Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಇಂದಿನಿಂದ ಬೆಂಗಳೂರು 9ನೇ ಅಂತಾರಾಷ್ಟ್ರೀಯ ಸಿನಿಮೋತ್ಸವ

Thursday, 02.02.2017, 4:00 AM       No Comments

ಬೆಂಗಳೂರು: ದೇಶ-ವಿದೇಶಗಳ 240ಕ್ಕೂ ಅಧಿಕ ಸಿನಿಮಾಗಳನ್ನು ವೀಕ್ಷಿಸುವ ಅವಕಾಶಕ್ಕೆ 9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ವೇದಿಕೆಯಾಗಲಿದೆ. ಫೆ.9ರವರೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿರುವ ಸಿನಿಮೋತ್ಸವಕ್ಕೆ ಗುರುವಾರ (ಫೆ.2) ಸಂಜೆ 6ಕ್ಕೆ ವಿಧಾನಸೌಧ ಮುಂಭಾಗ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಬಂಗಾಲಿ ಚಲನಚಿತ್ರ ನಿರ್ದೇಶಕ ಬುದ್ಧದೇವ್ ದಾಸಗುಪ್ತಾ, ಈಜಿಪ್ಟ್ ಸಿನಿಮಾ ನಿರ್ದೇಶಕಿ ಹಲಾ ಖಲೀಲ್ ಮತ್ತು ಕನ್ನಡದ ನಟ ಪುನೀತ್ ರಾಜ್​ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬಹುಭಾಷಾ ನಟಿ ಸುಹಾಸಿನಿ ಮಣಿರತ್ನಂ ಮತ್ತು ನಟ, ನಿರ್ದೇಶಕ ರಮೇಶ್ ಅರವಿಂದ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

ಒರಾಯನ್ ಮಾಲ್​ನಲ್ಲಿರುವ ಪಿವಿಆರ್ ಸಿನಿಮಾಸ್​ನ 11 ಪರದೆಗಳಲ್ಲಿ ಮತ್ತು ಮೈಸೂರಿನ ‘ಮಾಲ್ ಆಫ್ ಮೈಸೂರು’ನಲ್ಲಿರುವ ಐನಾಕ್ಸ್​ನ ಸಿನಿಮಾಸ್​ನ 4 ಪರದೆಗಳಲ್ಲಿ ವಿವಿಧ ವಿಭಾಗಗಳಲ್ಲಿ 60 ದೇಶಗಳ ಅತ್ಯುತ್ತಮ 240 ಚಲನಚಿತ್ರಗಳು ಪ್ರದರ್ಶನ ಕಾಣಲಿವೆ. ಸಿನಿಮೋತ್ಸವದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಏಷ್ಯಾ ಖಂಡದ ಸ್ಪರ್ಧೆಯಲ್ಲಿ ಕನ್ನಡದ ‘ಯು ಟರ್ನ್’ ಸೇರಿ 14 ಚಿತ್ರಗಳಿವೆ. ಅನನ್ಯ ಆಪೂರ್ವ ಕಾಸರವಳ್ಳಿ ನಿರ್ದೇಶಿಸಿರುವ ಕನ್ನಡದ ‘ಹರಿಕಥಾ ಪ್ರಸಂಗ’ ಚಿತ್ರ ಸೇರಿ ಒಟ್ಟು 13 ಚಿತ್ರಗಳ ನಡುವೆ ಭಾರತೀಯ ಚಿತ್ರಗಳ ಸ್ಪರ್ಧೆ ನಡೆಯಲಿದೆ.

