ಢವಳಗಿ: ಸಮೀಪದ ಇಂಗಳಗೇರಿಯಲ್ಲಿ ಶ್ರೀ ಗ್ರಾಮದೇವತೆ ಜಾತ್ರೆ ಮೇ 16 ರಿಂದ 20ರವರೆಗೆ ನಡೆಯಲಿದೆ.

ಮೇ 16 ರಂದು ಬೆಳಗ್ಗೆ 6ಗಂಟೆಗೆ ಗ್ರಾಮದೇವತೆಯನ್ನು ಗಂಗಸ್ಥಳಕ್ಕೆ ಕರೆದೊಯ್ಯುವುದು. ಬಳಿಕ ವಿವಿಧ ವಾಧ್ಯಮೇಳಗಳೊಂದಿಗೆ ಗ್ರಾಮದೇವತೆ ಬರಮಾಡಿಕೊಂಡು ರಥದಲ್ಲಿ ಕೂಡಿಸುವುದು. ಬಳಿಕ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 2 ಗಂಟೆಗೆ ದೇವಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವುದು. ರಾತ್ರಿ 10 ಗಂಟೆಗೆ ಮುದ್ದೇಬಿಹಾಳದ ಇಂಚರ ಮೆಲೋಡಿಸ್ ತಂಡದಿಂದ ಹಾಸ್ಯ ರಸಮಂಜರಿ ನಡೆಯಲಿದೆ.
ಮೇ 17 ರಂದು ರಾತ್ರಿ 10 ಗಂಟೆಗೆ ಬಾಗೇವಾಡಿಯ ಬಸವೇಶ್ವರ ನಾಟ್ಯ ಸಂಘದಿಂದ ಶ್ರೀ ರೇಣುಕಾ ಯಲ್ಲಮ್ಮ ಮಹಾತ್ಮ ನಾಟಕ ನಡೆಯಲಿದೆ. ಮೇ 18 ರಂದು ಬೆಳಗ್ಗೆ 9 ಗಂಟೆಗೆ ತೆರಬಂಡಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಸೂಕ್ತ ಬಹುಮಾನ ಇಡಲಾಗಿದೆ. ಸಂಜೆ 8 ಗಂಟೆಗೆ ಸ್ಥಳೀಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ. ಮೇ 19 ರಂದು ಬೆಳಗ್ಗೆ 9 ಗಂಟೆಗೆ ಟ್ರಾೃಕ್ಟರ್ ಹಿಂಬದಿಯ ಬಲ ಪ್ರದರ್ಶನ ನಡೆಯಲಿದ್ದು, ವಿಜೇತರಿಗೆ ಸೂಕ್ತ ಬಹುಮಾನ ಇಡಲಾಗಿದೆ. ಮೇ 20 ರಂದು ಸಂಜೆ 5 ಗಂಟೆಗೆ ಗ್ರಾಮದೇವತೆಯನ್ನು ಡೊಳ್ಳು ವಾಲಗದೊಂದಿಗೆ ದೇವಿ ಮೂಲ ಸ್ಥಳಕ್ಕೆ ಕರೆದೊಯ್ಯಲಾಗುವುದು. ಮಾಹಿತಿಗೆ ಮೊ: 8105999965, 9663559552ಗೆ ಸಂಪರ್ಕಿಸಬಹುದಾಗಿದೆ.