Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಇಂಥ ಸಿಎಂ ಹಿಂದೆ ನೋಡಿಲ್ಲ, ಮುಂದೆ ನೋಡಲ್ಲ

Monday, 08.01.2018, 3:03 AM       No Comments

ಚಿಕ್ಕಮಗಳೂರು: ಸರ್ಕಾರಿ ಯಂತ್ರ ದುರ್ಬಳಕೆ ಮಾಡಿಕೊಂಡ ಇಂತಹ ಮುಖ್ಯಮಂತ್ರಿಯನ್ನು ಹಿಂದೆಂದೂ ನೋಡಿಲ್ಲ, ಮುಂದೆ ನೋಡಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ರೂ. ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿ ಪಕ್ಷಕ್ಕೆ ಮತ ಕೊಡಿ ಎಂದು ಕೇಳುತ್ತಿರುವುದು ಇದೇ ಪ್ರಥಮ ಸಿಎಂ ಎಂದು ಟೀಕಿಸಿದರು.

4.5 ವರ್ಷದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲು ಇವರಿಂದ ಸಾಧ್ಯವಾಗಿಲ್ಲ. ಚುನಾವಣೆಗೆ 120 ದಿನ ಬಾಕಿ ಇರುವಾಗಲೇ ಮಾಡುತ್ತಿರುವುದೇಕೆ? ಈಗಾಗಲೇ 1.46 ಲಕ್ಷ ಕೋಟಿ ರೂ. ಸಾಲ ಮಾಡಿಟ್ಟಿದ್ದಾರೆ. ಮುಂಬರುವ ಸರ್ಕಾರದ ಗತಿ ಏನು ಎಂದು ಪ್ರಶ್ನಿಸಿದರು.

ಕರಾವಳಿಯಲ್ಲಿ ನಾಲ್ಕು ತಿಂಗಳಿಂದೀಚೆಗೆ 6 ಕೊಲೆಯಾಗಿದೆ. ಇಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ ಎಂದ ಗೌಡರು, ಕೆಲ ಮಾಧ್ಯಮಗಳಲ್ಲಿ ಸಮೀಕ್ಷೆಗಳು ಬರುತ್ತಿದ್ದು ಜೆಡಿಎಸ್ 20, 25 ಸ್ಥಾನ ಪಡೆಯುತ್ತದೆಂದು ಹೇಳಿವೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಲ್ಲ. ಸಮೀಕ್ಷೆಗಳನ್ನು ಯಾರೂ ನೆಚ್ಚಿಕೊಳ್ಳಲ್ಲ ಎಂದರು.


 ಗೌಡರ ಆತ್ಮಚರಿತ್ರೆ ಹೆಸರು ‘ಅಗ್ನಿ ದಿವ್ಯ’

ಚಿಕ್ಕಮಗಳೂರು: ‘ಅಗ್ನಿ ದಿವ್ಯ’ ಪುಸ್ತಕದಲ್ಲಿ ನನ್ನ ಹೋರಾಟ, ರಾಜ ಕೀಯವನ್ನು ವೈಎಸ್​ವಿ ದತ್ತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದು ಎಚ್.ಡಿ. ದೇವೇಗೌಡ ಹೇಳಿದರು. ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನನ್ನನ್ನು ನಡು ದಾರಿಯಲ್ಲಿ ಯಾರು ಕೈಬಿಟ್ಟರು ಮುಂತಾದ ಅಂಶಗಳನ್ನು ಪುಸ್ತಕ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ಶಾಸಕ ದತ್ತ ಮಾತನಾಡಿ, ದೇವೇಗೌಡರ ಆತ್ಮಚರಿತ್ರೆಯ ಹೆಸರು ‘ಅಗ್ನಿ ದಿವ್ಯ’. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರ ರೈತರಿಂದ ಪುಸ್ತಕ ಬಿಡುಗಡೆ ಮಾಡಿಸುವ ಇಚ್ಛೆಯಿದೆ. ಪುಸ್ತಕ ಬಿಡುಗಡೆಯಾದ ಮೇಲೆ ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಕು, ತಿರುವು ಸಿಗಲಿದೆ. ರಾಜಕೀಯದಲ್ಲಿ ಏನೇನು ನಡೆಯಿತು, ಸಿದ್ದರಾಮಯ್ಯ ಎಲ್ಲಿದ್ದರು, ನಾವು ಎಲ್ಲಿದ್ದೆವು, ಸೋನಿಯಾ ಗಾಂಧಿ ಎಲ್ಲಿದ್ದರು? ಎಂಬ ಮಾಹಿತಿ ಹೊರಬೀಳಲಿದೆ ಎಂದರು.

ಪಕ್ಷ ಉಳಿಸುವ ಬಯಕೆ

ಆರೋಗ್ಯ ಸರಿ ಇಲ್ಲ. ಹೆಚ್ಚಿನ ಶಕ್ತಿಯೂ ಉಳಿದಿಲ್ಲ. ಪಕ್ಷ ಉಳಿಸ ಲೇಬೇಕೆಂಬ ಬಯಕೆ ನನ್ನದು ಎಂದು ದೇವೇಗೌಡ ಹೇಳಿದರು. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಗನನ್ನು ಸಿಎಂ ಮಾಡುವ ಬಯಕೆ ಮಾತ್ರ ಹೊಂದಿದ್ದಾರೆಂದು ಕೆಲವರು ಟೀಕಿಸು ತ್ತಾರೆ. ಬೆಂಗಳೂರಿನಲ್ಲಿ ನಮ್ಮ ಕಟ್ಟಡದಿಂದ ಹೊರಬಂದ ಮೇಲೆ ಜೆಡಿಎಸ್ ಉಳಿಯುವುದಿಲ್ಲವೆಂದಿದ್ದರು. ದೇವರ ಅನುಗ್ರಹ, ಜನರ ಪ್ರೀತಿಯಿಂದ ಹೊಸ ಕಚೇರಿಗೂ ಬಂದಿದ್ದೇವೆ ಎಂದರು.

ಅತಿರುದ್ರ ಯಾಗಕ್ಕೆ ಪತ್ನಿ ಜತೆ ಆಗಮನ

ಶೃಂಗೇರಿ: ಶ್ರೀ ಶಾರದಾಂಬಾ ಪೀಠದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದಲ್ಲಿ ಪಾಲ್ಗೊಳ್ಳಲು ದೇವೇಗೌಡರು ಪತ್ನಿ ಚನ್ನಮ್ಮ ಅವರೊಂದಿಗೆ ಭಾನುವಾರ ಸಂಜೆ ಆಗಮಿಸಿದರು. ಜ.3ರಂದು ಮಹಾಯಾಗಕ್ಕೆ ಚಾಲನೆ ನೀಡಲಾಗಿತ್ತು. ಅತ್ತೆ ಕಾಳಮ್ಮ ನಿಧನದ ಕಾರಣ ಜ.4ರಂದು ಹಾಸನಕ್ಕೆ ತೆರಳಿದ್ದರು.

Leave a Reply

Your email address will not be published. Required fields are marked *

Back To Top