ಕನ್ನಡ ವಿಭಾಗದಲ್ಲಿ ‘ರಾಮಾ ರಾಮಾ ರೇ’, ‘ಕಿರಗೂರಿನ ಗಯ್ಯಾಳಿಗಳು’ ಸೇರಿ 12 ಸಿನಿಮಾಗಳು ಸ್ಪರ್ಧೆಯಲ್ಲಿವೆ. ಮೊದಲ ಬಾರಿಗೆ ಜನಪ್ರಿಯ ಮನರಂಜನಾ ಚಿತ್ರಗಳ ಸ್ಪರ್ಧೆ ಆಯೋಜಿಸಲಾಗಿದ್ದು, ‘ಕೋಟಿಗೊಬ್ಬ-2’, ‘ಶಿವಲಿಂಗ’, ‘ಮುಂಗಾರು ಮಳೆ 2’, ‘ದೊಡ್ಮನೆ ಹುಡ್ಗ’, ‘ಜಗ್ಗುದಾದಾ’ ಪ್ರದರ್ಶನಗೊಳ್ಳಲಿವೆ. ಈ ಬಾರಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ 30 ಚಿತ್ರಗಳು ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿರುವುದು ವಿಶೇಷ. ಜತೆಗೆ ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ, ಸಿಕ್ಕಿಂ ಇತ್ಯಾದಿ ಸಿನಿಮಾಗಳೂ ಇರಲಿವೆ. ಹಾಗೆ, ವ್ಯಕ್ತಿಚಿತ್ರಗಳು, ಬೇರೆ ಸಿನಿಮೋತ್ಸವಗಳಲ್ಲಿ ಉತ್ತಮ ವಿಮರ್ಶೆಗೆ ಒಳಪಟ್ಟ ಚಿತ್ರಗಳೂ ಕನ್ನಡ ಪ್ರೇಕ್ಷಕರಿಗೆ ದರ್ಶನ ನೀಡಲಿವೆ. ಮಹಿಳಾ ನಿರ್ದೇಶಕರ 25 ಸಿನಿಮಾಗಳಿಗೆ ಉತ್ಸವದಲ್ಲಿ ಅವಕಾಶ ನೀಡಲಾಗಿದೆ.

ವಿಡಿಯೋ ಮ್ಯಾಪಿಂಗ್ ಆಕರ್ಷಣೆ: ಕನ್ನಡ ಚಿತ್ರೋದ್ಯಮ ಇತಿಹಾಸ, ಕಲೆ, ಸಂಸ್ಕೃತಿಯನ್ನು ಮೂಡಿಸುವ ವಿಡಿಯೋ ಮ್ಯಾಪಿಂಗ್ ಈ ಸಲದ ವಿಶೇಷ ಆಕರ್ಷಣೆ. ವಿಧಾನಸೌಧದ ಭವ್ಯ ಹಿನ್ನೆಲೆಯಲ್ಲಿ ಇದನ್ನು ಪ್ರದರ್ಶಿಸಿ, ದೇಶ-ವಿದೇಶಿ ಸಿನಿಗಣ್ಯರನ್ನು ಸೆಳೆಯುವ ಉದ್ದೇಶ ಹೊಂದಲಾಗಿದೆ.

‘ಲಾ ವಾಛೆ’ ಉದ್ಘಾಟನಾ ಚಿತ್ರ

9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಗುರುವಾರ ‘ಲಾ ವಾಛೆ’ ಉದ್ಘಾಟನಾ ಸಿನಿಮಾವಾಗಿ ಪ್ರದರ್ಶನಗೊಳ್ಳಲಿದೆ. ಅರೆಬಿಕ್ ಹಾಗೂ ಫ್ರೆಂಚ್ ಭಾಷೆಯ ಈ ಚಿತ್ರವನ್ನು ಅಲ್ಜೀರಿಯದ ಮಹಮ್ಮದ್ ಹಮಿದಿ ನಿರ್ದೇಶಿಸಿದ್ದಾರೆ. 91 ನಿಮಿಷ ಅವಧಿಯ ಈ ಸಿನಿಮಾದ ಪ್ರದರ್ಶನ ರಾತ್ರಿ 7.45ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಆಯೋಜನೆಗೊಂಡಿದೆ. ಅಂದಹಾಗೆ, ‘ಲಾ ವಾಛೆ’ ಎಂದರೆ ಕನ್ನಡದಲ್ಲಿ ‘ಮನುಷ್ಯ ಹಾಗೂ ಆತನ ಹಸು’ ಎಂದರ್ಥ.

Leave a Reply

Your email address will not be published. Required fields are marked *

Back To Top