಯಾರಿ ವೇದಿಕೆಯಾದರೆ, ಟೆಸ್ಟ್​ಗೆ ಪದಾರ್ಪಣೆ ಮಾಡಲಿರುವ ಅಫ್ಘಾನಿಸ್ತಾನಕ್ಕಿದು ಹಲವು ಅಂಶಗಳಿಂದ ವಿಶೇಷತೆಗಳಿಂದ ಕೂಡಿರುವ ಪಂದ್ಯವಾಗಿದೆ.

ಇತ್ತೀಚೆಗಷ್ಟೆ ಐಸಿಸಿ ಟೆಸ್ಟ್ ಮಾನ್ಯತೆ ಪಡೆದ ಅಫ್ಘಾನಿಸ್ತಾನ ಈಗಾಗಲೆ ಟಿ20 ಮತ್ತು ಏಕದಿನ ಕ್ರಿಕೆಟ್​ನಲ್ಲಿ ದೊಡ್ಡ ಮಟ್ಟದ ಯಶಸ್ಸು ಸಂಪಾದಿಸಿದೆ. ಇನ್ನೀಗ ಕ್ರಿಕೆಟ್​ನ ಅತ್ಯುನ್ನತ ಹಾಗೂ ಸಾಂಪ್ರದಾಯಿಕ ಮಾದರಿ ‘ಟೆಸ್ಟ್’ನಲ್ಲಿ ಆರಂಭಿಕ ಹೆಜ್ಜೆ ಇಡುವ ಸಮಯ. ಹೀಗಾಗಿ ಬರೋಬ್ಬರಿ 521 ಟೆಸ್ಟ್ ಪಂದ್ಯಗಳನ್ನಾಡಿ 144 ಗೆಲುವು ಕಂಡಿರುವ ಭಾರತಕ್ಕೆ ಅನುಭವದ ವಿಚಾರದಲ್ಲಿ ಅಫ್ಘಾನಿಸ್ತಾನ ತಂಡ ಏನೂ ಅಲ್ಲ. ಆದರೆ ಕಳೆದೆರಡು ವರ್ಷಗಳಿಂದ ಆಫ್ಘನ್ ಕ್ರಿಕೆಟಿಗರು ಸುಧಾರಿಸಿರುವ ರೀತಿ ನೋಡಿದರೆ ಭಾರತ ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕು. ಅಕಸ್ಮಾತ್ ಆಫ್ಘನ್ ಡ್ರಾ ಫಲಿತಾಂಶ ಸಾಧಿಸಿದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೆ ಇಲ್ಲ. ಹೀಗಾಗಿ ಸ್ಪರ್ಧಾತ್ಮಕ ಪಿಚ್ ಎನಿಸಿಕೊಂಡಿರುವ ಚಿನ್ನಸ್ವಾಮಿಯಲ್ಲಿ ಭಾರತ ಎಲ್ಲಾ ವಿಭಾಗಗಳಲ್ಲೂ ಸಾಕಷ್ಟು ಎಚ್ಚರಿಕೆಯಿಂದ ಹೋರಾಡಬೇಕಿದೆ.

ರಹಾನೆಗೆ ಟೀಮ್ ಕಟ್ಟಬೇಕಾದ ಸವಾಲು: ಕಳೆದೆರಡು ತಿಂಗಳು ಐಪಿಎಲ್ ಕ್ರಿಕೆಟ್​ನಲ್ಲೆ ಮುಳುಗಿದ್ದ ಭಾರತದ ಆಟಗಾರರಿಗೆ ಟೆಸ್ಟ್ ಕ್ರಿಕೆಟ್​ನ ಯಥಾಸ್ಥಿತಿಗೆ ಮರಳುವ ಸಮಯ. ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದ ಸುದೀರ್ಘ ಅವಧಿಯ ಸರಣಿ ಆರಂಭಿಸಲಿರುವ ಭಾರತಕ್ಕೆ ಆಟಗಾರರನ್ನು ಲಯಕ್ಕೆ ಮರಳಿಸಲು ಹಾಗೂ ಟೆಸ್ಟ್ ಕ್ರಿಕೆಟ್​ನ ಅಗ್ರಮಾನ್ಯ ತಂಡವೆಂಬ ಪ್ರತಿಷ್ಠೆಯಿಂದಾಗಿ ಮಹತ್ವದ ಪಂದ್ಯ. ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಪ್ರವಾಸದ ಸರಣಿ 1-2ರಿಂದ ಸೋತರೂ ಕೊನೇ ಪಂದ್ಯ ಗೆದ್ದಿರುವುದು ಭಾರತದ ಗಮನಾರ್ಹ ನಿರ್ವಹಣೆ. ತವರಿನಲ್ಲಿ ಕಳೆದ ವರ್ಷಾಂತ್ಯದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ಸರಣಿ ಜಯಿಸಿದ ಭಾರತ ತವರಿನ ಸತತ 9 ಸರಣಿ ಗೆಲುವಿನ ದಾಖಲೆ ಕಾಯ್ದುಕೊಳ್ಳುವ ಯೋಜನೆಯಲ್ಲಿದೆ. ಗಾಯಗೊಂಡಿರುವ ಕೊಹ್ಲಿ ವಿಶ್ರಾಂತಿಯಲ್ಲಿದ್ದು, ಅವರ ಬದಲು ರಹಾನೆ ಬ್ಯಾಟಿಂಗ್ ಫಾಮರ್್​ನೊಂದಿಗೆ ತಂಡವನ್ನು ಯಶಸ್ಸಿಯಾಗಿ ಮುನ್ನಡೆಸಬೇಕಾದ ಜವಾಬ್ದಾಯಿದೆ. ಇಂಗ್ಲೀಷ್ ಕೌಂಟಿ ಮುಗಿಸಿ ಮರಳಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ, ವೇಗಿ ಇಶಾಂತ್ ಕಣಕ್ಕಿಳಿಯಲಿದ್ದರೆ, ಗಾಯಾಳು ವೃದ್ಧಿಮಾನ್ ಸಾಹ ಬದಲು ಇತ್ತೀಚೆಗೆ ಸ್ಥಿರ ಫಾಮರ್್​ನಲ್ಲಿರುವ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಮಾಡಲಿದ್ದು,ಅವರಿಗೆ 2010ರ ಬಳಿಕ ಮೊದಲ ಪಂದ್ಯವಾಗಿರಲಿದೆ.

4 – ಅಫ್ಘಾನಿಸ್ತಾನದ ರಶೀದ್ ಖಾನ್ ಈವರೆಗೂ 4 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, ಎಲ್ಲ ಪಂದ್ಯಗಳಲ್ಲೂ ಐದು ವಿಕೆಟ್ ಸಾಧನೆ ಮಾಡಿದ್ದಾರೆ.

6 – 2013ರ ಜನವರಿಯಿಂದ ಭಾರತ ತಂಡ ತವರಿನಲ್ಲಿ ಒಟ್ಟು 26 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಕೇವಲ 6 ಟೆಸ್ಟ್ ಪಂದ್ಯಗಳಲ್ಲಿ ಮಾತ್ರವೇ ಗೆಲುವು ಕಾಣಲು ವಿಫಲವಾಗಿದೆ. 1 ಸೋಲು ಹಾಗೂ 5 ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಕಂಡಿದೆ.

ಆಫ್ಘನ್​ಗೆ ಕನಸಿನ ಟೆಸ್ಟ್

ರಾಜಕೀಯವಾಗಿ ಭಾರತದೊಂದಿಗೆ ಸದಾ ಸೌಹಾರ್ದತೆಯಲ್ಲಿರುವ ಆಫ್ಘನ್​ಗೆ ಕ್ರಿಕೆಟ್ ಮೂಲಕ ಸ್ನೇಹ ಇನ್ನಷ್ಟು ಗಟ್ಟಿಗೊಳಿಸಲೊಂದು ವೇದಿಕೆ. ಬಿಸಿಸಿಐ ಬೆಂಬಲದೊಂದಿಗೆ ಈಗಾಗಲೆ ಭಾರತದ ನೆಲದಲ್ಲೆ ಕ್ರಿಕೆಟ್ ಸೌಲಭ್ಯ ಪಡೆದು ಸಜ್ಜಾಗಿರುವ ಆಫ್ಘನ್ ಸ್ವಾಭಾವಿಕವಾಗಿ ಭಾರತದ ಎಲ್ಲಾ ಪಿಚ್​ಗಳು ಸ್ಪಿನ್ ಸ್ನೇಹಿಯಾಗಿರುವುದರಿಂದಲೆ ಸ್ಪಿನ್ ಸೆನ್ಸೇಶನ್ ರಶೀದ್ ಖಾನ್, ಮುಜೀಬ್ ರೆಹಮಾನ್ ಸೇರಿದಂತೆ ನಾಲ್ವರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಬ್ಯಾಟಿಂಗ್​ನಲ್ಲಿ ಸ್ಪೋಟಕ ಬ್ಯಾಟ್ಸ್​ಮನ್ ಶೆಹಜಾದ್, ಸ್ಟಾನಿಕ್​ಜೈ ಹಾಗೂ ಆಲ್ರೌಂಡರ್ ಮೊಹಮದ್ ನಬಿ ಪ್ರವಾಸಿ ಪಡೆಯ ಪ್ರಮುಖ ಸ್ಟಾರ್ಸ್. ಐಪಿಎಲ್​ನಲ್ಲಿ ಕೊಹ್ಲಿ, ಎಬಿಡಿ ವಿಲಿಯರ್ಸ್​ರಂಥ ಸ್ಟಾರ್​ಗಳಿಗೆ ಕಂಟಕವಾಗಿದ್ದ ವಿಶಿಷ್ಟ ಶೈಲಿಯ ಸ್ಪಿನ್ನರ್ ರಶೀದ್ ಮ್ಯಾಜಿಕ್ ಇಲ್ಲಿ ಮಾಡಿದರೂ ಅಚ್ಚರಿಯೇನಿಲ್ಲ.

ಸಂಭಾವ್ಯ ತಂಡ

ಭಾರತ: ಅಜಿಂಕ್ಯ ರಹಾನೆ(ನಾಯಕ), ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್(ವಿ.ಕೀ.), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ರವೀಂದ್ರ ಜಡೇಜಾ/ ಕುಲದೀಪ್ ಯಾದವ್, ಇಶಾಂತ್ ಶರ್ಮ, ಉಮೇಶ್ ಯಾದವ್.

ಅಫ್ಘಾನಿಸ್ತಾನ: ಅಸ್ಗರ್ ಸ್ಟಾನಿಕ್​ಜೈ(ನಾಯಕ), ಮೊಹಮದ್ ಶೆಹಜಾದ್, ಜಾವೇದ್ ಅಹ್ಮದಿ, ಇಶಾನುಲ್ಲಾ ಜನತ್, ರೆಹಮತ್ ಶಾಹ್, ಹಶ್​ವುತುಲ್ಲಾ ಶಾಹಿದಿ, ಮೊಹಮದ್ ನಬಿ, ರಶೀದ್ ಖಾನ್, ಜಹೀರ್ ಖಾನ್, ಆಮಿರ್ ಹಮ್ಜಾ, ಮುಜೀಬ್ ರೆಹಮಾನ್.

ಭಾರತ ಎ ತಂಡದ ಪರ ಆಡಲಿರುವ ರಹಾನೆ?

ತಂಡವನ್ನು ಮುನ್ನಡೆಸಲಿದ್ದರೂ ಬ್ಯಾಟಿಂಗ್​ನಲ್ಲಿ ಕಳಪೆ ಫಾಮ್ರ್ ನಲ್ಲಿರುವ ಅಜಿಂಕ್ಯ ರಹಾನೆ ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದ ನಂತರ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ವಿಶೇಷ ಪೂರ್ವ ಸಿದ್ಧತೆಯ ಕುರಿತಾಗಿ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಕೇಳಲು ಮುಂದಾಗಿದ್ದಾರೆ. ಈ ಟೆಸ್ಟ್ ಪಂದ್ಯದ ನಂತರ ಇನ್ನೇನಾಗಲಿದೆ ಎಂದು ನನಗೆ ಗೊತ್ತಿಲ್ಲ. ಆದರೆ ನನ್ನ ಬ್ಯಾಟಿಂಗ್ ಅಭ್ಯಾಸದ ಕುರಿತು ಆಯ್ಕೆಗಾರರಲ್ಲಿ ರ್ಚಚಿಸುತ್ತೇನೆ. ಆದರೆ ಮಂಬೈಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ ಅಭ್ಯಾಸ ಆರಂಭಿಸುವೆ. ಮುಂದಿನ ಪ್ರತಿ ಪಂದ್ಯಕ್ಕೂ ಪೂರ್ವಾಭ್ಯಾಸ ಮಹತ್ವವಾಗಿದೆ ಎಂದು ರಹಾನೆ ಹೇಳಿದ್ದಾರೆ. ಮೂಲಗಳ ಪ್ರಕಾರ ರಹಾನೆ ಇಂಗ್ಲೆಂಡ್ ಪ್ರವಾಸ ಮಾಡಿರುವ ಭಾರತ ಎ ತಂಡದ ಪರ ಆಡುವ ಕುರಿತು ಆಯ್ಕೆಗಾರರಲ್ಲಿ ಮಾತನಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಫ್ಘಾನಿಸ್ತಾನ ವನ್ನು ನಾವು ಹಗುರವಾಗಿ ಪರಿಗಣಿಸುವುದಿಲ್ಲ. ಅವರ ತಂಡದಲ್ಲಿ ವಿಶ್ವದರ್ಜೆಯ ಬೌಲರ್​ಗಳಿದ್ದಾರೆ. ನಾವು ಅವರಿಗೆ ಗೌರವ ಕೊಟ್ಟು, ನಮ್ಮ ಎಂದಿನ ಆಟವನ್ನು ಆಡುತ್ತೇವೆ. ನಮ್ಮ ಅಭ್ಯಾಸ ಕೂಡ ಉತ್ತಮವಾಗಿ ಸಾಗಿದೆ.

| ಅಜಿಂಕ್ಯ ರಹಾನೆ ಭಾರತದ ನಾಯಕ

Leave a Reply

Your email address will not be published. Required fields are marked *

Back To Top